ಕೇಂದ್ರ ಬಜೆಟ್ 2021-22: ಮುಖ್ಯಾಂಶಗಳು

  • ► ಕೈಗೆಟುಕುವ ಮನೆ ಖರೀದಿಸಲು ಸಿಗುವ 1.5 ಲಕ್ಷ ರೂ. ಸಾಲ ಸೌಲಭ್ಯ ಇನ್ನೂ ಒಂದು ವರ್ಷ ವಿಸ್ತರಣೆ
  • ►ಆದಾಯ ತೆರಿಗೆಯಲ್ಲಿ ಯಾವುದೆ ಬದಲಾವಣೆ ಇಲ್ಲ►ಕೋವಿಡ್ ಸೆಸ್ ವಿಧಿಸದಿರಲು ನಿರ್ಧಾರ
  • ►ಪಿಂಚಣಿ ಮತ್ತು ಬಡ್ಡಿಯ ರೂಪದ ಆದಾಯ ಮಾತ್ರ ಇರುವ ಹಿರಿಯ ನಾಗರಿಕರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಾಗಿಲ್ಲ
  • ►ಜಿಎಸ್ ಟಿಯನ್ನು ಇನ್ನಷ್ಟು ಸರಳೀಕರಿಸಲು  ಕ್ರಮ
  • ►5 ಕೋಟಿ ವಹಿವಾಟಿನ ಚಾರಿಟೇಬಲ್ ಟ್ರಸ್ಟ್ ಗೆ ತೆರಿಗೆ ವಿನಾಯಿತಿ
  • ►ಅಸಂಘಟಿತ ಕಾರ್ಮಿಕರ ಮಾಹಿತಿ ಸಂಗ್ರಹಕ್ಕೆ ಪೋರ್ಟಲ್ ಆರಂಭಕ್ಕೆ ಚಿಂತನೆ
  • ►ಒಂದೇ ದೇಶ,ಒಂದೇ ರೇಶನ್ ಕಾ‍ರ್ಡ್ ಪರಿಕಲ್ಪನೆ ಜಾರಿಗೆ
  • ►ಕನಿಷ್ಠ ಬೆಂಬಲ ಬೆಲೆ ನಿಲ್ಲಿಸಿಲ್ಲ, ಖರೀದಿ ಪ್ರಕ್ರಿಯೆ ಮುಂದುವರಿಕೆ
  • ►ಡಿಜಿಟಲ್ ಪಾವತಿಗಳ ಪ್ರಚಾರಕ್ಕಾಗಿ 1500 ಕೋ.ರೂ.
  • ►ಅಸ್ಸಾಂ ಹಾಗೂ ಬಂಗಾಳದ ಚಹಾ ಕಾರ್ಮಿಕರಿಗೆ 1,500 ಕೋ.ರೂ.
  • ►ಕೃಷಿ ಸಾಲ ಗುರಿಯನ್ನು 16.5 ಲಕ್ಷ ಕೋ.ಗೆ ಹೆಚ್ಚಿಸಲು ವಿತ್ತ ಸಚಿವರ ಪ್ರಸ್ತಾವ
  • ►ಐದು ಪ್ರಮುಖ ಮೀನುಗಾರಿಕೆ ಕೇಂದ್ರಗಳ ಅಭಿವೃದ್ಧಿ ಘೋಷಣೆ
  • ►ರಾಷ್ಟ್ರೀಯ ಶಿಕ್ಷಣ ನೀತಿಯಡಿ 15,000ಕ್ಕೂ ಅಧಿಕ ಶಾಲೆಗಳನ್ನು ಗುಣಾತ್ಮಕವಾಗಿ ಬಲಪಡಿಸಲು ಚಿಂತನೆ
  • ► ಉಚಿತ ಅಡುಗೆ ಅನಿಲ ಎಲ್ ಪಿಜಿ ಉಜ್ವಲ ಯೋಜನೆಯನ್ನು 1 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ವಿಸ್ತರಣೆ
  • ► ಹಣಕಾಸು ಸಂಸ್ಥೆಗಳ ಅಭಿವೃದ್ದಿಗೆ 20,000 ಕೋ.ರೂ.
  • ► 2021-22ರಲ್ಲಿ ಎಲ್ ಐಸಿಯಲ್ಲಿ ಐಪಿಒ, ಇದಕ್ಕಾಗಿ ಅಗತ್ಯ ತಿದ್ದುಪಡಿ.
  • ►ರೈಲ್ವೆಗಾಗಿ 1,10,055 ಕೋ.ರೂ.ದಾಖಲೆ ಹಣ
  • ►4,378 ನಗರ ಸ್ಥಳೀಯ ಸಂಸ್ಥೆಗಳಿಗೆ 2.87 ಲಕ್ಷ ಕೋಟಿ.ರೂ. ವಿನಿಯೋಗದೊಂದಿಗೆ ‘ಜಲ್ ಜೀವನ್ ಮಿಷನ್’ ಘೋಷಣೆ
  • ► ಪಿಎಂ ಆತ್ಮನಿರ್ಭರ್ ಸ್ವಸ್ತ್ ಭಾರತ್ ಯೋಜನೆಯು 6 ವರ್ಷಗಳಲ್ಲಿ ಸುಮಾರು 64,180 ಕೋಟಿಗಳಷ್ಟು ವಿನಿಯೋಗದೊಂದಿಗೆ ಪ್ರಾರಂಭ: ನಿರ್ಮಲಾ ಸೀತಾರಾಮನ್.

  • ► ರೈಲ್ವೇಗೆ 1.10 ಲಕ್ಷ ಕೋಟಿ ರೂ. ವಿನಿಯೋಗದ ಘೋಷಣೆ. ಇದರಲ್ಲಿ 1.7 ಲಕ್ಷ ಕೋ.ರೂ. ಬಂಡವಾಳ ವೆಚ್ಚವಾಗಿರುತ್ತದೆ.
  • ಬೆಂಗಳೂರು ಮೆಟ್ರೋಗೆ 14 ಸಾವಿರ ಕೋ.ರೂ. ಅನುದಾನ
  • ಬೆಂಗಳೂರಿನಲ್ಲಿ 58 ಕಿ.ಮೀ. ಹೊಸ ಮೆಟ್ರೋ ರೈಲು ಮಾರ್ಗಕ್ಕೆ 14,778 ಕೋ.ರೂ. ಅನುದಾನ ಘೋಷಣೆ
  • ► ಜಮ್ಮು-ಕಾಶ್ಮೀರದಲ್ಲಿ ಗ್ಯಾಸ್ ಪೈಪ್ ಲೈನ್ ಯೋಜನೆ
  • ► ಮುಂದಿನ 3 ವರ್ಷಗಳಲ್ಲಿ ಇನ್ನೂ 100 ನಗರಗಳನ್ನು ಅನಿಲ ವಿತರಣಾ ಜಾಲಕ್ಕೆ ಸೇರ್ಪಡೆ ಮಾಡಲಾಗುವುದು.
  • ►ಸರಕಾರಿ ಬಸ್ ಗಳಿಗೆ ಕೇಂದ್ರ ಸರಕಾರದಿಂದ 18,000 ಕೋ.ರೂ ನೆರವು
  • ►ವಿದ್ಯುತ್ ಕ್ಷೇತ್ರಕ್ಕೆ 3.05 ಲಕ್ಷ ಕೋಟಿ ರೂ. ವಿನಿಯೋಗ
  • ►ಜವಳಿ ಉದ್ಯಮಕ್ಕೆ ಮೆಗಾ ಜವಳಿ ಪಾರ್ಕ್ ಯೋಜನೆ ಘೋಷಣೆ
  • ►17,000 ಗ್ರಾಮೀಣ ಆರೋಗ್ಯ ಕೇಂದ್ರಗಳ ಸ್ಥಾಪನೆ
  • ►ತಮಿಳುನಾಡು, ಕೇರಳ, ಪಶ್ಚಿಮಬಂಗಾಳ ಹಾಗೂ ಅಸ್ಸಾಂ ನಲ್ಲಿ ಹೆದ್ದಾರಿಗಳ ಯೋಜನೆ ಘೋಷಣೆ
  • ►ಪಶ‍್ಚಿಮಬಂಗಾಳದಲ್ಲಿ 25,000 ಕೋ.ರೂ. ವೆಚ್ಚದ 675 ಕಿ.ಮೀ.ಹೆದ್ದಾರಿ ಕಾಮಗಾರಿ ಘೋಷಣೆ
  • *ಮೂಲಸೌಕರ್ಯ ಪೈಪ್ ಲೈನ್ ಯೋಜನೆ ಅಡಿ 1 ಲಕ್ಷ ಕೋಟಿ ಮೊತ್ತದ 217 ಯೋಜನೆಗಳು ಪೂರ್ಣಗೊಂಡಿವೆ.
  • *ಕೋವಿಡ್-19 ಲಸಿಕೆಗಳಿಗೆ 35,000 ಕೋಟಿ ರೂ. ಘೋಷಣೆ
  • * ದೇಶದ ಮೇಲೆ ಪರಿಣಾಮಬೀರುವ ವಿಪತ್ತುಗಳ ದೃಷ್ಟಿಯಿಂದ ಈ ಬಜೆಟ್ ಅನ್ನು ಹಿಂದೆಂದೂ ಕಂಡು ಕೇಳರಿಯದಂಥ, ವಿಶೇಷ ಸನ್ನಿವೇಶದಲ್ಲಿ ಸಿದ್ಧಪಡಿಸಲಾಗಿದೆ ಎಂದ ನಿರ್ಮಲಾ ಸೀತಾರಾಮನ್
  • * ಬಜೆಟ್ ಮಂಡನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ.  ಇನ್ನುಕೆಲವೆ ಕ್ಷಣಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರನೇ ಬಾರಿ ಬಜೆಟ್ ಮಂಡಿಸಲಿದ್ದಾರೆ.
  • *ಕೋವಿಡ್-19 ಕಾರಣದಿಂದಾಗಿ ಇದೇ ಮೊದಲ ಬಾರಿ ಬಜೆಟ್ ಅನ್ನು ಕಾಗದರಹಿತವಾಗಿ ಮಂಡಿಸಲಾಗುತ್ತಿದೆ. ಬಜೆಟ್ ಪ್ರತಿ ಆನ್ ಲೈನ್ ನಲ್ಲಿ ಹಾಗೂ ಆ್ಯಪ್ ನಲ್ಲಿ ಲಭ್ಯವಾಗಲಿದೆ.
  • * ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕಾಂಗ್ರೆಸ್ ಸಂಸದರಾದ ಜಸ್ಬೀರ್ ಸಿಂಗ್ ಗಿಲ್ ಹಾಗೂ ಗುರ್ಜೀತ್ ಸಿಂಗ್ ಕಪ್ಪು ನಿಲುವಂಗಿ ಧರಿಸಿ ಸಂಸತ್ತಿನೊಳಗೆ ಪ್ರವೇಶಿಸಿದರು
  • varthabharati
Please follow and like us:
error