ಕೂಕನಪಳ್ಳಿ ಗ್ರಾಮದಲ್ಲಿ ಪ್ರತಿ ಶುಕ್ರವಾರ ಕುರಿ ಹಾಗೂ ದನದ ಸಂತೆ ನಡೆಸಲು ಜಿಲ್ಲಾಧಿಕಾರಿ ಆದೇಶ

ಕೊಪ್ಪಳ ಜು. : : ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಪ್ರತಿ ಶುಕ್ರವಾರ ಕುರಿ ಹಾಗೂ ದನದ ಸಂತೆಯನ್ನು ನಡೆಸಲು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
2014ರ ಮೇ. 16 ರಂದು ಚುನಾವಣೆ ಫಲಿತಾಂಶದ ನಂತರ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಹಾಗೂ ವನಬಳ್ಳಾರಿ ಗ್ರಾಮಸ್ಥರ ನಡುವೆ ಆಗಿರುವ ಗಲಭೆಯ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವರದಿಯ ಆದಾರದ ಮೇರೆಗೆ ಕಾನೂನು ಮತ್ತು ಸೂವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರತಿ ಶುಕ್ರವಾರದ ಬೂದಗುಂಪಾ ಗ್ರಾಮದಲ್ಲಿ ಹಾಗೂ ಪ್ರತಿ ಬುಧವಾರ ಕೂಕನಪಳ್ಳಿ ಗ್ರಾಮದಲ್ಲಿ ಕುರಿ ಹಾಗೂ ದನದ ಸಂತೆಯನ್ನು ನಡೆಸಲು ಆದೇಶವನ್ನು ಹೊರಡಿಸಲಾಗಿತ್ತು.  2018ರ ಸೆಪ್ಟೆಂಬರ್. 17 ರಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತç ಸಚಿವರ ಅಧ್ಯಕ್ಷತೆಯಲ್ಲಿ ಸಂಭೆಯನ್ನು ಕೈಗೊಂಡು ಸದ್ಯ ಕೂಕನಪಳ್ಳಿ ಹಾಗೂ ವನಬಳ್ಳಾರಿ ಈ ಎರಡು ಗ್ರಾಮಗಳಲ್ಲಿ ಶಾಂತಿಯುತ ವಾತಾವರಣ ಇರುವುದರಿಂದ ಕುರಿ ಹಾಗೂ ದನದ ಸಂತೆಯನ್ನು ಕೂಕನಪಳ್ಳಿ ಹಾಗೂ ಬುದಗುಂಪಾ ಕ್ರಾಸ್ ಎರಡು ಗ್ರಾಮಗಳಲ್ಲಿ ಒಂದೇ ದಿನ ಅಂದರೆ ಪ್ರತಿ ಶುಕ್ರವಾರ ಸಂತೆಯನ್ನು ನಡೆಸಲು ನಿರ್ಣಯಿಸಲಾಗಿರುತ್ತದೆ. ಹಾಗೂ ಈ ಕುರಿತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಕೊಪ್ಪಳ ಮತ್ತು ಗಂಗಾವತಿ ಶಾಸಕರೊಂದಿಗೆ ಸ್ಥಳ ತನಿಖೆ ನಡೆಸಿ ಕೂಕನಪಳ್ಳಿ ಹಾಗೂ ಬುದಗುಂಪಾ ಕ್ರಾಸ್ ಎರಡು ಕಡೆ ಒಂದೇ ದಿನ ಅಂದರೆ ಪ್ರತಿ ಶುಕ್ರವಾರ ಸಂತೆಯನ್ನು ನಡೆಸಲು ಅಭಿಪ್ರಾಯ ವ್ಯಕ್ತವಾಗಿದೆ.
2018ರ ಸೆಪ್ಟೆಂಬರ್. 17 ರಂದು ನಡೆದ ಸಭೆಯ ನಿರ್ಣಯದಂತೆ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ಕೂಕನಪಳ್ಳಿ ಹಾಗೂ ಬುದಗುಂಪಾ ಕ್ರಾಸ್ ಎರಡು ಗ್ರಾಮಗಳಲ್ಲಿ ಒಂದೇ ದಿನ (ಪ್ರತಿ ಶುಕ್ರವಾರ) ಕುರಿ ಹಾಗೂ ದನದ ಸಂತೆಯನ್ನು ನಡೆಸುವುದು ಸೂಕ್ತವೆಂದು ಕಂಡುಬಂದ ಪ್ರಯುಕ್ತ ಈ ಆದೇಶ ಹೊರಡಿಸಲಾಗಿದೆ

Please follow and like us:
error