ಕೊಪ್ಪಳ ಗ್ರಾಮೀಣ ಸಿಪಿಐ ಆಗಿ ಅಧಿಕಾರ ವಹಿಸಿಕೊಂಡ ವಿಶ್ವನಾಥ್ ಹಿರೇಗೌಡರ್ : ಗಂಗಾವತಿ ಗ್ರಾಮೀಣ ವೃತ್ತಕ್ಕೆ ಸಿಪಿಐ ಉದಯರವಿ ವರ್ಗಾವಣೆ

Kannadanet : ಮುಖ್ಯಮಂತ್ರಿ ಪದಕ ಪುರಸ್ಕೃತ ವಿಶ್ವನಾಥ ಹಿರೇಗೌಡ್ರ ಅವರು ಕೊಪ್ಪಳ ಗ್ರಾಮೀಣ ಸಿಪಿಐ ಆಗಿ ಸೋಮವಾರ ಅಧಿಕಾರ ವಹಿಸಿಕೊಂಡರು . ಕುಷ್ಟಗಿ ಪಿಎಸ್‌ಐ ಆಗಿದ್ದ ವಿಶ್ವನಾಥ ಅವರು ಪದೋನ್ನತಿ ಹೊಂದಿ ಗದಗ ಎಸಿಬಿಗೆ ವರ್ಗಾವಣೆ ಆಗಿದ್ದರು . ಇದೀಗ ಮತ್ತೆ ಕೊಪ್ಪಳ ಜಿಲ್ಲೆಗೆ ಬಂದಿದ್ದು , ರವಿ ಉಕ್ಕುಂದ ಅವರು ಅಧಿಕಾರ ಹಸ್ತಾಂತರಿಸಿದರು . ವಿಶ್ವನಾಥ ಹಿರೇಗೌಡ್ರ ಮೂಲತಃ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ರೌಡಕುಂದ ಗ್ರಾಮದವರು ಬಿ.ಎಸ್ಸಿ ಪದವಿ ಒಡೆದಿರುವ ಇವರು 2007 ರಲ್ಲಿ ಪಿಎಸ್‌ಐ ಆಗಿ ಸೇವೆಗೆ ಸೇರಿದ್ದಾರೆ . ಕೊಪ್ಪಳ ಜಿಲ್ಲೆ ಮುನಿರಾಬಾದ್ , ಕುಕುನೂರು ಮತ್ತು ಕುಷ್ಟಗಿ ಪಟ್ಟಣದಲ್ಲಿ ಪಿಎಸ್‌ಐ ಆಗಿ ಕೆಲಸ ಮಾಡಿ , ಸಿಪಿಐ ಆಗಿ 2019 ರಲ್ಲಿ ಬಡ್ತಿ ಹೊಂದಿದ್ದರು . ಕೆಲಸ ಮಾಡಿದ ಎಲ್ಲ ಕಡೆ ಮದ್ಯ ಅಕ್ರಮ ಮಾರಾಟ ತಡೆಯುವಲ್ಲಿ ಯಶಸ್ವಿ ಆಗಿದ್ದರು .

ಗಂಗಾವತಿ ಗ್ರಾಮೀಣ ವೃತ್ತಕ್ಕೆ ಸಿಪಿಐ ಉದಯರವಿ ವರ್ಗಾವಣೆ

ಗಂಗಾವತಿ ಗ್ರಾಮೀಣ ವೃತ್ತಕ್ಕೆ ಸಿಪಿಐ  ಉದಯರವಿ‌ ಅವರನ್ನು ಓಓಡಿ ಆಧಾರದ ಮೇರೆಗೆ ವರ್ಗಾವಣೆ ಮಾಡಿ ಸರ್ಕಾರ‌ ಆದೇಶಿಸಿದೆ.

ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿನ ಡಿಸಿಐಬಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉದಯರವಿ ಅವರನ್ನು ಪೊಲೀಸ್ ಮಹಾ‌ ನಿರ್ದೇಶಕರು ವರ್ಗಾವಣೆ ಮಾಡಿದ್ದಾರೆ. ಸಿಪಿಐ ಸುರೇಶ ತಳವಾರ ಅವರು ಕಂಪ್ಲಿಗೆ ವರ್ಗಾವಣೆ ಆಗಿದ್ದರಿಂದ ಸ್ಥಾನ ತೆರವಾಗಿತ್ತು. ಉದಯರವಿ ಅವರು ಈ ಹಿಂದೆ ಗಂಗಾವತಿ ವೃತ್ತ ವ್ಯಾಪ್ತಿಯ ಕನಕಗಿರಿ ಮತ್ತು ಕಾರಟಗಿ ಪೊಲೀಸ್ ಠಾಣೆಯ ಪಿಎಸ್ಐ ಆಗಿ ಕರ್ತವ್ಯ‌‌ ನಿರ್ವಹಿಸಿದ್ದಾರೆ. ಅಲ್ಲದೇ ಗಂಗಾವತಿ ನಗರ ಠಾಣೆ ಪಿಐ ಆಗಿಯೂ ಕೆಲಸ ಮಾಡಿದ್ದಾರೆ. ಇನ್ನು ಕಳೆದ 2018ರ ವಿಧಾನಸಭೆ ಚುನಾವಣೆಗೂ ಮೊದಲೇ ಗಂಗಾವತಿ ಗ್ರಾಮೀಣ ವೃತ್ತಕ್ಕೆ ಸಿಪಿಐ ಆಗಿ ವರ್ಗಾವಣೆಗೊಂಡಿದ್ದ ಉದಯರವಿ ಅವರು ಕೊನೆ ಕ್ಷಣದಲ್ಲಿ ಗಂಗಾವತಿ ನಗರ ಠಾಣೆ ಪಿಐ ಆಗಿ ನಿಯುಕ್ತಿಗೊಂಡಿದ್ದರು.

Please follow and like us:
error