ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಇನ್ಫೋಸಿಸ್‌ ನ ಸಾವಿರಾರು ಉದ್ಯೋಗಿಗಳು

ಹೊಸದಿಲ್ಲಿ, ನ.5: ಭಾರತದ ಐಟಿ ಕ್ಷೇತ್ರದ ಪ್ರಮುಖ ಸಂಸ್ಥೆ ಇನ್ಫೋಸಿಸ್  ತನ್ನ ಮಧ್ಯಮ ಹಂತದ ಹಾಗೂ ಮೇಲಿನ ಹಂತದ ಸಾವಿರಾರು ಉದ್ಯೋಗಿಗಳನ್ನು ಕೈಬಿಡುವ ಸುಳಿವು ನೀಡಿದೆ. ಕಂಪೆನಿಯ ಸಹಾಯಕ ಉಪಾಧ್ಯಕ್ಷರು, ಉಪಾಧ್ಯಕ್ಷರು, ಹಿರಿಯ ಉಪಾಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಉಪಾಧ್ಯಕ್ಷರು ಹುದ್ದೆಗಳನ್ನು ಹೊಂದಿರುವ 971 ಮಂದಿಯ ಪೈಕಿ  ಸುಮಾರು 50 ಮಂದಿ ತಮ್ಮ ಹುದ್ದೆಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ಸೀನಿಯರ್ ಮ್ಯಾನೇಜರ್ ಗಳಿರುವ ಜಾಬ್ ಲೆವೆಲ್ 6ರಲ್ಲಿ ಕಂಪೆನಿ ಶೇ 10ರಷ್ಟು ಉದ್ಯೋಗಿಗಳನ್ನು ಅಂದರೆ 2,200ರಷ್ಟು ಮಂದಿಯನ್ನು ಕೆಲಸದಿಂದ ಕೈಬಿಡಲಿದೆ. ಜಾಬ್ ಲೆವೆಲ್ 6,7 ಹಾಗೂ 8ರಲ್ಲಿ ಕಂಪೆನಿಯಲ್ಲಿ 30,092 ಉದ್ಯೋಗಿಗಳಿದ್ದಾರೆ.

ಜಾಬ್ ಲೆವೆಲ್ 3 ಅಥವಾ ಅದಕ್ಕಿಂತ ಕೆಳಗಿನ ಹಂತಗಳು ಹಾಗೂ ಜಾಬ್ ಲೆವೆಲ್ 4 ಹಾಗೂ 5ರಲ್ಲಿ ಕಂಪೆನಿ ಶೇ 2ರಿಂದ ಶೇ 5ರಷ್ಟು ಮಂದಿಗೆ ಪಿಂಕ್ ಸ್ಲಿಪ್ ನೀಡುವ ಸಾಧ್ಯತೆಯಿದ್ದು, ಒಟ್ಟಾರೆ ಈ ಹಂತದ  4,000ದಿಂದ 10,000ದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬಹುದು.

ಐಟಿ ಉದ್ಯಮದಲ್ಲಿ ಸಾಮಾನ್ಯವಾಗಿ ನಡೆಸುವ ಪ್ರಕ್ರಿಯೆಯಂಗವಾಗಿ ಲೇ ಆಫ್ ನಡೆಯುತ್ತಿದೆ  ಎಂದು ಕಂಪೆನಿ ಹೇಳಿಕೊಂಡರೂ ಇತ್ತೀಚಿಗಿನ ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಇನ್ಫೋಸಿಸ್ ಲೇ-ಆಫ್ ಮಾಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

Please follow and like us:
error