ಕುಷ್ಟಗಿ  ಟೋಲ್ ಗೇಟ್ ನಲ್ಲಿ ಸುಟ್ಟುಭಸ್ಮವಾದ ಲಾರಿ

ಕುಷ್ಟಗಿ ತಾಲೂಕಿನ ವಣಗೇರಿ ಗ್ರಾಮದ ಹತ್ತಿರವಿರುವ ಟೋಲಗೇಟಿನಲ್ಲಿ ನಿಂತ ಲಾರಿಯಲ್ಲಿ ಆಕಸ್ಮಿಕ ಬೆಂಕಿಯಿಂದಾಗಿ ಲಾರಿಯ ಕ್ಯಾಬಿನ್ ಸಂಪುರ್ಣ ಭಸ್ಮವಾಗಿದೆ.
ಕುಷ್ಟಗಿ ತಾಲೂಕಿನ ವಣಗೇರಾ ಗ್ರಾಮದ ಹತ್ತಿರವಿರುವ ಟೋಲ್ ಗೇಟ್ನಲ್ಲಿ ನಿಂತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಲಾರಿಯ ಕ್ಯಾಬಿನ್ ಸಂಪೂರ್ಣ ಭಸ್ಮವಾದ ಘಟನೆ ಇಂದು ಮದ್ಯಾಹ್ನ ನಡೆದಿದೆ. ಕೊಪ್ಪಳ ತಾಲೂಕಾ ಗಿಣಗೇರಾದಿಂದ ಮಹಾರಾಷ್ಟ್ರದ ಸಾಂಗ್ಲಿಗೆ ಸಿಮೆಂಟ್ ಲೋಡ್ ತೆಗೆದುಕೊಂಡು ಹೋಗುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಲಾರಿಯ ಕ್ಯಾಬಿನ್ ಸಂಪೂರ್ಣವಾಗಿ ಕರಕಲಾಗಿರುವ ಘಟನೆ ಇಂದು ಮದ್ಯಾಹ್ನ 1-30ಕ್ಕೆ ಈ ಘಟನೆ ನಡೆದಿದೆ. ಲಾರಿಯ ಚಾಲಕ ಟೋಲ್ ಗೇಟಿನಲ್ಲಿ ಹಣ ಪಾವತಿಸಲೆಂದು ಲಾರಿ ನಿಲ್ಲಿಸಿದಾಗ ಲಾರಿಯ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಚಾಲಕನ ಗಮನಕ್ಕೆ ಬಂದಿರುವುದಿಲ್ಲ ಬೆಂಕಿ ಹತ್ತಿದ್ದನ್ನು ಗಮನಿಸಿದ ಟೋಲಗೇಟ್ ಸಿಬ್ಬಂದಿಯು ಜೋರಾಗಿ ಬೆಂಕಿ ಹತ್ತಿದೆ ಕೆಳಗಿಳಿಯಿರಿ ಎಂದು ಕೂಗಿ ಹೇಳಿದ್ದಾನೆ. ತಕ್ಷಣವೇ ಲಾರಿಯ ಚಾಲಕ ಹಾಗೂ ಕ್ಲೀನರ್ ಲಾರಿಯಿಂದ ಕೆಳಗೆ ಜಿಗಿದು ಅಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ಆರ್ಭಟಕ್ಕೆ ಇಡೀ ಕ್ಯಾಬಿನ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಚಾಲಕನ ಮೊಬೈಲ್ ಡ್ರೈವಿಂಗ್ ಲೈಸನ್ಸ್ ಇನ್ನಿತರ ದಾಖಲೆಗಳು ಸುಟ್ಟುಹೋಗಿವೆ. ಕುಷ್ಟಗಿ ತಾಲೂಕಿನ ವಣಗೇರಾ ಗ್ರಾಮದ ಹತ್ತಿರವಿರುವ ಟೋಲ್ ಗೇಟ್ ಸಿಬ್ಬಂದಿಗಳು ತಕ್ಷಣ ಕುಷ್ಟಗಿ ಅಗ್ನಿಶಾಮಕ ಠಾಣೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ.ಸುದ್ದಿ ತಿಳಿದ ತಕ್ಷಣವೇ ಅಗ್ನಿ ಶಾಮಕ ಠಾಣಾಧಿಕಾರಿಗಳಾಗಿರುವ ಶ್ರೀ ರಾಜು ರವರು ತಮ್ನ ಸಿಬ್ಬಂದಿಗಳೊಂದಿಗೆ ಘಟನೆ ನಡೆದ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಲಾರಿಗೆ ಬೆಂಕಿ ಹತ್ತಿಕೊಂಡಿದ್ದಲ್ಲದೆ ಟೋಲಗೇಟಿನಲ್ಲಿ ಹಣ ಸಂಗ್ರಹಿಸುವ ಕ್ಯಾಬಿನ್ನಿನ್ನಲ್ಲಿ ಕೆಲವೊಂದು ವಸ್ತುಗಳು ಕೂಡಾ ಬೆಂಕಿಗಾಹುತಿಯಾಗುವೆ. ಸಿಸಿ ಕ್ಯಾಮರಾ ಸುಟ್ಟು ಕರಕಲಾಗಿದೆ. ಬೆಂಕಿಗೆ ಆಹುತಿಯಾದ ಲಾರಿಯನ್ನು ಟೋಲ್ಗೇಟ್ ಸಿಬ್ಬಂದಿಗಳು ತೆರವುಗೊಳಿಸಿ ರಸ್ತೆ ಪಕ್ಕದಲ್ಲಿ ತಂದು ನಿಲ್ಲಿಸಿದ್ದಾರೆ. ಈ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಕುಷ್ಟಗಿ ಪೊಲೀಸ್ ಠಾಣೆಯ ಸಿ.ಪಿ.ಐ. ಆಗಿರುವ ಶ್ರೀ ನಿಂಗಪ್ಪ ಏನ್.ಆರ್.ರವರು ಮತ್ತು ಪ್ರಭಾರಿ ಪಿ.ಎಸ್.ಐ.  ಹೀರಪ್ಪ ನಾಯ್ಕ್ ರವರು ಮತ್ತು ತಮ್ಮ ಪೋಲಿಸ್ ಸಿಬ್ಬಂದಿಯೊಡನೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Please follow and like us:
error