ಕೊಪ್ಪಳದಲ್ಲಿ ಶ್ರೀ ದುರ್ಗಾದೇವಿ ಮೂರ್ತಿ ಮೆರವಣಿಗೆ

ಕೊಪ್ಪಳ ನಗರದ ಪಲ್ಲೇದರ ಓಣಿಯಲ್ಲಿ ನವರಾತ್ರಿ ಉತ್ಸವ ಅಂಗವಾಗಿ  ಶ್ರೀ ದುರ್ಗಾದೇವಿ ಮೂರ್ತಿ ಮೆರವಣಿಗೆಯು ಶ್ರೀ ಪಾಂಡುರಂಗ ದೇವಸ್ಥಾನದಿಂದ ಆರಂಭಗೊಂಡ ವಿವಿಧ ಬಾಜಾ ಭಜಂತ್ರಿಯೊಂದಿಗೆ ಗಡಿಯಾರ ಕಂಭದ ಮಾರ್ಗವಾಗಿ ಶ್ರೀ ಬಸವೇಶ್ವರ ದೇವಸ್ಥಾನವನ್ನು ತಲುಪಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು ಈ ಒಂದು ಮೆರವಣಿಗೆಯನ್ನು ಜಿಲ್ಲಾ ಪಂಚಾಯತಿ ಸದಸ್ಯರಾದ ಗವಿಸಿದ್ದಪ್ಪ ಕರಡಿ ಚಾಲನೆ ನೀಡಿದ್ದರು ಮತ್ತು ಮಾಜಿ ಶಾಸಕರಾದ ಕೆ ಬಸವರಾಜ ಹಿಟ್ನಾಳ. ನಗರಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ.ರಾಜೇಶ್ ಮಂಗಳಾಪುರು.ಬಸವರಾಜ ಪಲೇದ.ಮಲ್ಲಿಕಾರ್ಜುನ ಸಜ್ಜನ ಕೂಡ ಮೆರವಣಿಗೆಯಲ್ಲಿ ಭಾಗವಹಿಸಿದ ಈ ಸಮಿತಿ ಅಧ್ಯಕ್ಷರಾದ ಗವಿಸಿದ್ದಪ್ಪ ಜಂತಕಲ್ ಮಾತನಾಡಿ ನವರಾತ್ರಿ ಉತ್ಸವ ಸಮಿತಿ ವತಿಯಿಂದ ಈ ವರ್ಷ ಕೋವಿಡ್-19 ಇರುವುದರಿಂದ ಸರಳವಾಗಿ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಹಾಗೂ ಕೊವಿಡ್-19 ನಿರ್ವಹಣೆ ಜಗತ್ತಿನಲ್ಲಿ ನಿರ್ವಹಣೆ ತಾಯಿ ಚಾಮುಂಡೇಶ್ವರಿ ಮಾಡಲೆಂದು ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು

 

Please follow and like us:
error