ಕಿಮ್ಸ್‌ಗೆ ದೇಹದಾನ


ಕೊಪ್ಪಳ.೨೦ ಮಂಗಳವಾರ ಸಂಜೆ ನಿಧನರಾದ ಅಳವಂಡಿಯ ಖಾದಿ ಕೇಂದ್ರದ ನಿವೃತ್ತ ಮ್ಯಾನೇಜರ್ ವೀರಣ್ಣ ಸುರಪುರ (೭೦) ರವರ ದೇಹದಾನ ಪ್ರಕ್ರಿಯೆ ಬುಧವಾರದಂದು ಕಿಮ್ಸ್ ಆಸ್ಪತ್ರೆಯಲ್ಲಿ ಜರುಗಿತು.
ಮೃತ ದೇಹದಾನಿ ವೀರಣ್ಣ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ವೀರಣ್ಣ ಸುರಪುರವರ ದೇ ಹದಾನ ಪ್ರಕ್ರಿಯೆಯನ್ನು ಅವರ ಪುತ್ರರಾದ ಶಾಂತೇಶ ಸುರಪುರ, ಚೆನ್ನವೀರಪ್ಪ ಸುರಪುರ ನಡೆ ಸಿದರು. ದೇಹದಾನವನ್ನು ಕಿಮ್ಸ್‌ನ ಪ್ರಿನ್ಸಿಪಾಲ ಡಾ. ವಿಜಯ ನಾಥ ಇಟಗಿ, ಅಂಗರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಚನ್ನಬಸವಗೌಡ, ಸಿಬ್ಬಂದಿಗಳಾ ದ ಡಾ|| ಜ್ಞಾನೇಶ್ವರ, ಡಾ. ರಜ ನೀಶ, ಡಾ. ಶ್ರೀನಿವಾಸ, ಸುಧಾಕರ, ಜೋನಾಥನ್ ಸಮ್ಮುಖದಲ್ಲಿ ನಡೆಯಿತು.