ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ೬ನೇ ವಾರ್ಷಿಕೋತ್ಸವ ಅಂಗವಾಗಿ ಗಂಗಾವತಿಯಲ್ಲಿ
“ರಾಜ್ಯ ಕನ್ನಡಿಗರ ಸಮಾವೇಶ”
ಗಂಗಾವತಿ: ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ೬ನೇ ವಾರ್ಷಿಕೋತ್ಸವ ಅಂಗವಾಗಿ ರಾಜ್ಯ ಕನ್ನಡಿಗರ ಸಮಾವೇಶ ಕಾರ್ಯಕ್ರಮವನ್ನು ೨ ರಂದು ಗಂಗಾವತಿಯ ಬೈಪಾಸ್ ರಸ್ತೆಯ ಅಂಬೇಡ್ಕರ್ ನಗರದಲ್ಲಿ ಸಂಜೆ ೦೫:೩೦ಕ್ಕೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೆಬ್ಬಾಳ ಸುಕ್ಷೇತ್ರದ ಶ್ರೀಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು. ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸೈಯ್ಯದ್ ಜಿಲಾನಿಪಾಷಾ ಖಾದ್ರಿಯವರ ಅಧ್ಯಕ್ಷತೆಯಲ್ಲಿ, ಉದ್ಘಾಟಕರಾಗಿ ಡಿ.ವೈ.ಎಸ್.ಪಿ ಬಿ.ಪಿ. ಚಂದ್ರಶೇಖರ್, ನಗರಠಾಣೆ ಇನ್ಸ್ಪೆಕ್ಟರ್ ಉದಯರವಿ, ಕಾಂಗ್ರೆಸ್ ಮುಖಂಡರುಗಳಾದ ಬಸವರಾಜ ಮಾಳಿಮಠ, ರಾಜು ನಾಯಕ, ಭಾಗವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಕನ್ನಡ ಒಕ್ಕೂಟದ ಮುಖಂಡರಾದ ಎನ್. ಸತೀಶ್, ಕೆ. ಎರಿಸ್ವಾಮಿ, ವಿರುಪಾಕ್ಷಿಗೌಡ ನಾಯಕ ಹಾಗೂ ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಅಂಬಣ್ಣ, ದಲಿತರ ಮುಖಂಡರಾದ ಆರತಿ ತಿಪ್ಪಣ್ಣ, ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯ ರಾಜ್ಯಾಧ್ಯಕ್ಷರಾದ ಸಲೀಮ್ ಬೇಗ್, ರೈತಪರ ಹೋರಾಟಗಾರರಾದ ಯುಗಂದರ ನಾಯ್ಡು, ಮಲ್ಲಿಕಾರ್ಜುನ ಹೊಸಮನಿ ಸಿದ್ದಾಪುರರವರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸೈನಿಕರಿಗೆ, ರೈತರಿಗೆ, ವೈದ್ಯರಿಗೆ, ಕನ್ನಡಪರ ಹೋರಾಟಗಾರರಿಗೆ, ಪೌರಕಾರ್ಮಿಕರಿಗೆ, ಬೀದಿವ್ಯಾಪಾರಿಗಳ ಸದಸ್ಯರುಗಳಿಗೆ, ಮಾಧ್ಯಮದ ಮಿತ್ರರಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ, ಕರಾಟೆ, ಸ್ಕೇಟಿಂಗ್ ಕ್ರೀಡಾಪಟುಗಳಿಗೆ ಹಾಗೂ ವಿಶೇಷವಾಗಿ ಐದು ರೂಪಾಯಿ ವೈದ್ಯರೆಂದು ಖ್ಯಾತಿಯಾಗಿರುವ ಡಾ. ಖಾಜಾ ಮನಿಯಾರ್ರವರಿಗೆ ಹಾಗೂ ಪತ್ರಕರ್ತರಾದ ನಾಗರಾಜ ಇಂಗಳಗಿ, ಹರೀಶ್ ಕುಲಕರ್ಣಿ, ಶರಣಯ್ಯಸ್ವಾಮಿ ಕರಡಿಮಠ ಇವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು ಹಾಗೂ ಡಿ.ವೈ.ಎಸ್.ಪಿ ಬಿ.ಪಿ ಚಂದ್ರಶೇಖರ್ರವರು ಕಲ್ಯಾಣ ಕರವೇ ರಾಜ್ಯಾಧ್ಯಕ್ಷರಿಗೆ ಸನ್ಮಾನ ಮಾಡಿದರು.
ಅಲ್ಲದೆ ಸಂಜೆ ೦೫:೩೦ ರಿಂದ ಶಿವರಾಜ ಮೆಲೋಡಿಸ್ ಬೆಳಗಾವಿ ಇವರಿಂದ ನಾಟ್ಯನಾದ, ಸಂಗೀತ, ರಜಮಂಜರಿ ಕಾರ್ಯಕ್ರಮ ಹಾಗೂ ಜೂನಿಯರ್ ಶಿವರಾಜ್ಕುಮಾರ, ಜೂನಿಯರ್ ವಿಷ್ಣುವರ್ಧನ, ಜೂನಿಯರ್ ಯಶ್, ಜೂನಿಯರ್ ಉಪೇಂದ್ರ ಇನ್ನೂ ಅನೇಕ ಕಲಾವಿದರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ರಾಯಚೂರು ಜಿಲ್ಲೆಯ ವೀರೇಶ, ಕಲಬುರ್ಗಿ ಜಿಲ್ಲೆಯ ಮಂಜು, ಎಂ.ಡಿ.ಅನೀಫ್, ಶಬ್ಬೀರ್ ಹುಸೇನ್, ಶರಣಪ್ಪ ಜಿ, ಖಾಜಾಪಾಷಾ ಎಸ್.ಕೆ., ಸ್ಥಳೀಯ ಪದಾಧಿಕಾರಿಗಳು, ನೂರಾರು ಸಾರ್ವಜನಿಕರು, ಪತ್ರಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಿದರು.