ಕೊಪ್ಪಳಕ್ಕೆ ಕರಾಳ ಬುಧವಾರ : 13 ಸಾವು, 147 ಪಾಜಿಟಿವ್

ಕನ್ನಡನೆಟ್ ನ್ಯೂಸ್ ಕೊಪ್ಪಳ: ಇಂದು ಕೊಪ್ಪಳ ಜಿಲ್ಲೆಗೆ ಕರಾಳ ಬುಧವಾರ ಎಂದೇ ಹೇಳಬಹುದು. ಇಂದು ಒಂದೇ ದಿನ 13 ಜನ ಮೃತಪಟ್ಟಿದ್ದರೆ 147 ಪಾಜಿಟಿವ್ ಕೇಸ್ ಗಳು ಬಂದಿವೆ. ಒಂದೆ ದಿನ 13 ಜನ ಮೃತಪಡುವುದರೊಂದಿಗೆ ಜಿಲ್ಲೆಯಲ್ಲಿ ಕರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ. ಇಂದು 147 ಕೇಸ್ ಗಳು ಪಾಜಿಟಿವ್ ಬರುವುದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 2959 ಪಾಜಿಟಿವ್  ಪ್ರಕರಣಗಳು ಬಂದಂತಾಗಿದೆ. ಅಲ್ಲದೇ ಇಂದು 333 ಜನರನ್ನು ಡಿಸ್ಚಾರ್ಜ ಮಾಡಲಾಗಿದೆ. ಇದರೊಂದಿಗೆ ಒಟ್ಟು ಡಿಸ್ಚರ್ಜ ಆದವರ ಸಂಖ್ಯೆ 1695ಕ್ಕೆ ಏರಿಕೆಯಾಗಿದೆ. 859 ಜನ ಹೋಂ ಐಸೋಲೇಷನ್ ನಲ್ಲಿದ್ದಾರೆ. ಗಂಗಾವತಿ 44, ಕೊಪ್ಪಳ 79,ಕುಷ್ಟಗಿ 17, ಯಲಬುರ್ಗಾ 7 ಪ್ರಕರಣಗಳು ವರದಿಯಾಗಿವೆ. ಇಂದು ಬಂದಿರುವ 147 ಪಾಜಿಟಿವ್ ಕೇಸ್ ಗಳಲ್ಲಿ ಪೋಲಿಸರು, ಅಧಿಕಾರಿಗಳು ಹಾಗೂ ಆರೋಗ್ಯ ಕಾರ್ಯಕರ್ತರೂ ಸಹ ಸೇರಿದ್ದಾರೆ. ಇನ್ನೂ 2459 ಜನರ ವರದಿ ಬರುವುದು  ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಹೇಳಿದ್ದಾರೆ.

Please follow and like us:
error