ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆ

ಕೊಪ್ಪಳ : ಲೋಕಸಭೆ ಚುನಾವಣೆ ಹಿನ್ನೆಲೆ

ಕೊಪ್ಪಳದಲ್ಲಿ ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಯಿತು. ನಗರದ ಹೊಸಪೇಟೆ ರಸ್ತೆಯಲ್ಲಿರುವ ಮೇಘರಾಜ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯನ್ನು ಹಿರಿಯ ಕಾಂಗ್ರೆಸ್ ಮುಖಂಡ ಶಾಂತಣ್ಣ ಮುದಗಲ್ ಉದ್ಘಾಟಿಸಿದರು. ವಿವಿದ ಮುಖಂಡರು

ಮಾತನಾಡಿದರು. ಕಾಂಗ್ರೆಸ್ ನ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಾತನಾಡಿ ಮೋದಿಯವರ ಉದ್ಯೋಗ ಸೃಷ್ಟಿ ಯ ಭರವಸೆ ಏನಾಯಿತು ಎಂದು ಕೇಳಿದರೆ ಪಕೋಡಾ ಮಾರಿ ಎನ್ನುತ್ತಾರೆ ಕೆಲಸ ಕೊಡದಿದ್ದರೂ ಪರ್ವಾಯಿಲ್ಲ. ಆದರೆ ಕಲಿತಂತಹ ನಿರುದ್ಯೋಗಿಗಳಿಗೆ ಗೌರವನಾದರೂ ಕೊಡಿ . ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕುಸಿದಾಗಲೂ ಬೆಲೆ ಇಳಿಸಲಿಲ್ಲ. ರೈತರ ಸಾಲಮನ್ನಾ ಮಾಡಲು ದುಡ್ಡಿಲ್ಲ. ಉದ್ಯಮಿಗಳ ಸಾಲಮನ್ನಾ ಮಾಡುತ್ತಾರೆ . ಬಿಜೆಪಿಯವರು ಅಭಿವೃದ್ಧಿ ಮಾಡಿದ್ದರೆ ಹೇಳಿಕೊಳ್ತಾರೆ, ಅವರು ಹೇಳವುದು ಜಿಎಸ್ಟಿ, ನೋಟ್ ಬ್ಯಾನ್ ಇವರೆಡೆ. ಇಲ್ಲ ಅಂದರೆ ಮೋದಿ ಮೋದಿ ಎನ್ನುತ್ತಾರೆ. ಸತ್ಯ ಕ್ಕೆ ಜಯಸಿಗುವಂತೆ ಕಾಂಗ್ರೆಸ್ ಗೆ ಜಯ ಸಿಗುತ್ತೆ
ಬಿಜೆಪಿ ಅಭಿವೃದ್ಧಿ ಕೇವಲ ಬ್ಯಾನರ್ ಗಳಲ್ಲಿದೆ ಎಂದು ವ್ಯಂಗ್ಯವಾಡಿದರು.

ಸಭೆಯಲ್ಲಿ ಜೆಡಿಎಸ್ ನ ನಾಯಕರು, ಜೆಡಿಎಸ್ ನ ಸ್ಥಳೀಯ ಕಾರ್ಯಕರ್ತರು ಗೈರು ಎದ್ದು ಕಾಣುತ್ತಿತ್ತು. ಕಾಂಗ್ರೆಸನ ಮಾಜಿ ಶಾಸಕರಾದ ಇಕ್ಬಾಲ್ ಅನ್ಸಾರಿ, ಶಿವರಾಜ್ ತಂಗಡಗಿ, ಹಾಲಿ ಶಾಸಕ ಅಮರೇಗೌಡ ಬಯ್ಯಪೂರ, ಮಾಜಿ ಸಂಸದರಾದ ಕೆ ವಿರೂಪಾಕ್ಷಪ್ಪ, ಶಿವರಾಮೇಗೌಡ, ಶಾಕ ರಾಘವೇಂದ್ರ ಹಿಟ್ನಾಳ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು ಇದರ ಬಗ್ಗೆ ಮಾಜಿ ಶಾಸಕ ಬಸವರಾಜ್ ಸ್ಪಷ್ಟನೆ ನೀಡಿ ಅವರು ಸಿದ್ದರಾಮಯ್ಯನವರ ಜೊತೆ ಮೀಟಿಂಗ್ ನಲ್ಲಿರುವುದರಿಂದ ಬಂದಿಲ್ಲ ಎಂದರು.

ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಮಾಜಿ.ಜಿ.ಪಂ ಅಧ್ಯಕ್ಷ ಎಸ್ ಬಿ ನಾಗರಳ್ಳಿ, ಮಾಜಿ ಜಿಲ್ಲಾಧ್ಯಕ್ಷ ಬಸವರಾಜ ಹಿಟ್ನಾಳ, ಜಿ.ಪಂ‌ ಉಪಾಧ್ಯಕ್ಷೆ ರತ್ನಮ್ಮ ನಗರ ಸೇರಿದಂತೆ ಇತರ ನಾಯಕರು, ಕಾರ್ಯಕರ್ತರು ಭಾಗಿಯಾಗಿದ್ದರು.

Please follow and like us:
error