ಕರೋನಾ ಮಹಾಮಾರಿಗೆ ಇಬ್ಬರು ಎಎಸೈಗಳು ಬಲಿ

ಹಾಸನ: ಕಳೆದ ಕೆಲವು ದಿನಗಳಿಂದ ಕೊರೋನಾ ಮಹಾಮಾರಿಯ ಆರ್ಭಟ ಕಡಿಮೆಯಾಗುತ್ತಿದೆ ಎನ್ನಲಾಗಿತ್ತು. ಆದರೆ ಮತ್ತೆ  ಕೊರೋನಾಗೆ ಪೊಲೀಸ್ ಇಲಾಖೆಯ ಇಬ್ಬರು  ಪ್ರಾಣ ಕಳೆದುಕೊಂಡಿದ್ದಾರೆ

ಹಾಸನದ ಬಡಾವಣೆ ಪೊಲೀಸ್ ಠಾಣೆಯ ಎಎಸ್ಐ ಬಾಲಕೃಷ್ಣ ಹಾಗೂ ಗೊರೂರು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸಟೇಬಲ್ ಆಗಿ ಇತ್ತೀಚೆಗೆ ಬಡ್ತಿ ಹೊಂದಿ ಎಎಸ್ಐ ಆಗಿದ್ದ ದೊರೆಸ್ವಾಮಿ ಕೊರೋನಾಗೆ ಬಲಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾದ ಪರಿಣಾಮ ತಪಾಸಣೆ ಮಾಡಿದಾಗ ಇಬ್ಬರಿಗೂ ಕೊರೋನಾ ಪಾಸಿಟಿವ್ ಇರುವುದು ಖಚಿತವಾಗಿತ್ತು. ಇಬ್ಬರಿಗೂ ನಿರಂತರವಾಗಿ ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.  ಇಬ್ಬರ ಸಾವು ಹಾಸನ ಜಿಲ್ಲೆಯ ಪೊಲೀಸ್ ಇಲಾಖೆಯನ್ನ ತಲ್ಲಣಗೊಳಿಸಿದ್ದು, ಮತ್ತೆ ಭಯ  ಆವರಿಸುವಂತೆ ಮಾಡಿದೆ. ಇಬ್ಬರು ಎಎಸ್ಐಗಳ ಸಾವಿಗೆ ಹಿರಿಯ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

Please follow and like us:
error