ಕಾರ್ಮಿಕರ, ರೈತರ ವಿರೋಧಿ ನೀತಿಗಳನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಉಪವಾಸ ಸತ್ಯಾಗ್ರಹ

ಗಂಗಾವತಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ, ಕಾರ್ಪೊರೇಟ್ ಕಂಪನಿಗಳ ಪರವಾದ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ, ಅಗತ್ಯ ವಸ್ತು ಕಾಯ್ದೆ, ಗುತ್ತಿಗೆ ಕೃಷಿ ಕಾಯ್ದೆ, ಹಾಗೂ ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಇಂದು ದಿನಾಂಕ 2/10/2020 ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯ ದಿನದಂದು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ವೇದಿಕೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಸಿಐಟಿಯು ಮತ್ತು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆಯ ನೇತೃತ್ವದಲ್ಲಿ ಇಂದು ಬೆಳಿಗ್ಗೆ 11:00 ರಿಂದ ಸಂಜೆ 5:00 ಗಂಟೆವರೆಗೆ *ಉಪವಾಸ ಸತ್ಯಾಗ್ರಹ ಧರಣಿ ಮಾಡಲಾಯಿತು.

ಉಪವಾಸ ಸತ್ಯಾಗ್ರಹ ಧರಣಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾದ ಕಾಮ್ರೇಡ್ ನಿತ್ಯಾನಂದ ಸ್ವಾಮಿ ಹಾಗೂ ಎಸ್ಎಫ್ಐ ರಾಜ್ಯಾಧ್ಯಕ್ಷರಾದ ಅಮರೇಶ ಕಡಗದ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನಾಗರಾಜ, CITU ಜಿಲ್ಲಾ ಅಧ್ಯಕ್ಷರಾದ ನಿರುಪಾಧಿ ಬೆಣಕಲ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ಗಂಗಾವತಿ ತಾಲೂಕ್ ಅಧ್ಯಕ್ಷರಾದ ಮರಿನಾಗಪ್ಪ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ್, ಹುಸೇನಪ್ಪ ಶ್ರೀನಿವಾಸ ಹೊಸಳ್ಳಿ, ಶಿವಣ್ಣ ಬೆಣಕಲ್, ನಬೀಸಾಬ್, ನಾಗೇಶ್ ನಾಯಕ್, ಕೃಷ್ಣಪ್ಪನಾಯಕ ,ವೀರೇಶ್ ಹಿರೇಮಠ, ಗ್ಯಾನೇಶ್ ಕಡಗದ, ಮಂಜುನಾಥ ಡಗ್ಗಿ, ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಶರಣೇಗೌಡ ಕೆಸರಟ್ಟಿ, ಪಂಪಯ್ಯ ಸ್ವಾಮಿ, ಬಸವರಾಜ ಮಾಲಿ ಪಾಟೀಲ್, ಮಹಿಳಾ ಮುಖಂಡರಾದ ದುರಗಮ್ಮ, ಗಿರಿಜಮ್ಮ , ಹುಲಿಗೆಮ್ಮ,ಭಾರತಿ, ಜಯಮ್ಮ, ಸುಮಾ, ಪರಿಮಳ, ಸೀತಾ, ಶಾರದಾ, ಹುಲಿಗೆಮ್ಮ ಇತರರು ಇದ್ದರು

Please follow and like us:
error