ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಿ. ಮಂಜುನಾಥ್‌ಗೆ ಪ್ರದಾನ

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ
ಗೃಹ ಸಚಿವರಿಂದ ಸಿ. ಮಂಜುನಾಥ್‌ಗೆ ಪ್ರದಾನ
ಬಳ್ಳಾರಿ, ಜ.೩೧:ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರತಿಷ್ಠಿತ ೨೦೧೭ ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನಗರದ ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಅವರಿಗೆ ರಾಜ್ಯ ಗೃಹ ಸಚಿವ ರಾಮಲಿಂಗರೆಡ್ಡಿ ಅವರು ಪ್ರದಾನ ಮಾಡಿದರು.
ಅಕಾಡೆಮಿ ಬೆಂಗಳೂರಿನ ಡಾ. ಅಂಬೇಡ್ಕರ್ ಭವನದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಹಾಗೂ ೨೦ಸಾವಿರ ರೂ. ಚೆಕ್ ನೀಡಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ಧರಾಜು, ಪ್ರಸಿದ್ಧ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಪಿ ಎಸ್ ಹರ್ಷ, ಅಕಾಡೆಮಿ ಕಾರ್ಯದರ್ಶಿ ಎಸ್. ಶಂಕರಪ್ಪ, ಸದಸ್ಯರಾದ ನಾಗರಾಜ್ ನಾಗತಿಹಳ್ಳಿ, ಬಿ ವೆಂಕಟಸಿಂಗ್, ರುದ್ರಣ್ಣ ಹರ್ತಿಕೋಟೆ, ಮುತ್ತು ನಾಯ್ಕರ್, ನಿಂಗಪ್ಪ ಹೆಚ್ ಚಾವಡಿ, ಶ್ರೀಮತಿ ಆಫ್ಸಿನ್ ಯಾಸ್ಮೀನ್, ಕೆ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Please follow and like us:
error