ಕಾಂಗ್ರೆಸ್ ನ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ : ಅಜಿತ್ ಪವಾರ್

ಮುಂಬೈ, ನ.12: ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ನಾವು ಅದನ್ನು ಒಟ್ಟಾಗಿ ತೆಗೆದುಕೊಳ್ಳಲಾಗುವುದು, ಆದ್ದರಿಂದ ನಾವು ಕಾಂಗ್ರೆಸ್ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೆವು  ಎಂದು ಎನ್ ಸಿಪಿ ನಾಯಕ ಅಜಿತ್ ಪವಾರ್ ತಿಳಿಸಿದ್ದಾರೆ.

ನಾವು ಯಾವುದನ್ನು ಏಕಾಂಗಿಯಾಗಿ  ನಿರ್ಧರಿಸಲು ಸಾಧ್ಯವಿಲ್ಲ. ಯಾವುದೇ ತಪ್ಪು ತಿಳುವಳಿಕೆ ಇಲ್ಲ, ನಾವು ಒಟ್ಟಿಗೆ ಸ್ಪರ್ಧಿಸಿದ್ದೇವೆ ಮತ್ತು ಒಟ್ಟಿಗೆ ಇದ್ದೇವೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಸರಕಾರ ರಚನೆಗೆ ಸಂಬಂಧಿಸಿ ರಾಜ್ಯಪಾಲರು ಸೋಮವಾರ ಎನ್ ಸಿಪಿಗೆ ಆಹ್ವಾನ ನೀಡಿದ್ದರು.

Please follow and like us:
error