ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಪ್ರತಿಭಟನೆ

koppal  ಕೇರಳ, ತ್ರಿಪುರ, ತಮಿಳುನಾಡು ಮಾದರಿಯಲ್ಲಿ ಕೃಷಿಕೂಲಿಕಾರರ ಸಮಗ್ರ ಕಾನೂನನ್ನು ಅಂಗೀಕರಿಸಲು  ಮತ್ತು ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರಿಗೆ ಇರುವಂತೆ ಕೃಷಿ ಕಾರ್ಮಿಕರಿಗೂ ಒಂದು ಕಲ್ಯಾಣ ನಿಧಿಯನ್ನು ಸ್ಥಾಪನೆ ಮಾಡುವ ನಿರ್ಧಾರವನ್ನು ಬಜೆಟ್‌ನಲ್ಲಿ ಘೋಷಿಸಲು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಿದರು.

ಹಕ್ಕೊತ್ತಾಯಗಳು

೧.     ಕೇರಳ, ತ್ರಿಪುರ, ತಮಿಳುನಾಡು ಮೊದಲಾದ ರಾಜ್ಯಗಳ ಮಾದರಿಯಲ್ಲಿ ರಾಜ್ಯದ ಕೃಷಿ ಕೂಲಿಕಾರರಿಗೆ ಮತ್ತು ಗ್ರಾಮೀಣ ಕೆಲಸಗಾರರಿಗೆ ಕನಿಷ್ಠ ವೇತನ, ತುಟ್ಟಿ ಭತ್ಯೆ ಅಲ್ಲದೆ ಭವಿಷ್ಯ ನಿಧಿ (ಫಿ.ಎಫ್.), ಇ.ಎಸ್.ಐ., ನಿವೃತ್ತಿ ವೇತನ ಮುಂತಾದ ಸಾಮಾಜಿಕ ಭದ್ರತೆಯ ಸೌಲಭ್ಯಗಳನ್ನು ಖಾತರಿಪಡಿಸುವ ಸಮಗ್ರ ಶಾಸನವೊಂದನ್ನು ರೂಪಿಸುವ ವಾಗ್ದಾನವನ್ನು ೨೦೨೧-೨೨ ರ ಬಜೆಟ್‌ಬಲ್ಲಿ ಘೋಷಿಸಬೇಕು.

೨.     ಕಟ್ಟಡ ನಿರ್ಮಾಣ ಕಾರ್ಮಿಕರು, ಹಮಾಲಿ ಕಾರ್ಮಿಕರು, ಬೀಡಿ ಕಾರ್ಮಿಕರು ಮೊದಲಾದ ಅಸಂಘಟಿತ ಕಾರ್ಮಿಕ ವಿಭಾಗಗಳಿಗೆ ರೂಪಿಸಿರುವಂತೆ ಕೃಷಿ ಕೂಲಿಕಾರರಿಗಾಗಿ ಕಲ್ಯಾಣ ನಿಧಿಯೊಂದನ್ನು ಸ್ಥಾಪಿಸಿ ಕಲ್ಯಾಣ ಮಂಡಳಿಯ ಮೂಲಕ ಅದರ ನಿರ್ವಹಣೆ ಮಾಡುವುದಾಗಿ ಈ ಸಲದ ಬಜೆಟ್‌ನಲ್ಲಿ ಪ್ರಕಟಿಸಬೇಕು. ಅಲ್ಲಿಯ ವರೆಗೆ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನೀಡುವ ಸೌಲಭ್ಯಗಳನ್ನು ಕೃಷಿ ಕೂಲಿಕಾರರಿಗೂ ನೀಡಬೇಕು.

೩.     ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಎಲ್ಲಾ ಗ್ರಾಮಗಳಿಗೆ ವಿಸ್ತರಿಸಿ ಭ್ರಷ್ಟಾಚಾರ ಮುಕ್ತವಾಗಿ ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಬೇಕು. ಮಾಡಿದ ಕೆಲಸಕ್ಕೆ ವಾರಕ್ಕೊಮ್ಮೆ ತಪ್ಪದೆ ವೇತನ ನೀಡಬೇಕು. ನಮೂನೆ ೬ ರಲ್ಲಿ ಕೆಲಸಕ್ಕಾಗಿ ಅರ್ಜಿಸಲ್ಲಿಸಿದ ತಕ್ಷಣ ಕೆಲಸ ಕೊಡಬೇಕು. ಕೆಲಸ ಕೊಡಲಾಗದ ದಿನಗಳಿಗೆ ತಪ್ಪದೆ ನಿರುದ್ಯೋಗ ಭತ್ಯೆ ನೀಡಬೇಕು. ವರ್ಷದಲ್ಲಿ ೨೦೦ ದಿನ ಕೆಲಸ ಕೊಡಬೇಕು. ದಿನವೊಂದಕ್ಕೆ ರೂ. ೬೦೦ ವೇತನ ನೀಡಬೇಕು. ಬಾಕಿ ವೇತನ ಪಾವತಿ ಮಾಡಬೇಕು. ಯೋಜನೆಯನ್ನು ಪಟ್ಟಣ ಪ್ರದೇಶಕ್ಕೂ ವಿಸ್ತರಿಸಬೇಕು.

೪.     ಎಲ್ಲಾ ವಸತಿರಹಿತ ಕೂಲಿಕಾರ ಕುಟುಂಬಗಳಿಗೆ ಮನೆನಿವೇಶನಗಳನ್ನು ಒದಗಿಸಲು ಅಗತ್ಯವಿರುವ ಭೂಮಿಯನ್ನು ಸ್ವಾಧಿನಪಡಿಸಿಕೊಳ್ಳಲು ಬಜೆಟ್‌ನಲ್ಲಿ ಗರಿಷ್ಠ ಪ್ರಮಾಣದ ಮೊತ್ತವನ್ನು ಮೀಸಲಿಡಬೇಕು, ಬಡವರು ಸರ್ಕಾರಿ ಜಾಗದಲ್ಲಿ ಕಟ್ಟಿದ ಮನೆಗಳನ್ನು ಸಕ್ರಮಗೊಳಿಸುವ ಪ್ರಕ್ರಿಯೆಯನ್ನು ತೀವ್ರಗೊಳಿಸಬೇಕು.

೫.     ಎಲ್ಲ ಕೃಷಿ ಕೂಲಿಕಾರರ ಕುಟುಂಬಗಳಿಗೆ ಯಾವುದೇ ಷರತ್ತು ವಿಧಿಸದೆ ಬಿಪಿಎಲ್ ರೇಷನ್ ಕಾರ್ಡ್ ವಿತರಿಸಬೇಕು. ಯೂನಿಟ್ ಪದ್ಧತಿಯನ್ನು ಕೈಬಿಟ್ಟು ಮೊದಲಿನಂತೆ ಕೆ.ಜಿ.ಗೆ. ಒಂದು ರೂ. ದರದಲ್ಲಿ ಕನಿಷ್ಠ ೩೦ ಕೆಜಿ ಅಕ್ಕಿಯನ್ನು ವಿತರಿಸಬೇಕು. ಬೇಳೆ, ಎಣ್ಣೆ, ಸಕ್ಕರೆ ಮೊದಲಾದ ಅಗತ್ಯ ವಸ್ತುಗಳನ್ನು ಗರಿಷ್ಠ ರಿಯಾಯ್ತಿಯಲ್ಲಿ ಮಾರಾಟ ಮಾಡಬೇಕು. ಅಕ್ಕಿ ಜೊತೆಯಲ್ಲಿ ಜೋಳ, ರಾಗಿಯನ್ನು ವಿತರಿಸಬೇಕು. ಸೀಮೆ ಎಣ್ಣೆ ನೀಡಬೇಕು.

೬.     ಕೃಷಿ ಕೂಲಿಕಾರರಿಗೆ ಉಪಕಸುಬುಗಳನ್ನು ಕೈಗೊಳ್ಳಲು ಸಬ್ಬಿಡಿ ಸಹಿತದ ಸಾಲವನ್ನು ಶೇಕಡ ೧ ರ ಬಡ್ಡಿದರದಲ್ಲಿ ಒದಗಿಸಬೇಕು.

೭.      ಕೃಷಿ ಕೂಲಿಕಾರರ ಮನೆಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಬೇಕು.

೮.     ೬೦ ವರ್ಷ ದಾಟಿದ ಎಲ್ಲ ಕೃಷಿ ಕೂಲಿಕಾರರಿಗೆ ರೂ. ೧೦೦೦ ದರದಲ್ಲಿ ಮಾಸಿಕ ನಿವೃತ್ತಿ ವೇತನ ನೀಡಬೇಕು.

೯.     ವಲಸೆ ಕಾರ್ಮಿಕರ ಕಾಯ್ದೆಯನ್ನು ಪರಿಷ್ಕರಿಸಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅವರಿಗೆ ಅರೋಗ್ಯಕರ ಪರಿಸರದಲ್ಲಿ ವಾಸಕ್ಕೆ ಮನೆಗಳನ್ನು ಒದಗಿಸಬೇಕು. ಸೂಕ್ತ ರಕ್ಷಣೆ ಒದಗಿಸಬೇಕು.

೧೦.    ಬಡವರ ಬಗರ್ ಹುಕುಂ ಸಾಗುವಳಿ ಪ್ರಕರಣಗಳನ್ನು ಸಕ್ರಮಗೊಳಿಸುವ ಕ್ರಮವನ್ನು ವೇಗವಾಗಿ ಜಾರಿಗೊಳಿಸಬೇಕು. ೫ ಎಕರೆ ಒಳಗಿನ ಭೂರಹಿತ ಬಗರ್ ಹುಕುಂ ಸಾಗುವಳಿದಾರರನ್ನು ಕಂದಾಯ ಅಥವ ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸಬಾರದು.

೧೧.    ಕೃಷಿ ಮಾಡಲು ಬಯಸುವ ದಲಿತರಿಗೆ ಹಾಗೂ ದೇವದಾಸಿ ಮಹಿಳೆಯರಿಗೆ ತಲಾ ೨ ಎಕರೆ ಕೃಷಿ ಭೂಮಿಯನ್ನು ನೀಡಬೇಕು. ಅವರ ಸ್ಮಶಾನಗಳಿಗೆ ಭೂಮಿಯನ್ನು ಒದಗಿಸಬೇಕು.

೧೨.   ಕೃಷಿ ಕೂಲಿಕಾರರಿಗೆ ಕೊರೊನಾ ಲಸಿಕೆಯನ್ನು ಹಾಗೂ ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಬೇಕು. ಕೊರೋನಾ ಹಾವಳಿಯಿಂದ ಬಡಕುಟುಂಬಗಳು ಚೇತರಿಸದೆ ಇರುವದರಿಂದ ಅವರ ಬ್ಯಾಂಕ್ ಖಾತೆಗಳಿಗೆ ಮುಂದಿನ ೬ ತಿಂಗಳ ಕಾಲ ರೂ. ೭೫೦೦ ಆರ್ಥಿಕ ನೆರವು ನೀಡಬೇಕು.

೧೩.   ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳಿಗೆ ಆರೋಗ್ಯ ರಕ್ಷಣೆ ಒದಗಿಸಬೇಕು. ಎಲ್ಲಾ ಕೂಲಿಕಾರ ಮಕ್ಕಳಿಗೆ ಪ್ರವೇಶ ಸಾಧ್ಯವಾಗುವಂತೆ ಹಾಸ್ಟೆಲುಗಳ ಸಂಖ್ಯೆಯನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಬೇಕು.

ತಾಲೂಕ ಅಧ್ಯಕ್ಷರು ಸುಂಕಪ್ಪ ಗದಗ, ತಾಲೂಕ ಕಾರ್ಯದರ್ಶಿಗಳು ಅಂದಪ್ಪ ಬರದೂರು, ಸಿ.ಐ.ಟಿಯು. ಜಿಲ್ಲಾ ಕಾರ್ಯದರ್ಶಿ ಕಾಶಿಂಸಾಬ ಸರ್ದಾg, ಡಿ.ವೈ.ಎಫ್.ಐ. ಅಧ್ಯಕ್ಷರು ಹುಲಗಪ್ಪ ಗೋಕಾವಿ, ಕಾರ್ಯದಿರ್ಶಿ ಹುಸೇನಸಾಬ ನಧಾಫ್, ಅಮರಮ್ಮ ಗದಗ, ಫಕಿರವ್ವ ಮಿರಗನತಾಂಡಿ, ಪಾರವ್ವ ಗದ್ದಿ, ಗಂಗಮ್ಮ ಕಾತರಕಿ, ಶೃತಿ ಹಾದಿ, ಫಕಿರಮ್ಮ ಗೌರಿಪುರ, ಅಮೀನಾ ಬೇಗಂ ಕರಡಿ, ಉಸ್ಮಾನಸಾಬ ಕರಡಿ, ರೇಣುಕಮ್ಮ ಭೀಮನೂರು, ಹನುಮವ್ವ ಗೌಡ್ರ, ಲಕ್ಷ್ಮವ್ವ ಸಂಗಟಿ, ಯಲ್ಲಮ್ಮ ಪೂಜಾರ, ಯಲ್ಲಪ್ಪ ಗೌಡ್ರ, ಶಶಿಕಲಾ ಇಟಗಿ, ನೇತ್ರಾವತಿ ವಾಲ್ಮೀಕಿ, ಸೀಮಣ್ಣ, ಗೀತಾ, ಸಂಗನಳ್ಳಿ, ರೇಣುಕಮ್ಮ ಇಡಗಲ್, ಬಂದಮ್ಮ ಹಕಾರಿ, ರೇಖಾ ಹಕಾರಿ, ಹನುಮಂತಪ್ಪ ಕುರಿ, ಹನುಮಂತಪ್ಪ ಹಳ್ಳಿ. ಭಾಗವಹಿಸಿದ್ಧರು.

 

Please follow and like us:
error