ಕಾಂಗ್ರೆಸ್‌ನ 22 ಶಾಸಕರು ನನ್ನ ಕಂಟ್ರೋಲ್ ‌ನಲ್ಲಿದ್ದಾರೆ: ಸಚಿವ ರಮೇಶ್ ಜಾರಕಿಹೊಳಿ

ಚಾಮರಾಜನಗರ, ಮೇ 29: ಹೈಕಮಾಂಡ್ ಅನುಮತಿ ನೀಡಿದರೆ ಕಾಂಗ್ರೆಸ್‌ನ ಇನ್ನೂ 5 ಜನ ಶಾಸಕರ ರಾಜೀನಾಮೆ ಕೊಡಿಸಿ ಬಿಜೆಪಿಗೆ ಕರೆತರುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಎರಡು ದಿನಗಳಿಂದ ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಜಲ ಸಂಪನ್ಮೂಲ ಸಚಿವ ಜಾರಕಿಹೊಳಿ ಶುಕ್ರವಾರ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆಗಾಗಿ ಆಗಮಿಸಿದ ಸಂದರ್ಭದಲ್ಲಿ ಗುಂಡಾಲ್ ಜಲಾಶಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಂದು ವಾರದೊಳಗೆ ಐದು ಜನ ಶಾಸಕ ರಾಜೀನಾಮೆ ಕೊಡಿಸಬಲ್ಲೆ. ಈಗಲೂ ಕಾಂಗ್ರೆಸ್‌ನ 22 ಜನ ಶಾಸಕರು ನನ್ನ ಕಂಟ್ರೋಲ್‌ನಲ್ಲಿದ್ದಾರೆ ಎಂದರು.

ಕಾಂಗ್ರೆಸ್ ಈಗ ಮುಳುಗುತ್ತಿರುವ ಹಡಗು, ಅಲ್ಲಿಗೆ ಈಗ ಹೋಗುವವರು ಮೂರ್ಖರು. ಇನ್ನು ಮುಂದೆ ನನ್ನ ರಾಜಕೀಯ ಅಂತ್ಯ ಬಿಜೆಪಿಯಲ್ಲೇ ಹೊರತು, ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಮಾತೇ ಇಲ್ಲ ಎಂದರು.

Please follow and like us:
error