ಚೆನ್ನೈ, ನ.27: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭೂಮಿಯ ಚಿತ್ರಣ ಮತ್ತು ಮ್ಯಾಪಿಂಗ್ ಉಪಗ್ರಹ ಕಾರ್ಟೊಸ್ಯಾಟ್ -3 ಮತ್ತು ಅಮೆರಿಕದ 13 ಇತರ ನ್ಯಾನೊ ಉಪಗ್ರಹಗಳು ಸೇರಿದಂತೆ 14 ಉಪಗ್ರಹಗಳನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಬೆಳಗ್ಗೆ ಉಡಾಯಿಸಿದೆ.
ಸರಣಿಯಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಕಾರ್ಟೊಸ್ಯಾಟ್ -3 ಉಪಗ್ರಹವನ್ನು ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದ ಎರಡನೇ ಉಡಾವಣಾ ಪ್ಯಾಡ್ನಿಂದ ಬೆಳಗ್ಗೆ 09:28 ಕ್ಕೆ ಯಶಸ್ವಿಯಾಗಿ ಉಡಾಯಿಸಲಾಗಿದೆ.
Please follow and like us: