ಕಮ್ಯುನಿಸ್ಟ್ ನಾಯಕ ಕಾಮ್ರೇಡ್ ಮಾರುತಿ ಮಾನ್ಪಡೆ ಕರೋನಾಕ್ಕೆ ಬಲಿ

ರಾಯಚೂರು : ಕರ್ನಾಟಕದ ಹಿರಿಯ ಕಮ್ಯುನಿಸ್ಟ್ ನಾಯಕ ಕಾಮ್ರೇಡ್ ಮಾರುತಿ ಮಾನ್ಪಡೆ ಅವರು ಇಂದು ಬೆಳಗಿನ ಜಾವ ಕೊನೆಯುಸಿರೆಳೆದರು.ಕಳೆದ ಎರಡು ವಾರಗಳಿಂದ ಕೊರೊನಾ ಸೋಂಕಿಗೊಳಗಾಗಿದ್ದ ಮಾನ್ಪಡೆ ಅವರನ್ನು ಸೊಲ್ಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮಾನ್ಪಡೆ ಅವರ ನಿಧನದಿಂದ ಕಲ್ಯಾಣ ಕರ್ನಾಟಕ ಭಾಗ ಒಬ್ಬ ನಿಷ್ಟ ಜನಪರ ಹೋರಾಟಗಾರನನ್ನು ಕಳೆದುಕೊಂಡಂತಾಗಿದೆ. ಶೋಷಿತ ಸಮುದಾಯದಿಂದ ಬಂದ, ಅಪಾರ ಆತ್ಮವಿಶ್ವಾಸದ ಪ್ರಬಲ ನಾಯಕನೊಬ್ಬನನ್ನು ಕೊರೋನ ಬಲಿ ಪಡೆದಿದೆ. ಸದಾ ಕಾರ್ಮಿಕರ ಏಳಿಗೆಗಾಗಿ ಹೋರಾಡುತ್ತಲೇ ಬದುಕಿದ ನಾಯಕ, ಹೋರಾಟಗಾರ ಮಾನ್ಪಡೆ ನಿಧನಕ್ಕೆ ಕರ್ನಾಟಕದ ಜೀವಪರ ಮನಸ್ಸುಗಳು ಕಂಬನಿ ಮಿಡಿದಿವೆ.

Please follow and like us:
error