ಕರ್ನಾಟಕ ಸಾಹಿತ್ಯ ಅಕಾಡೆಮಿ: ಅರ್ಜಿ ಆಹ್ವಾನ


ಕೊಪ್ಪಳ,   ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕೊರೋನಾ ಲಾಕ್‌ಡೌನ್ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ರಾಜ್ಯ ಮಟ್ಟದಲ್ಲಿ ಮೂರು ದಿನಗಳ ಕಥಾ ಕಮ್ಮಟ, ಲಲಿತ ಪ್ರಬಂಧ ಕಮ್ಮಟ, ವಿಜ್ಞಾನ ಸಾಹಿತ್ಯ ಕಮ್ಮಟ ಹಾಗೂ ಸಾಹಿತ್ಯ ಮತ್ತು ಸಮಾಜಿಕ ಜಾಲತಾಣ ಕಮ್ಮಟ ಸೇರಿದಂತೆ ನಾಲ್ಕು ಕಮ್ಮಟಗಳನ್ನು ನಡೆಸಲು ಉದ್ದೇಶಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
20 ರಿಂದ 45 ವರ್ಷದೊಳಗಿನ ಆಸಕ್ತರು ರಾಜ್ಯದ ಯಾವುದೇ ಭಾಗದಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಅಕ್ಟೋಬರ್.20 ಕೊನೆಯ ದಿನವಾಗಿದೆ. ಪ್ರತಿ ವಿಭಾಗದ ಕಮ್ಮಟಕ್ಕೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ಅಭ್ಯರ್ಥಿಗಳು ಕ.ಸಾ.ಅಕಾಡೆಮಿಯ ವೆಬ್‌ಸೈಟ್: http://karnatakasahithyaacademy.org  ನಿಂದ ಅರ್ಜಿ ನಮೂನೆ ಹಾಗೂ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅಕಾಡೆಮಿಯ ರಿಜಿಸ್ಟಾçರ್ ಕರಿಯಪ್ಪ ಎನ್.  ತಿಳಿಸಿದ್ದಾರೆ.

Please follow and like us:
error