ಕುಕನೂರು ಬಳಿ ಭೋನಿಗೆ ಬಿದ್ದ ಚಿರತೆ

ಕನ್ನಡನೆಟ್ ಕೊಪ್ಪಳ : ಕುಕನೂರು ತಾಲೂಕಿನಲ್ಲಿ ಚಿರತೆಯೊಂದು ಭೋನಿಗೆ ಬಿದ್ದು ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗೌರಾಳ ಬಳಿ ಕಳೆದ 15 ದಿನಗಳ ಹಿಂದಿನಿಂದಲೇ ಈ ಭಾಗದಲ್ಲಿ ಸುಳಿದಾಡುತ್ತಿತ್ತು. ಇದು ಸ್ಥಳೀಯರಲ್ಲಿ ಆತಂಕ, ಭಯ ಹುಟ್ಟಿಸಿತ್ತು. ಹೀಗಾಗಿ ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆಯವರು ಭೋನಿಟ್ಟಿದ್ದರು. ಇಂದು ಬೆಳಗಿನ ಜಾವ ಚಿರತೆ ಬೋನಿಗೆ ಬಿದ್ದಿದೆ ಇದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ

Please follow and like us:
error