ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ- ಬಿ.ಶ್ರೀರಾಮುಲು

Koppal ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಕೊಟ್ಟಿರುವುದು ಈ ದೇಶದ ದುರಂತ. ಒಂದು ರೀತಿ ಜಮ್ಮು ಕಾಶ್ಮೀರದಲ್ಲಿ ಇರುವಂತಹ ತೀವ್ರವಾದಿಗಳಿಗೆ ಬೆಂಬಲ ನೀಡುವಂತಹ ಪ್ರಣಾಳಿಕೆಯಾಗಿದೆ.

ಜಮ್ಮಉ ಕಾಶ್ಮೀರದಲ್ಲಿರುವಂತ ಟೆರರಿಸ್ಟ್ ಗಳನ್ನು ರಕ್ಷಣೆ ಮಾ ಡುವಂತಹ ಪ್ರಣಾಳಿಕೆ ನೀಡಿದೆ. ಇದು ನಮ್ಮ ಸೈನಿಕರಿಗೆ ವಿರೋಧವಾಗಿದೆ. ಟೆರರಿಸ್ಟ್ ಗಳಿಗೆ ಸಪೋರ್ಟ ಮಾಡ್ತಾ ಇದ್ದಾರೋ ಸೈನಿಕರಿಗೆ ಸಪೋರ್ಟ ಮಾಡ್ಥಾ ಇದ್ದಾರೋ ಅರ್ಥ ಆಗ್ತಾ ಇಲ್ಲ. ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಹೇಳಿದರು‌ ಕೊಪ್ಪಳದಲ್ಲಿಂದು ಮಾತನಾಡಿದ ಅವರು ಮತ್ತೊಂದು ಕಡೆ ರೈತರಿಗೆ 72 ಸಾವಿರ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಸ್ವತಂತ್ರ ಬಂದು ಇಷ್ಟು ವರ್ಷ ಆಡಳಿತ ಮಾಡಿದ ಇವರಿಗೆ ರೈತರು ಇಂದು ನೆನಪಾಗಿದ್ದಾರೆ. ರಾಹುಲ್ ಗಾಂಧಿ ಪ್ರಧಾನಮಂತ್ರಿ ಅಭ್ಯರ್ಥಿಗೆ ಅರ್ಹರಲ್ಲ. ಸೋಲಿನ ಭಯದಿಂದ ಇಂತಹ ಕೆಲಸಕ್ಕೆ ಬಾರದ ಪ್ರಣಾಳಿಕೆಯನ್ನು ಮಾಡಿದ್ದಾರೆ. ಇಲ್ಲೇ ಅರ್ಥವಾಗುತ್ತದೆ ರಾಹುಲ್ ಗಾಂಧೀಗೆ ಅಧಿಕಾರದ ಅನುಭವ ಇಲ್ಲ ಎಂದು ಈ ಪ್ರಣಾಳಿಕೆಯನ್ನು ಯಾರೂ ಒಪ್ಪುವುದಿಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಸನ ಮತ್ತು ಮಂಡ್ಯಕ್ಕೆ ಸಿಮೀತ ಻ಅಲ್ಲಿ 2ಜೋಡೆತ್ತುಗಳು ಬಹುಷಃ ಅವು ಜೋಡೆತ್ತುಗಳಲ್ಲ ಕಳ್ಳೆತ್ತುಗಳು ಒಬ್ಬ ಮಹಿಳೆಯನ್ನು ಸೋಲಿಸುವುದಕ್ಕೆ ರಾಜಕೀಯ ಕುತಂತ್ರ ನಡೆಸಿವೆ. ಎಲ್ಲ ಮಂತ್ರಿಗಳು ಎಲ್ಲಾ ಶಾಶಕರು ಸೇರಿ ಜೋಡೆತ್ತುಗಳ ಜೊತೆ ಅಂಬರೀಷ್ ಧರ್ಮ ಪತ್ನಿ ಸುಮಲತಾರನ್ನು ಸೋಲಿಸುವುದಕ್ಕೆ ಪ್ರಯತ್ನ ಮಾಡುತ್ತಿವೆ. ಏನೇ ಪ್ರಯತ್ನ ಮಾಡಿದರೂ ಸುಮಲತಾ ಗೆಲಉವು ನಿಶ್ಚಿತ. ಸುಮಲತಾ ಮಂಡ್ಯದ ಗೌಡ್ತಿ ಅಲ್ಲ ಅಂದ್ರೆ ಸೋನಿಯಾ ಗಾಂಧಿ ಈ ದೇಶದ ಪ್ರಜೆ ಅಲ್ಲ. ನಿಖಿಲ್ ಕುಮಾರಸ್ವಾಮಿ ಗೆಲ್ಲುವುದಿಲ್ಲ. ಭಾರತೀಯ ಜನತಾ ಪಾರ್ಟಿ ಬಾಹ್ಯ ಬೆಂಬಲ ನೀಡಿದೆ. ಕಾಂಗ್ರೆಸ್ ಜೆಡಿಎಸ್ ಸೇರಿ ಇವತ್ತು ಚುನಾವಣೆ ನಡೆಸುತ್ತಿದ್ದಾರೆ. ಬಹುಷಃ ರಾಜ್ಯದಲ್ಲಿ ಅವರು 4 ಸೀಟು ಗೆಲ್ಲುವುದು ಕೂಡಾ ಕಷ್ಟವಿದೆ. ಈಗಾಗಲೇ ಭಾರತದಲ್ಲಿ ಧೂಳಿಪಠವಾಗಿದೆ. ಕರ್ನಾಟಕದಲ್ಲಿಯೂ ಧೂಳಿಪಟವಾಗಲಿದೆ. ಮೋದಿಯವರ ಅಲೆಯಿಂದ ಎಲ್ಲರೂ ಗೆಲ್ಲುತ್ತೆವೆ. ಅಧಿಕಾರ ಕಳೆದುಕೊಳ್ಳುತ್ತೇವೆ ಎನ್ನುವ ಭಯದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಜೆಪಿಯ ನಾಯಕರ ಬಗ್ಗೆ ಆರೋಪ ಮಾಡುತ್ತಿವೆ. ಈ ಭಾಗದಲ್ಲಿ ಇಕ್ಬಾಲ್ ಅನ್ಸಾರಿ ಪ್ರಚೋದನಕಾರಿ ಭಾಷಣ ಮಾಡುತ್ತಾ ಬಂದಿದ್ದಾರೆ. ಹಿಂದೂ ಮುಸ್ಲಿಂರನ್ನು ಇಬ್ಬಾಗ ಮಾಡುವ ಕೆಲಸ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಈಶ್ವರಪ್ಪನವರು ಟೀಕೆ ಮಾಡಿದ್ದಾರೆ ಹೊರತು ಮುಸ್ಲಿಂ ಸಮುದಾಯವನ್ನು ಅಪಮಾನ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದರು.

Please follow and like us:
error