ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಕಾರ್ಮಿಕ ವರ್ಗದವರಿಗೆ ನ್ಯಾಯ ಒದಗಿಸಲು ಸಾಧ್ಯ : ಅಮೀರ್ ಅಹ್ಮದ ತುಂಬೆ

Koppal ಇಂದು  ಕೊಪ್ಪಳ ನಗರಕ್ಕೆ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷರಾದ   ಅಮೀರ ಅಹ್ಮದ್ ತುಂಬೆ ಅವರು ಶಿಲ್ಪಾ ಗ್ರ್ಯಾಂಡ್ ಹೊಟೆಲ್ ನ ಹಾಲ್ ಗೆ ಆಗಮಿಸಿದ ಅವರಿಗೆ ಹೂಮಾಲೆ ಹಾಕುವ ಮುಖಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪಂಡಿತ ಮತ್ತು ಪದಾಧಿಕಾರಿಗಳು ಸ್ವಾಗತಿಸಿದರು. ಕೊರೋನಾ ಮಹಾಮಾರಿಯಿಂದ ರಾಜ್ಯದಲ್ಲಿ ಕಾರ್ಮಿಕ ವರ್ಗದವರು ಸಾಕಷ್ಟು ಕಷ್ಟವನ್ನು ಅನುಭವಿಸಿದ್ದಾರೆ. ಕಾರ್ಮಿಕರಿಗೆ ಪರಿಹಾರ ಹಾಗೂ ಸಹಾಯ ಧನ ಕೊಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲಗೊಂಡಿದೆ ಎಂದು ಅಮೀರ ಅಹ್ಮದ್ ಹೇಳಿದರು. ಮತ್ತು ಇಂತಹ ವಿಷಮ ಸ್ಥಿತಿಯಲ್ಲಿ ಜನ ವಿರೋಧಿ ಕಾನೂನು ನೀತಿ ತರುವ ಸರ್ಕಾರವನ್ನು ಖಂಡಿಸಿದ ಅವರು ಕೇವಲ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಕಾರ್ಮಿಕ ವರ್ಗದವರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದರು. ಕೂಲಿ ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕರಿಗೆ ಇನ್ನೂ ಹಲವಾರು ಕಾರ್ಮಿಕ ವರ್ಗದವರಿಗೆ ಸಹಾಯ ಧನ ಸಮರ್ಪಕವಾಗಿ ನೀಡಿರುವುದಿಲ್ಲವೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪಂಡಿತ ರಾಜ್ಯ ಉಪಾಧ್ಯಕ್ಷ ತುಂಬೆ ಅವರ ಗಮನಕ್ಕೆ ತಂದರು.

ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಚಾಂದಪಾಶಾ ಕಿಲ್ಲೇದಾರ ಮಾತನಾಡಿ ರಾಜ್ಯ ಸರ್ಕಾರದಿಂದ ಕಾರ್ಮಿಕ ವರ್ಗದವರಿಗೆ ಅನ್ಯಾಯವಾಗಿದೆ ಎಂದರು. ಭಾಗ್ಯನಗರದ ಅಧ್ಯಕ್ಷ ಅಶೋಕ ಗೋರಂಟ್ಲಿ ಮಾತನಾಡಿ ನೇಕಾರರಿಗೆ ಸಹಾಯ ಧನ ಕೊಟ್ಟಿರುವುದಿಲ್ಲ ಎಂದು ಆರೋಪಿಸಿದರು. ಶ್ರೀನಿವಾಸ ಪಂಡಿತ ಮತ್ತು ಕಾರ್ಯಕರ್ತರಾದ ರಾಘವೇಂದ್ರ, ಮಂಜುನಾಥ ಅವರು ಉಪಸ್ಥಿತರಿದ್ದರೆಂದು ಜಿಲ್ಲಾ ಅಧ್ಯಕ್ಷರಾದ   ವೆಂಕಟೇಶ ಎಮ್ ಆರ್  ತಿಳಿಸಿದ್ದಾರೆ.

Please follow and like us:
error