ಕರವೇ #ಕನ್ನಡವಿವಿಉಳಿಸಿ ಅಭಿಯಾನ ಯಶಸ್ವಿ : ಸರಕಾರದಿಂದ 3.52 ಕೋಟಿ ವಿಶೇಷ ಸಹಾಯಾನುಧಾನ ಬಿಡುಗಡೆ

ಕನ್ನಡನೆಟ್ :  ಕರವೇ  ಹಮ್ಮಿಕೊಂಡಿದ್ದ #ಕನ್ನಡವಿವಿಉಳಿಸಿ  ಅಭಿಯಾನ ಯಶಸ್ವಿಯಾಗಿದೆ. ಹಂಪಿ  #ಕನ್ನಡವಿವಿಉಳಿಸಿ ಅಭಿಯಾನದ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ವಿಶ್ವವಿದ್ಯಾಲಯದ ಹಲವು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿತ್ತು. ಅದರಲ್ಲಿ ಬಹಳ ಮುಖ್ಯವಾದದ್ದು ಗುತ್ತಿಗೆ ನೌಕರರಿಗೆ ಕಳೆದ ಹತ್ತು ತಿಂಗಳಿನಿಂದ ಸಂಬಳ ನೀಡದೇ ಇರುವುದೂ ಕೂಡ ಒಂದಾಗಿತ್ತು. ರಾಜ್ಯ ಸರ್ಕಾರ ಈಗ 3.52 ಕೋಟಿ ರುಪಾಯಿಗಳ ವಿಶೇಷ ಸಹಾಯಾನುದಾನವನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಈ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು‌ ಬಿಡುವಂತಾಗಿದೆ.

#ಕನ್ನಡವಿವಿಉಳಿಸಿ ಅಭಿಯಾನ ನಡೆಸಿದಾಗಿನಿಂದಲೂ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ವಿಶೇಷ ಕಾಳಜಿ ವಹಿಸಿ, ವಿಶ್ವವಿದ್ಯಾಲಯದ ಒಂದೊಂದೇ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಕೃತಜ್ಞತೆಗಳು. ಹಾಗೆಯೇ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲ ಕನ್ನಡದ ಮನಸುಗಳಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ, ನಾರಾಯಣಗೌಡ್ರ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

https://www.facebook.com/NarayanaGowdruTA/posts/3831389130242590https://www.facebook.com/NarayanaGowdruTA/posts/3831389130242590

 

Please follow and like us:
error