ಕಿನ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ೫೬ನೇ ವಾರ್ಷಿಕ ಮಹಾ ಸಭೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಕಿನ್ನಾಳಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಕಿನ್ನಾಳಕೊಪ್ಪಳ ೦೪- ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿರುವ ಬೆರಳಣಿಕೆಯಷ್ಟು ಸಹಕಾರಿ ಸಂಘಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಿನ್ನಾಳ ಸಹ ಒಂದು ಎಂದು ಇಫ್ಕೋ ಕಂಪನಿ ವ್ಯವಸ್ಥಾಪಕರಾದ ಎಸ್. ಎಸ್. ಪಾಟೀಲ ಹೇಳಿದರು. ಅವರು ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಿನ್ನಾಳ ಇದರ ೫೬ ನೇ ವರ್ಷದ ವಾರ್ಷಿಕ ಮಹಾ ಸಭೆ ಉದ್ಗಾಟಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ೨೧ ಕೋಟಿಯಷ್ಟು ರೈತರಿಗೆ ಸಾಲ ನೀಡಿರುವ ಸಹಕಾರಿ ಸಂಘ ಇದಾಗಿದ್ದು ಇಲ್ಲಿಯ ರೈತರ ಕಷ್ಟಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ಇ ಸಂಘದ ಸೇವೆ ಅವಿಸ್ಮರಣಿಯ. ರೈತರಿಗೆ ಕೃಷಿ ಸಾಲ ಮತ್ತು ಕೃಷಿಯೇತೆರ ಸಾಲ, ಗೊಬ್ಬರ ಹಾಗೂ ಬೀಜದ ಸಾಲ ಸೇರಿದಂತೆ ಪ್ರತಿ ರೈತರ ಸಂಕಷ್ಟದಲ್ಲಿ ಸ್ಪಂದಿಸುತ್ತಿರುವ ಇ ಸಂಘದ ಸೇವೆ ರೈತರಿಗೆ ೧೦೦ ರಷ್ಟು ಮುಟ್ಟುತ್ತಿದ್ದು ೨೦೧೭ ನೇ ಸಾಲಿನ ರೈತರ ಸಾಲ ಮನ್ನಾದಲ್ಲಿ ೨.೫ ಕೋಟಿಯಷ್ಟು ಮನ್ನಾ ಆಗಿರುವುದು ಸರಕಾರದ ಬಹು ದೊಡ್ಡ ಕೋಡುಗೆ ಎಂದರು. ರೈತರು ಕೃಷಿಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಸಿಕೊಂಡು ವೈಜ್ಞಾನಿಕವಾಗಿ ರಸಗೊಬ್ಬರಗಳನ್ನು ಬಳಸಿ ಉತ್ತಮ ಬೆಳೆಗಳನ್ನು ಬೆಳೆಯಿರಿ, ರೈತರು ಅವೈಜ್ಞಾನಿಕ ರಸಗೊಬ್ಬರ ಬಳಕೆಯಿಂದ ಬೆಳೆ ಹಾನಿಯಾಗುತ್ತಿದ್ದು ರೈತರಿಗೆ ನಷ್ಟವಾಗುತ್ತಿದ್ದು ಇದರಿಂದ ರೈತರಿಗೆ ಜಾಗೃತಿ ವಹಿಸುವಂತೆ ಮನವಿ ಮಾಡಿದರು. ಇಫ್ಕೊ ಕಂಪನಿಯ ರಸ ಗೊಬ್ಬರಗಳಿಗೆ ವಿಮೆ ಸೌಲಭ್ಯವಿದ್ದು ರೈತರು ಇ ಗೊಬ್ಬರವನ್ನು ಬಳಸಿ ಹಾನಿ ಯಾದರೆ ವಿಮಾ ಸೌಲಭ್ಯ ಪಡೆದುಕೊಳ್ಳುವಂತೆ ಮನವಿ ಮಾಡಿದರು, ರೈತರು ಸರಕಾರದ ಮಹತ್ವಕಾಂಕ್ಷೆಯಾದ ಯಶಸ್ವಿನಿ ಯೋಜನೆ ಸೌಲಭ್ಯವನ್ನು ಸಂಘದ ಎಲ್ಲಾ ಸದಸ್ಯರು ಪಡೆದುಕೊಳ್ಳುವಂತೆ ಕೋರಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಹಕಾರಿ ಬಸವರಾಜ ಚಿಲವಾಡಗಿ ಮಾತನಾಡಿ ರೈತರು ರಾಸಾಯನಿಕ ಗೊಬ್ಬರಗಳನ್ನು ಬಿಟ್ಟು ಸಾವಯವ ಕೃಷಿಯನ್ನು ಅಳವಡಿಸಿಕೊಂಡು ಲಾಭದಾಯಕ ಕೃಷಿಯಡೆಗೆ ನಡೆಯಬೆಕಿದ್ದು, ಪ್ರತಿಯೊಬ್ಬ ರೈತರು ತಮ್ಮ ಭೂಮಿಯ ಮಣ್ಣಿನ ಪರೀಕ್ಷೆಯನ್ನು ಮಾಡಿಸಿಕೊಂಡು ಬೇಳೆಗಳನ್ನು ಬೆಳೆಯುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಘಧ ನಿರ್ದೇಶಕ ಹಾಗೂ ರಾಜ್ಯ ವಿಮಾ ಮಂಡಳಿಯ ನಿರ್ದೇಶಕರಾಧ ಅಮರೇಶ ಉಪಲಾಪುರ ಮಾತನಾಡಿ ರೈತರಿಗೆ ಸಂಕಷ್ಟ ಸಂದರ್ಭದಲ್ಲಿ ನಮ್ಮ ಸಹಕಾರಿ ಸಂಘ ನಿರಂತರವಾಗಿ ಸಹಾಯ ಸಹಕಾರ ನೀಡುತ್ತಾ ಬಂದಿದ್ದು ರಾಜ್ಯದಲ್ಲಿ ಪ್ರಥಮ ಬಾರಿಗೆ ನಮ್ಮ ಸಂಘದಲ್ಲಿ ಸಾಲ ಪಡೆದ ರೈತ ವಿಮಾ ಸೌಲಭ್ಯ ಹೊಂದಿ ಅಕಾಲಿಕ ಮರಣ ಹೊಂದಿದರೆ ಆತನ ಸಂಪೂರ್ಣ ಸಾಲ ಮನ್ನಾ ಮಾಡಲು ನಮ್ಮ ಸಂಘ ನಿರ್ದರಿಸಿದೆ ಎಂದು ಹೇಳಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ನಮ್ಮ ಸಂಘದ ವಿಶೇಷಾಧಿಕಾರಿ ಶ್ರೀಪಾಧರಾವ್ ದೇಶಪಾಂಡೆ ಪ್ರಾಸ್ತವಿಕವಾಗಿ ಮಾತನಾಡಿದರು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಕುದ್ರಿಮೋತಿ ಯವರು ವಾರ್ಷಿಕ ವರದಿ ವಾಚನ ಮಾಡಿದರು, ಕಾರ್ಯಕ್ರಮವನ್ನು ಭೀಮಣ್ಣ ಪರಗಿ ನಿರೂಪಿಸಿ, ವಂದಾನರ್ಪಣೆಯನ್ನು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ವೀರೇಶ ತಾವರಗೇರಿ ಯವರು ಅಧ್ಯಕ್ಷತೆ ವಹಿಸಿದ್ದರು, ವೇದಿಕೆ ಮೇಲೆ ವಲಯ ವ್ಯವಸ್ಥಾಪಕರು ಇಫ್ಕೋ ಸಂಸ್ಥೆ ಹೊಸಪೇಟೆ ಬಿ.ಜಿ. ಹಿರೇಮಠ, ಸಂಘದ ಉಪಾದ್ಯಕ್ಷರಾದ ವಿಜಯಕುಮಾರ ಕಲಾಲ, ಮತ್ತು ನಿರ್ದೇಶಕರಾದ ಮಹಾದೇವಯ್ಯ ಹಿರೇಮಠ, ಗೋಪಾಲಕೃಷ್ಣ ಇಲ್ಲೂರ, ದೇವಪ್ಪ ಹಳ್ಳಿಕೇರಿ, ಕೆ. ಮಲ್ಲಣ್ಣ, ಅಶೋಕ ಚಿತ್ರಗಾರ  ಮಲ್ಲಮ್ಮ ಕಾರಬ್ಯಾಳಿ ಹಾಗೂ ಶಕುಂತಲಮ್ಮ ಕುದ್ರಿಮೋತಿ ಯವರು ವೇದಿಕೆ ಮೇಲೆ ಉಪಸ್ತಿತರಿದ್ದರು.

Please follow and like us:
error