ಕಲಬುರಗಿ ವಾರ್ಡ್ ಸಂಖ್ಯೆ-30ರ ಪ್ರದೇಶಕ್ಕೆ ಜಿಲ್ಲಾಧಿಕಾರಿಗಳ ಭೇಟಿ


ಕಲಬುರಗಿ.:  ಕಲಬುರಗಿ ನಗರದ 76 ವರ್ಷದ ವಯೋವೃದ್ಧ ಕೋರೋನಾ ವೈರಸ್‍ನಿಂದ ನಿಧನವಾಗಿರುವ ಹಿನ್ನೆಲೆಯಲ್ಲಿ ಸದರಿ ವ್ಯಕ್ತಿ ವಾಸಿಸುವ ವಾರ್ಡ್ ನಂಬರ್ 30ರ (ಕೆ.ಎನ್.ಜೆಡ್ ಫಂಕ್ಷನ್ ಹಾಲ್ ಬಳಿ) ಪ್ರದೇಶಕ್ಕೆ ಜಿಲ್ಲಾಧಿಕಾರಿ ಶರತ್ ಬಿ. ಸೇರಿದಂತೆ ಹಿರಿಯ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪಾಲಿಕೆ ಮತ್ತು ಆರೋಗ್ಯಾಧಿಕರಿಗಳಿಗೆ ಸೊಂಕು ಹರಡುವಿಕೆಗೆ ತಡೆಗಟ್ಟಬಹುದಾದ ಎಲ್ಲಾ ಮುನ್ನೇಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದರು.
ನಿಧನ ಹೊಂದಿದ ವ್ಯಕ್ತಿಯ ಮನೆಯಿರುವ ವಾರ್ಡ್‍ನ್ನು ಅಡಳಿತ ಬ್ಲಾಕ್/ ಕಂಟೇನ್‍ಮೆಂಟ್ ಝೋನ್ ಎಂದು ಪರಿಗಣಿಸಿ ಇಲ್ಲಿಂದ ಬೇರೆ ಪ್ರದೇಶಕ್ಕೆ ಸೊಂಕು ಹರಡದಂತೆ ಮುಂಜಾಗ್ರತವಾಗಿ ಸ್ಕ್ರೀನಿಂಗ್ ಮತ್ತು ಅರಿವು ಮೂಡಿಸುವ ಐ.ಇ.ಸಿ ಚಟುವಟಿಕೆಗಳು ತ್ವರಿತಗತಿಯಲ್ಲಿ ನಡೆಸಬೇಕು.
ಇನ್ನು ಕಂಟೇನ್‍ಮೆಂಟ್ ಝೋನ್ ಸುತ್ತಮುತ್ತ 5 ಕಿ.ಮೀ ಪ್ರದೇಶ ಬಫರ್ ಝೋನ್ ಎಂದು ಗುರುತಿಸಿ ಸೊಂಕಿನ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ನಿರಂತರ ನಡೆಯಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಖಡಕ್ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟಿನ್, ಡಿಸಿಪಿ ಕಿಶೋರ್ ಬಾಬು, ಜಿಲ್ಲಾ ಪಂಚಾಯತಿ ಸಿ.ಇ.ಓ. ಡಾ.ಪಿ.ರಾಜಾ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಸೇರಿದಂತೆ ಮಹಾನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

Please follow and like us:
error