ಕಾರ್ಮಿಕರಿಗೆ ಪರಿಹಾರ ಧನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ಕೊಪ್ಪಳ: ಲಾಕ್ ಡೌನ್ ವೇಳೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕಾರ್ಮಿಕರಿಗೆ ಸರ್ಕಾರ ಘೋಷಣೆ ಮಾಡಿದ್ದ ತಲಾ ಐದು ಸಾವಿರ ಮೊತ್ತದ ಪರಿಹಾರವನ್ನು ಕಾರ್ಮಿಕರಿಗೆ ನೀಡದೆ ವಂಚಿಸಲಾಗಿದೆ ಎಂದು ಎಐಯುಟಿಯುಸಿ ಸಂಘಟನೆಯ ಸಂಚಾಲಕ ಶರಣ ಗಡ್ಡಿ ಆರೋಪಿಸಿದರು.

ಜಿಲ್ಲೆಯ ಗಂಗಾವತಿ ನಗರದ ಮಿನಿ ವಿಧಾನಸೌಧದ ಎದುರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮಸ್ಯೆಗಳ ಪರಿಹಾರಾರ್ಥವಾಗಿ ಹಮ್ಮಿಕೊಂಡಿದ್ದ ಹೋರಾಟದ ನೇತೃತ್ವ ವಹಿಸಿ ಅವರು ಮಾತನಾಡಿದರು.ತಾಲೂಕಿನಲ್ಲಿ ಆರು ಸಾವಿರ ಅಧಿಕೃತ ಕಾರ್ಮಿಕರಿದ್ದಾರೆ. ಆದರೆ ಯಾವೊಬ್ಬ ಕಾರ್ಮಿಕನಿಗೂ ಸರ್ಕಾರದ ಲಾಕ್ ಡೌನ್ ಪರಿಹಾರ ಹಣ ಸಿಕ್ಕಿಲ್ಲ. ಕೆಲಸ ಅರಸಿ ಹೋಗಿದ್ದ ಅಸಂಖ್ಯಾತ ಕಾರ್ಮಿಕರ ಅರ್ಜಿ ಸ್ವೀಕರಿಸಿ ಸ್ಥಳದಲ್ಲಿಯೇ ಪರಿಹಾರ ಧನ ನೀಡುವಂಥ ಕೆಲಸ ರಾಜ್ಯದ ಸಾಕಷ್ಟು ಜಿಲ್ಲೆಗಳಲ್ಲಿ ನಡೆದಿದೆ. ಆದರೆ ಗಂಗಾವತಿ ಜಿಲ್ಲೆಯಲ್ಲಿ ಆ ಕೆಲಸ ಅಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು

Please follow and like us:
error