ಕೆರೆ ತುಂಬಿಸುವುದಷ್ಟೇ ಅಲ್ಲ, ಸ್ವಚ್ಛವಾಗಿಡುವುದೂ ಮುಖ್ಯ- ಆರ್.ವಿ‌‌.ಗುಮಾಸ್ತೆ

Koppal ನಮ್ಮಿಂದ ಯಾವುದಾದರೂ ಕಟ್ಟುವ ಕೆಲಸ ಮಾಡಿದರೆ ಅದೇ ಸಾರ್ಥಕತೆ. ಅಸಾಧ್ಯ ಎಂದುಕೊಂಡು ಬಿಟ್ಟರೆ ಏನನ್ನೂ ಯಾವುದೇ ಕೆರೆಗಳನ್ನು ತುಂಬಿಸಲು , ಅಭಿವೃದ್ದಿಗೊಳಿಸಲು ಸಾಧ್ಯ ಎಂದು ಕಿರ್ಲೋಸ್ಕರ್ ಕಂಪನಿಯ ಎಂಡಿ ಆರ್.ವಿ.ಗುಮಾಸ್ತೆ ಹೇಳಿದರು. ಗಿಣಿಗೇರಾ ಗ್ರಾಮದ ಕೆರೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೆರೆಗೆ ನೀರು ತುಂಬಿಸುವದಷ್ಟೇ ಅಲ್ಲ ಅದನ್ನು ಸ್ವಚ್ಛವಾಗಿಡುವುದು ಮುಖ್ಯ. ಎಂದು ಹೇಳಿದರಲ್ಲದೇ ವಿಜಯಪುರ ಜಿಲ್ಲೆಯಲ್ಲಿ ತಮ್ಮ ಸ್ವತಃ ಊರಿನಲ್ಲಿ ಕೆರೆ ಅಭಿವೃದ್ದಿ ಮಾಡಿದ ಕುರಿತು ಹಾಗೂ ಶ್ರೀಲಂಕಾದಲ್ಲಿ ಕಂಡ ಕೆರೆಗಳ ಕುರಿತು ಅನುಭವ ಹಂಚಿಕೊಂಡ ಅವರು ಈ ನಿಟ್ಟಿನಲ್ಲಿ ಈ ಭಾಗದ ಎಲ್ಲ ಪ್ಯಾಕ್ಟರಿಗಳವರು ನಿಮ್ಮ ಜೊತೆ ತನುಮನ ಧನದೊಂದಿಗೆ ಸಹಾಯ ಮಾಡುತ್ತೇವೆ ಎಂದು ಹೇಳಿದರು.

Please follow and like us:
error