ಕೃಷಿ ಅಭಿಯಾನದಲ್ಲಿ ಲಕ್ಷಾಂತರ ಲೂಟಿ- ರಾಮಣ್ಣ ಉಪ್ಪಾರ

Koppal ಕುಷ್ಟಗಿ ತಾಲೂಕಿನ ಸಹಾಯಕ ಕೃಷಿ ಅಧಿಕಾರಿ ವಿರೇಶ ಕಮತರ ವೆಡ್ಸ್ ಮ್ಯಾನ್ ಪವರ್ ಏಜೆನ್ಸಿ ಚೇರಮನ್ ವಿ.ಚಕ್ರಪಾಣಿ ಜೊತೆಗೂಡಿ ₹ ೧ ಲಕ್ಷ ೫೦ ಸಾವಿರ ರಷ್ಟು ಸರ್ಕಾರದ ಹಣ ಲೂಟಿ ಮಾಡಿದ್ದಾರೆ ಅಂತ ಕರವೇ ಯುವಸೈನ್ಯದ

ರಾಜಾಧ್ಯಕ್ಷ ರಾಮಣ್ಣ ಉಪ್ಪಾರ, ಸಂಘಟನೆಯ ಸಂಸ್ಥಾಪಕ ಕೆ ಎಸ್ ಕೊಡತಗೇರಿ ಆರೋಪಿಸಿದ್ದಾರೆ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿ, ರೈತರ ಅನುಕೂಲವಾಗಬೇಕಾದ ಹಣವನ್ನು ಕೃಷಿ ಅಭಿಯಾನ ಯೋಜನೆಯಡಿ ಕೊಟ್ಟಿ ಬಿಲ್ಲು ಸೃಷ್ಟಿಸಿ ಹಣ ಲೂಟಿ ಮಾಡಿದ್ದಾರೆ. ಕುಷ್ಟಗಿ ತಾಲೂಕಿನ ಹನುಮಸಾಗರ, ಹನುಮನಾಳದಲ್ಲಿ ನಡೆಸಿದ ಅಭಿಯಾನದ ಬಿಲ್ಲುಗಳು ಕೊಟ್ಟಿಯಾಗಿದ್ದು, ಈಗಾಗಲೇ ಕೃಷಿ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಅಲ್ದೆ ಈ ಕುರಿತು ವೆಡ್ಸ್ ಮ್ಯಾನ್ ಪವರ್ ಏಜೆನ್ಸಿ ಚೇರಮನ್ ವಿ. ಚಕ್ರಪಾಣಿ ಅವರನ್ನು ವಿಚಾರಿಸಿದರೆ ಶಾಸಕರಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಮುಲು ನೀಡಬೇಕು ಸ್ಥಳೀಯ ಸಂಘಟನೆಗಳಿಗೆ ನೀಡಬೇಕು ಅಂತ ಹೇಳುತ್ತಾರೆ ಅಂತ ಆರೋಪಿಸಿ ರಾಮಣ್ಣ ಉಪ್ಪಾರ ತಮ್ಮ ಮೊಬೈಲ್ ನಲ್ಲಿ‌ ಸೆರೆಹಿಡಿದ ಸಂಭಾಷಣೆ ವಿಡಿಯೋವನ್ನು ತೋರಿಸಿದರು. ಇಷ್ಟೇ ಅಲ್ದೆ ಐಡಬ್ಲೂಎಂಪಿ-೪ ಕಾಮಗಾರಿಗಳ ಯೋಜನೆಡಿಯಲ್ಲಿ ಕೋಟ್ಯಂತರ ಭ್ರಷ್ಟ ನಡೆದಿದೆ, ಕೂಡಲೇ ಮೇಲಾಧಿಕಾರಿಗಳು ಇದರ ತನಿಖೆ ನಡೆಸಿ ಕುಷ್ಟಗಿ ತಾಲೂಕಿನ ಕೃಷಿ ಇಲಾಖೆಯಲ್ಲಿ‌ ನಡೆಯುತ್ತಿರುವ ಭ್ರಷ್ಟಚಾರಕ್ಕೆ ಕಡಿವಾಣ ಹಾಕಬೇಕು ಅಧಿಕಾರಿ ವಿರೇಶ ಕಮತರ ಹಾಗೂ ವಿ.ಚಕ್ರಪಾಣಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಕ್ರಮಕೈಗೊಳ್ಳಬೇಕು ಅಂತ ಒತ್ತಾಯಿಸಿದರು.

Please follow and like us:
error