ಕಾರ್ಮಿಕ ವರ್ಗದ ಮಹಾನಾಯಕ ಕಾಮ್ರಡ್ ಫ್ರೆಡರಿಕ್ ಎಂಗೆಲ್ಸ್‌  ರವರ 200 ನೇ ಜನ್ಮದಿನ

Koppal  ಕೊಪ್ಪಳದ ಎಸ್.ಯು.ಸಿ.ಐ.ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ಹೂ ಮಾಲಾರ್ಪಣೆ ಮಾಡಿ  ಕ್ರಾಂತಿಕಾರಿ ಗೌರವದ ಕೆಂಪು ನಮನಗಳನ್ನು ಸಲ್ಲಿಸಲಾಯಿತು, ಕಾಮ್ರೆಡ್ ಫ್ರೆಡೆರಿಕ್  ಎಂಗೆಲ್ಸ್ ನೀವು ಹಚ್ಚಿದ ಹೋರಾಟದ ದೀವಿಗೆಯನ್ನು ಅದನ್ನು ಪ್ರಕಾರವಾಗಿ ಬೆಳಗುವಂತೆ ಮಾಡುವ ನಮ್ಮ ಸಂಕಲ್ಪವನ್ನು ಕಾರ್ಮಿಕ ವರ್ಗ  ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುಬೇಕಾಗಿದೆ. ಕಾಮ್ರಡ್ ಫ್ರೆಡರಿಕ್ ಎಂಗೆಲ್ಸ್‌ ರವರು ಆಗರ್ಭ ಶ್ರೀಮಂತ ಕೈಗಾರಿಕಾ ಉದ್ಯಮಪತಿ ಮನೆತನದಲ್ಲಿ ಜನನಿಸಿ, ಇಡೀ ತಮ್ಮ ಜೀವನವನ್ನೇ ಜಗತ್ತಿನ ದುಡಿಯವ ಜನಗಳ ವಿಮೋಚನೆಗಾಗಿ ಮುಡಿಪಾಗಿಟ್ಟು, ಕಾರ್ಲ್ ಮಾರ್ಕ್ಸ್ ಅವರ ಒಡನಾಡಿ ಗೆಳೆಯನಾಗಿ, ಮಾರ್ಕ್ಸ್ ಅವರ ಕಷ್ಟದಲ್ಲಿ ಸಮಾನವಾಗಿ ತೊಡಗಿಸಿಕೊಂಡು, ಮಾರ್ಕ್ಸ್ವಾದಕ್ಕೆ ಅದ್ಬುತ ಕೊಡುಗೆಗಳನ್ನು ನೀಡಿದ ಮಹಾನ್ ಜೀನಿಯಸ್, ಜೊತೆಗೆ ಸಮಾಜದ ಎಲ್ಲಾ ವಿಭಾಗದ ಶೋಷಿತರ ಮಧ್ಯೆ ಕೆಲಸ ಮಾಡಿ, ಅವರ ವಿಮೋಚನೆಗಾಗಿ ಹಗಲಿರುಳು ಶ್ರಮಿಸಿದ ಅಂತರರಾಷ್ಟ್ರೀಯ ಕಾರ್ಮಿಕ ವರ್ಗದ ಮಹಾನ್ ನಾಯಕರು. ಫ್ರೆಡರಿಕ್ ಎಂಗೆಲ್ಸ್ 1895 ಆಗಸ್ಟ್ 5 ರಂದು ಲಂಡನ್ನಲ್ಲಿ ನಿಧನರಾದರು. ಕಾರ್ಲ್ ಮಾರ್ಕ್ಸ್ ನಂತರ ಅವರ ಮಿತ್ರರಾಗಿದ್ದ ಎಂಗೆಲ್ಸ್ ಇಡೀ ನಾಗರಿಕ ಜಗತ್ತಿನ ಅದ್ಭುತ ವಿಚಾರಶೀಲರು ಮತ್ತು ಆಧುನಿಕ ಶ್ರಮಜೀವಿ ವರ್ಗದ ಅತ್ಯಂತ ಪ್ರಮುಖ ಬೋಧಕರು.ಎಂಗೆಲ್ಸ್ ಹೇಳಿದ  ಕಾರ್ಮಿಕ ವರ್ಗ ಮತ್ತು ಅದರ ಬೇಡಿಕೆಗಳು ಹಿಂದಿನ ವ್ಯವಸ್ಥೆಯಿಂದ ಹುಟ್ಟುತ್ತವೆ. ಬಂಡವಾಳಶಾಹಿ ವರ್ಗವು ಅನಿವಾರ್ಯವಾಗಿ ಶ್ರಮಜೀವಿ ವರ್ಗವನ್ನು ಸೃಷ್ಟಿಸುತ್ತದೆ,  ಮತ್ತು ಸಂಘಟಿಸುತ್ತದೆ ಕೂಡ ಎನ್ನುವುದನ್ನು ಮಾರ್ಕ್ಸ್ ಮತ್ತು ಎಂಗೆಲ್ಸ್ ಮೊಟ್ಟಮೊದಲ ಬಾರಿಗೆ ಜಗತ್ತಿಗೆ ತೋರಿಸಿಕೊಟ್ಟರು. ಜಗತ್ತನ್ನು ಹಿಂದಿನ ಎಲ್ಲ ಕೆಡುಕುಗಳಿಂದ ಮುಕ್ತಗೊಳಿಸಲು ಕಾರ್ಮಿಕವರ್ಗದ ಸಂಘಟಿತ ಹೋರಾಟದಿಂದ ಮಾತ್ರ ಸಾಧ್ಯವೇ ಹೊರತು ಉತ್ಕೃಷ್ಟ ಜನಗಳ ಉದಾತ್ತ ಪ್ರಯತ್ನಗಳಿಂದ ಅಲ್ಲ ಎಂದು ಅವರು ತೋರಿಸಿಕೊಟ್ಟರು. ಸಮಾಜವಾದ ವೆಂಬುದು ಕೇವಲ ಕನಸುಗಾರನ ಕಲ್ಪನೆ ಅಲ್ಲ ಆಧುನಿಕ ಸಮಾಜದ ಉತ್ಪಾದಕ ಶಕ್ತಿಗಳ ಬೆಳವಣಿಗೆಯ ಉನ್ನತ ಗುರಿ ಹಾಗೂ ಅನಿವಾರ್ಯ ಎಂಬುದನ್ನು ಮಾರ್ಕ್ಸ್ ಮತ್ತು ವೈಜ್ಞಾನಿಕ ವಿಶ್ಲೇಷಣೆಗಳ ಮೂಲಕ ವಿವರಿಸಿದರು, ಇಲ್ಲಿಯವರೆಗಿನ ಎಲ್ಲಾ ಇತಿಹಾಸವು ವರ್ಗಹೋರಾಟದ ಇತಿಹಾಸವೇ. ಹಾಗೆಯೇ ಒಂದು ಸಾಮಾಜಿಕ ವರ್ಗವು ಇನ್ನಿತರ ವರ್ಗಗಳ ಮೇಲೆ ವಿಜೃಂಭಿಸಿ ಅಧಿಕಾರ ನಡೆಸಿದ ಇತಿಹಾಸವಾಗಿದೆ. ವರ್ಗ ಹೋರಾಟ ಮತ್ತು ವರ್ಗ ಪ್ರಾಬಲ್ಯದ ಅಡಿಪಾಯವಾದ ಖಾಸಗಿ ಆಸ್ತಿ ಹಾಗೂ  ಉತ್ಪಾದನೆಯಲ್ಲಿರುವ  ಅರಾಜಕತೆಯು ನಾಶವಾಗುವ ವರೆಗೂ ಇದು ಮುಂದುವರೆಯುವುದು. ಈ ಅಡಿಪಾಯವನ್ನು ನಾಶ ಮಾಡಿದಾಗ ಮಾತ್ರ ಕಾರ್ಮಿಕವರ್ಗದ ಹಿತವನ್ನು ಸಾಧಿಸಬಹುದು. ಆದ್ದರಿಂದ ಸಂಘಟಿತ ಕಾರ್ಮಿಕರು ತಮ್ಮ ಪ್ರಜ್ಞಾಪೂರ್ವಕ ವರ್ಗ ಹೋರಾಟವನ್ನು ಇದರ ವಿರುದ್ಧ ತಿರುಗಿಸಬೇಕು. ವರ್ಗ ಹೋರಾಟವೆಂದರೆ ಅದು ರಾಜಕೀಯ ಹೋರಾಟ ವುದು ತಮ್ಮ ವಿಮುಕ್ತಿಗಾಗಿ ಹೋರಾಡುತ್ತಿರುವ ಜಗತ್ತಿನ ಎಲ್ಲಾ ಕಾರ್ಮಿಕರು ಮಾರ್ಕ್ ಮತ್ತು ಎಂಗೆಲ್ಸ್ ರ  ಚಿಂತನೆಗಳನ್ನು ಇಂದು ಅಳವಡಿಸಿಕೊಳ್ಳಬೇಕಾಗಿದೆ.  ಎಂಗೆಲ್ಸ್  ಬ್ರೆಸೆಲ್ಸ್ ಹಾಗೂ ಪ್ಯಾರಿಸ್ ನಲ್ಲಿ ವಾಸಿಸುತ್ತಾ ಅಲ್ಲಿನ ಕಾರ್ಮಿಕರ ಮಧ್ಯೆ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಮಾರ್ಕ್ಸ್ ಜೊತೆಗೂಡಿ ಭೂಗತ ಜರ್ಮನ್ ಕಮ್ಯುನಿಸ್ಟ್ ಜೊತೆಯಲ್ಲಿ ಸಂಪರ್ಕ ಬೆಳೆಸಿದರು. ಕಮ್ಯುನಿಸ್ಟ್ ಈ ಮೇಧಾವಿ ಜೋಡಿಗೆ ಸಮಾಜವಾದದ ಮುಖ್ಯ ಸೂತ್ರಗಳನ್ನು ಬರೆಯುವ ಜವಾಬ್ದಾರಿಯನ್ನು ನೀಡಿದ್ದು ಅದರ ಫಲವೇ 1848 ರಲ್ಲಿ ಪ್ರಕಟವಾದ “ಕಮ್ಯುನಿಸ್ಟ್ ಪಕ್ಷದ ಪ್ರಣಾಳಿಕೆ” ಎಂಬ ಕೃತಿ ಇಂದಿಗೂ ಈ ಕೃತಿಯು ಜಗತ್ತಿನ ಸಂಘಟಿತ ಹಾಗೂ ಸಮರಶೀಲ ಕಾರ್ಮಿಕ ವರ್ಗಕ್ಕೆ ಸ್ಪೂರ್ತಿಯನ್ನು ನೀಡುತ್ತದೆ. ಮಾರ್ಕ್ಸ್ ಮತ್ತುಎಂಗೆಲ್ಸ್  1848- 1849 ರ ಚಳುವಳಿಯ ನಂತರ ದೇಶಾಂತರ ವಾಸಿಯಾಗಿದ್ದ ಸಂದರ್ಭದಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ಸೀಮಿತಗೊಳಿಸಲಿಲ್ಲ. 1864 ರಲ್ಲಿ ಇಂಟರ್ನ್ಯಾಷನಲ್ ವರ್ಕಿಂಗ್ ಮೆನ್ ಅಸೋಸಿಯೇಷನ್ ಅನ್ನು ಸ್ಥಾಪಿಸಿ ಅದಕ್ಕೆ ಅವರಿಬ್ಬರು ಮಾರ್ಗದರ್ಶನ ನೀಡಿದರು. ಕಾರ್ಮಿಕ ಚಳುವಳಿಗಳ ಬೌದ್ಧಿಕ ನಾಯಕರಾಗಿ ಹಾಗೂ ಚಳುವಳಿಗಳಲ್ಲಿ ಒಟ್ಟೊಟ್ಟಾಗಿಯೇ ಅವರು ಭಾಗವಹಿಸಿದ್ದರು. ಮಾರ್ಕ್ಸ್ ಅವರ ಮರಣಾನಂತರ ಎಂಗೆಲ್ಸ್ ಒಂಟಿಯಾಗಿ ಸಮಾಜವಾದಿಗಳ ಸಲಹಾಕಾರ ಮತ್ತು ಮಾರ್ಗದರ್ಶಕನಾಗಿ ಕ್ರಿಯಾಶೀಲರಾಗಿದ್ದರು. ಕಾರ್ಮಿಕ ವರ್ಗದ ವಿಮುಕ್ತಿಯ ಕಾರ್ಮಿಕ ವರ್ಗವೇ ನೆರವೇರಿಸಬೇಕಾದ ಕಾರ್ಯ ಎಂದು ಮಾರ್ಕ್ಸ್ ಮತ್ತು ಎಂಗೆಲ್ಸ್  ಸತತವಾಗಿ ಬೋಧಿಸಿದ್ದರು. ತನ್ನ ಆರ್ಥಿಕ ವಿಮೋಚನೆಗಾಗಿ ಕಾರ್ಮಿಕ ವರ್ಗವು ತನಗಾಗಿ ಕೆಲವು ರಾಜಕೀಯ ಹಕ್ಕುಗಳನ್ನು ಗೆದ್ದು ಕೊಳ್ಳಬೇಕು. ರಷ್ಯಾದಲ್ಲಿ ಕ್ರಾಂತಿಯಾಗಿದ್ದು ಪಶ್ಚಿಮ ಯುರೋಪಿನ ಕಾರ್ಮಿಕ ಚಳುವಳಿಗೆ ಮಹತ್ವದ್ದು ಎಂಬುದನ್ನು ಇಬ್ಬರೂ ಪ್ರತಿಪಾದಿಸಿದರು. ಯುರೋಪಿನಲ್ಲಿ ಇದ್ದ ಎಲ್ಲಾ ಪ್ರತಿಗಾಮಿ ಶಕ್ತಿಗಳನ್ನು ದುರ್ಬಲಗೊಳಿಸುವುದುರಿಂದ ಕಾರ್ಮಿಕವರ್ಗದ ಶಕ್ತಿ ಹೆಚ್ಚುವುದು. ಆದ್ದರಿಂದ ಎಂಗೆಲ್ಸ್ ರು  ಕಾರ್ಮಿಕ ಚಳುವಳಿಯ ಪಶ್ಚಿಮದಲ್ಲಿ ಬೆಳೆಯಲು ಸಾಧ್ಯವಾಗುವ ನಿಟ್ಟಿನಲ್ಲಿ ರಾಜಕೀಯ ಸ್ವಾತಂತ್ರ್ಯ ಸ್ಥಾಪನೆಯಾಗಬೇಕೆಂದು ಬಯಸಿದ್ದರು. ಅವರನ್ನು ಕರೆದುಕೊಂಡು ಕ್ರಾಂತಿಕಾರಿಗಳು ತಮ್ಮ ಅತ್ಯುತ್ತಮ ಮಿತ್ರನನ್ನು ಕಳೆದುಕೊಂಡಿದ್ದಾರೆ. ಕಾರ್ಮಿಕ ವರ್ಗದ ಮಹಾನ್ ನಾಯಕ ಶಿಕ್ಷಕ ಹೋರಾಟಗಾರ ಫೆಡ್ರಿಕ್ ಎಂಗೆಲ್ಸ್ ಅವರ ನೆನಪು ಚಿರಕಾಲ ಉಳಿಯಲಿ.ಲಾಲ್  ಸಲಾಂ ಕಾಮ್ರಡ್ ಫ್ರೆಡರಿಕ್ ಎಂಗೆಲ್ಸ್‌.ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಚಿರಾಯುವಾಗಲಿ ಘೋಷಣೆ ಕೂಗುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯ ಮಾಡಲಾಯಿತು. ಈ ಸಂದರ್ಭದಲ್ಲಿ ಭಾಗವಹಿಸಿದ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಸದಸ್ಯರಾದ ಶರಣು ಗಡ್ಡಿ, ಶರಣು ಪಾಟೀಲ್, ಸಿದ್ದಲಿಂಗ ರೆಡ್ಡಿ ಮುಂತಾದವರು ಭಾಗವಹಿಸಿದ್ದರು.
Please follow and like us:
error