fbpx

ಕರೋನಾ ಭ್ರಷ್ಟಾಚಾರ : ಸರಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಾವಳಿ

ಕೊರೊನಾ ಸಂಬಂಧಿಸಿದ ಆರೋಪ ಬಂದಾಗೆಲ್ಲ ‘ದಾಖಲೆ ನೀಡಿ’ ‘ವಿಧಾನಸೌಧಕ್ಕೆ ಬನ್ನಿ’ ಎಂದೆಲ್ಲ ಸವಾಲು ಹಾಕಿ ಕೆಲವು ಸಚಿವರು ವಿಷಯಾಂತರ ಮಾಡುತ್ತಿದ್ದಾರೆ. ಸರ್ಕಾರ ಅರೆಬರೆ ಮಾಹಿತಿ ನೀಡಿತಪ್ಪಿಸಿ ಕೊಳ್ಳುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಅವರಿಗೆ ನಿರ್ದಿಷ್ಠ ವಿವರ ಕೇಳಿ ಪತ್ರ ಬರೆದಿದ್ದೇನೆ. ಕೊರೊನಾ ನಿಯಂತ್ರಣಕ್ಕಾಗಿ ಎಷ್ಟು ಪ್ರಮಾಣದ ಸಾಮಗ್ರಿ ಖರೀದಿಸಲಾಗಿದೆ? ಪ್ರತಿ ಸಾಮಗ್ರಿಯ ಬೆಲೆಯೆಷ್ಟು? ಬಿಡ್/ಕೊಟೇಷನ್ ಮೂಲಕ ಪಾಲ್ಗೊಂಡ ಸಂಸ್ಥೆಗಳು ಯಾವುವು? ಸರಬರಾಜು ಆದೇಶ ಪಡೆದುಕೊಂಡ ಸಂಸ್ಥೆ ಯಾವುದು? ಹೆಚ್ಚುದರ ಕೋಟ್ ಮಾಡಿದ ಕಂಪೆನಿಗೆ ಸರಬರಾಜು ಆದೇಶ ನೀಡಿರುವ ಪ್ರಕರಣಗಳೆಷ್ಟು? ಕಾರಣಗಳೇನು? ಕೊರೊನಾ ನಿಯಂತ್ರಣ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ತಕರಾರುಗಳಿದ್ದರೂ ಪಾವತಿ ಮಾಡಲಾದ ಹಣ ಎಷ್ಟು? ಕೇಂದ್ರ ಸರ್ಕಾರ ಖರೀದಿ ಮಾಡಿದ ಸಾಮಗ್ರಿಗಳು ಯಾವುವು? ಅವುಗಳಲ್ಲಿ ಕಳಪೆಯಾಗಿದೆ ಎಂದು ಬಂದ ದೂರುಗಳೆಷ್ಟು? ಆ ದೂರುಗಳ ಕುರಿತು ಕೈಗೊಂಡಿರುವ ಕ್ರಮಗಳೇನು? ಕೇಂದ್ರ ಮತ್ತು ರಾಜ್ಯ ಸರ್ಕಾರ ಖರೀದಿಸಿದ ಸಾಮಗ್ರಿಗಳನ್ನು ಎಲ್ಲೆಲ್ಲಿ ಮತ್ತು ಎಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ? ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಎಷ್ಟು? ಅದರಲ್ಲಿ ಖರ್ಚು ಮಾಡಲಾದ ಅನುದಾನ ಎಷ್ಟು? ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಎಷ್ಟು? ಖರ್ಚಾಗಿರುವುದು ಎಷ್ಟು? ಕೊರೊನಾ ನಿಯಂತ್ರಣ ಸಾಮಗ್ರಿ ಸರಬರಾಜು ಆದೇಶ ಪಡೆದ ಕಂಪೆನಿ ಸರಬರಾಜು ಮಾಡಿದ ಉತ್ಪನ್ನಗಳ ಪ್ರಮಾಣ ಎಷ್ಟು? ಗುಣಮಟ್ಟ ಸರಿಇಲ್ಲದ ಕಾರಣಕ್ಕೆ ತಿರಸ್ಕರಿಸಲ್ಪಟ್ಟ ಸಾಮಗ್ರಿಗಳು ಯಾವುವು? ಕಳಪೆ ಸಾಮಗ್ರಿ ಸರಬರಾಜು ಮಾಡಿದ ಕಂಪೆನಿಗಳು ಯಾವುವು? ಕಳಪೆ ಸಾಮಗ್ರಿಗಳ ಪ್ರಮಾಣ ಎಷ್ಟು?  ಕೊರೊನಾ ನಿಯಂತ್ರಣಕ್ಕಾಗಿ ಎಸ್‌ಡಿಆರ್‌ಎಫ್ ಮತ್ತು ಎನ್ ಡಿ ಆರ್ ಎಫ್ ಅನುದಾನದಲ್ಲಿ ಜಿಲ್ಲೆಗಳಿಗೆ ಹಂಚಿಕೆ ಮಾಡಿದ ಹಣ ಎಷ್ಟು? ಆ ಅನುದಾನದಲ್ಲಿ ಜಿಲ್ಲಾಡಳಿತಗಳು ಯಾವ ಉದ್ದೇಶಕ್ಕೆ ಎಷ್ಟು ಖರ್ಚು ಮಾಡಿದೆ?ಎಂದು ಮುಖ್ಯಮಂತ್ರಿಗಳಿಗೆ  ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ

 

Please follow and like us:
error
error: Content is protected !!