ಕಲಬುರ್ಗಿ: ಕನ್ಹಯ್ಯ ಕುಮಾರ್ ಉಪನ್ಯಾಸ ರದ್ದು,144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿ

ಗುಲಬರ್ಗಾ  ವಿವಿಯಲ್ಲಿ ರದ್ದು ಮಾಡಲ್ಪಟ್ಟ ಕನ್ಹಯಕುಮಾರ ಭಾಷಣ ಮಧ್ಯಾಹ್ನ ೧೨ ಗಂಟೆಗೆ ತಿಮ್ಮಾಪುರ ಸರ್ಕಲ್ ಬಳಿ ಇರುವ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆಯಲಿದೆ

ಕಲಬುರ್ಗಿ: ಇಲ್ಲಿಯ ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆಯಲ್ಲಿ ಇಂದು ಆಯೋಜಿಸಿದ್ದ ಕನ್ಹಯ್ಯ ಕುಮಾರ್ ಅವರ ಉಪನ್ಯಾಸವನ್ನು ವಿ.ವಿ.ಕುಲಪತಿ ಪ್ರೊ. ಪರಿಮಳಾ ಅಂಬೇಕರ್ ರದ್ದುಗೊಳಿಸಿದ್ದಾರೆ‌.

ಉನ್ನತ ಶಿಕ್ಷಣ ಇಲಾಖೆಯಿಂದ ಮೌಖಿಕ ಸೂಚನೆ ಅನುಸಾರ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಾರ್ಯಕ್ರಮ ನಡೆಯುವ ಡಾ.ಬಿ‌.ಆರ್.ಅಂಬೇಡ್ಕರ್ ಸಭಾಂಗಣದ ಸುತ್ತಮುತ್ತ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಬೆಳಗ್ಗೆ 11ಕ್ಕೆ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್  ಉಪನ್ಯಾಸ ‌ನೀಡಬೇಕಿತ್ತು. ಆದರೆ ಬೆಳಗ್ಗೆ ‌ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಕಾರ್ಯಕ್ರಮ ‌ನಡೆಸದಂತೆ ನಿರ್ಬಂಧ ಹೇರಲಾಗಿದೆ‌.

ಗುಲಬರ್ಗಾ ವಿವಿಯಲ್ಲಿ ನಡೆಯಲಿದ್ದ ಕನ್ಹಯಕುಮಾರ ಉಪನ್ಯಾಸ ರದ್ದು ,ಬಿಜೆಪಿ ಸರಕಾರದ ರಾಜ್ಯಪಾಲರ ನೇರ ಹಸ್ತದಿಂದ, ಮಧ್ಯರಾತ್ರಿ ಅನುಮತಿ ವಾಪಸು  Sanathkumar Belagali

Please follow and like us:
error