ಕಾಂಚೀಪುರಂ: ಪೆರಿಯಾರ್ ಪ್ರತಿಮೆ ಧ್ವಂಸ

ಚೆನ್ನೈ, ಜ.24: ಅಗ್ರಮಾನ್ಯ ದ್ರಾವಿಡ ಹಾಗೂ ಸಾಮಾಜಿಕ ಸುಧಾರಕ ಪೆರಿಯಾರ್ ಇ.ವಿ. ರಾಮಸಾಮಿ ಪ್ರತಿಮೆಯನ್ನು ದುಷ್ಕರ್ಮಿಗಳು ಶುಕ್ರವಾರ ಬೆಳಗ್ಗಿನ ಜಾವ ಧ್ವಂಸಗೊಳಿಸಿರುವ ಘಟನೆ ಕಾಂಚೀಪುರಂ ಜಿಲ್ಲೆಯ ಸಲಾವಕ್ಕಂನಲ್ಲಿ ನಡೆದಿದೆ.

ಪ್ರತಿಮೆಯ ಬಲಗೈ ತುಂಡಾದ ಸ್ಥಿತಿಯಲ್ಲಿ ಕಂಡುಬಂದಿದೆ. ಪ್ರತಿಮೆಯ ತಲೆಯ ಭಾಗದಲ್ಲಿ ಸ್ವಲ್ಪ ಬಿರುಕುಬಿಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರು ಪ್ರತಿಮೆ ಧ್ವಂಸವಾಗಿರುವುದನ್ನು ನೋಡಿದ ತಕ್ಷಣ ಪೊಲೀಸರಿಗೆ ಬೆಳಗ್ಗೆ 6:15ಕ್ಕೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರತಿಮೆಯ ತಲೆ ಭಾಗ ಹಾಗೂ ತುಂಡಾದ ಬಲಗೈ ಭಾಗವನ್ನು ಮುಚ್ಚಿದ್ದಾರೆ. ಸ್ಥಳದಲ್ಲಿ ಸಾಕಷ್ಟು ಜನರು ನೆರೆದಿದ್ದು, ಪೊಲೀಸ್ ತನಿಖೆ ಮುಂದುವರಿದಿದೆ

Please follow and like us:
error