ಕಾರ್ಮಿಕ ಕಾನೂನಿನ ಕಾಯ್ದೆಗಳ ಅಮಾನತ್ತು ಖಂಡಿಸಿ CITU(ಸಿಐಟಿಯು) ಸಂಘಟನೆಯ ಮನವಿ

ಇಂದು ಕಾರ್ಮಿಕ ಕಾನೂನಿನ ನಲವತ್ತು ಕಾಯ್ದೆಗಳ ಅಮಾನತ್ತು ಖಂಡಿಸಿ ಮತ್ತು ದುಡಿಯುವ ಅವಧಿಯ ಹೆಚ್ಚಳ ವಿರೋಧಿಸಿ,ಕಾರ್ಮಿಕರ ಹಿತಕಾಯುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಅಥಣಿ ತಹಶಿಲ್ದಾರ ಮೂಲಕ ರಾಜ್ಯಪಾಲರಿಗೆ  CITU(ಸಿಐಟಿಯು) ಸಂಘಟನೆಯ ಅಥಣಿ ಕಾರ್ಮಿಕ ಘಟಕದಿಂದ ಮನವಿ ಸಲ್ಲಿಸಲಾಯಿತು.

ಕಾರ್ಮಿಕರ ವೇತನ ಪಾವತಿ ವಿಳಂಬ ನೀತಿ,ಕಾರ್ಮಿಕರಿಗೆ ಇಎಸ್ಐ ಪಿಎಪ್ ವಂಚನೆ ವಿರೋಧಿಸಿ  ಮೂರುನೂರು ಜನ ಕಾರ್ಮಿಕರ ಕಾರ್ಖಾನೆ ಅಥವಾ ಉದ್ದಿಮೆ ಸಂಕಷ್ಟದಲ್ಲಿ ಇದ್ದರೆ ಯಾವುದೇ ಮುನ್ನೆಚ್ಚರಿಕೆ ನೀಡದೆ ಲಾಕ್ ಔಟ್ ಮಾಡುವದನ್ನು ಖಂಡಿಸಿ ಮತ್ತು ಮೊದಲು ದುಡಿಯುತ್ತಿದ್ದ ಕಾರ್ಮಿಕರ ಕೆಲಸದ ಅವಧಿಯನ್ನು 8 ತಾಸುಗಳಿಂದ ಹನ್ನೆರಡು ತಾಸಿನ ದುಡಿಮೆಯಾಗಿ ಪರಿವರ್ತಿಸುತ್ತಿರುವದನ್ನು ವಿರೋಧಿಸಿ ಕಾರ್ಮಿಕರ ಮತ್ತು ದುಡಿಯುವ ವರ್ಗದ ಹಿತಕಾಯುವ ನಿಟ್ಟಿನಲ್ಲಿ ಕಟ್ಟಡ ಕಾರ್ಮಿಕರು, ಕಾರ್ಖಾನೆ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ ಶ್ರಮದ ದುಡಿಮೆಗೆ ತಕ್ಕ ಪ್ರತಿಫಲ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ, ಕೊರೊನಾ ಸಂಕಷ್ಟ ಸಮಯದಲ್ಲಿ ಕಾರ್ಮಿಕರ ರಕ್ಷಣೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಲೇ ಧಾವಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ  ದೀಪಕ ಶಿಂಧೇ ಅಧ್ಯಕ್ಷರು ಕಟ್ಟಡ ಕಾರ್ಮಿಕರ ಸಂಘಟನೆ.ಅಥಣಿ,ಪ್ರಕಾಶ ಕಾಂಬಳೆ ಉಪಾಧ್ಯಕ್ಷರು ಕಟ್ಟಡ ಕಾರ್ಮಿಕರ ಸಂಘಟನೆ ಅಥಣಿ ರಾಕೇಶ್ ಮೈಗೂರ ಪ್ರಧಾನ ಕಾರ್ಯದರ್ಶಿ ಕಟ್ಟಡ ಕಾರ್ಮಿಕರ ಸಂಘಟನೆ ಅಥಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು

Please follow and like us:
error