ಕಾರಟಗಿ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಸಿದ್ದು ಯಾಪಲಪರವಿ ಆಯ್ಕೆ

ಕಾರಟಗಿ : ಮಾರ್ಚ್ 7ರ ಭಾನುವಾರದಂದು ಇಲ್ಲಿನ ನವಲಿ ರಸ್ತೆಯ ಸರಕಾರಿ ಪದವಿ ಪೂರ್ವ ಕಾಲೇಜು ಆವರಣಲ್ಲಿ ನಡೆಯಲಿರುವ ಪ್ರಪ್ರಥಮ ತಾಲೂಕಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಇಂಗ್ಲಿಷ್ ಪ್ರಾಧ್ಯಾಪಕ, ಪ್ರಗತಿ ಪರ ಬರಹಗಾರ ಹಾಗೂ ಗದುಗಿನ ಕನಕದಾಸ ಶಿಕ್ಷಣ ಸಮಿತಿಯ ಪದವಿ ಪೂರ್ವ ಕಾಲೇಜ್ ನ ಪ್ರಾಚಾರ್ಯ ಪ್ರೊ.ಸಿದ್ದು ಯಾಪಲಪರವಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಪರಿಷತ್ ನ ಜಿಲ್ಲಾಧ್ಯಕ್ಷ ರಾಜಶೇಖರ್ ಅಂಗಡಿ ಮತ್ತು ತಾಲೂಕಾ ಪರಿಷತ್ ಅಧ್ಯಕ್ಷ ಚನ್ನ ಬಸಪ್ಪ ವಕ್ಕಳದ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಸಮ್ಮೇಳನ ಅಧ್ಯಕ್ಷರ ಆಯ್ಕೆ,ಸ್ಥಳ, ದಿನಾಂಕ ನಿಗದಿಗೆ ಸಭೆ ನಡೆಯಿತು.
ಈ ಬಗ್ಗೆ ತಾಲೂಕಾಧ್ಯಕ್ಷ ವಕ್ಕಳದ ಸುದ್ದಿಗಾರರೊಂದಿಗೆ ಮಾತನಾಡಿ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಯಾಪಲಪರವಿ ಅವರು ಶಿಕ್ಷಣ, ಸಾಹಿತ್ಯ ಕ್ಷೇತ್ರಗಳಲ್ಲದೆ ಜೀವನ ಶೈಲಿ ತರಬೇತುದಾರರಾಗಿ ದೇಶ ವಿದೇಶಗಳಲ್ಲಿ ಚಿರಪರಿಚಿತರಾಗಿದ್ದಾರೆ ಎನ್ನುವುದು ಕಾರಟಗಿಯ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರಿಷತ್ ಕಾರ್ಯದರ್ಶಿ ಭೀಮಣ್ಣ ಕರಡಿ, ಜಿಲ್ಲಾ ಮಹಿಳಾ ಪ್ರತಿನಿಧಿ ವಿಜಯಲಕ್ಷ್ಮಿ ಮೇಲಿನಮನಿ, ತಾಲೂಕಾ ಮಹಿಳಾ ಪ್ರತಿನಿಧಿ ಸುರೇಖಾ , ಸಂಘ ಸಂಸ್ಥೆ ಪ್ರತಿನಿಧಿ ಬಸವರಾಜ್ ಪಗಡ್ದಿನ್ನಿ , ಮಾಧ್ಯಮ ಪ್ರತಿನಿಧಿ ಶರಣು ಕೋಟ್ಯಾಳ, ಕಾರ್ಯಕಾರಿಮಂಡಳಿ ಸದಸ್ಯರಾದ ವಡಕ್ಕಣ್ಣನವರ್, ಅಕ್ಕ ಮಹಾದೇವಿ ಶ್ಯಾವಿ ಸೇರಿದಂತೆ ಜಿಲ್ಲಾ , ತಾಲೂಕಾ ಪ್ರತಿನಿಧಿಗಳು ಇನ್ನಿತರರು ಇದ್ದರು.

Please follow and like us:
error