ಕಫ್ರ್ಯೂ ಹೇರಿ ಹೋರಾಟಕ್ಕೆ ಆಸ್ಪದವಿಲ್ಲದ ಸಮಯದಲ್ಲಿ ಜಿಂದಾಲ್ ಗೆ ಭೂಮಿ :   ಪತ್ರೇಶ್ ಹಿರೇಮಠ್

Kannadanet ಹಗರಿಬೊಮ್ಮನಹಳ್ಳಿ :- ಜಿಂದಾಲ್ ಕಾರ್ಖಾನೆಗೆ ಭೂಮಿ ಪರಭಾರೆ ವಿರೋಧಿಸಿ ಅಹೋರಾತ್ರಿ ಧರಣಿ ನಡೆಸಿದ್ದ ಬಿಜೆಪಿ ಇಂದು ರಾಜ್ಯದಾದ್ಯಂತ ಕೋರೋನಾ ಕಫ್ರ್ಯೂ ಹೇರಿ ಪ್ರತಿಭಟನೆ ಮಾಡಲು ಅವಕಾಶವಿಲ್ಲದಂತೆ ಮಾಡಿ ಅತಿ ಕಡಿಮೆ ಬೆಲೆಗೆ ಜಿಂದಾಲ್ ಕಾರ್ಖಾನೆಗೆ ಭೂಮಿ ಪರಭಾರೆ ಮಾಡಿದ್ದು ಈ ನಿರ್ಣಯವನ್ನು ಹಿಂಪಡೆಯಬೇಕು ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಪತ್ರೇಶ್ ಹಿರೇಮಠ್ ಒತ್ತಾಯಿಸಿದ್ದಾರೆ.

ಹಳ್ಳಿಗಳಲ್ಲಿ ಚಿಕ್ಕ ಸೈಟಿನ ಬೆಲೆ ಎರಡು ಲಕ್ಷ ಇರುವಾಗ ಜಿಂಧಾಲ್ ಕಾರ್ಖಾನೆಗೆ ಹತ್ತಿರವಿರುವ 3677 ಎಕರೆ ಭೂಮಿಯನ್ನು ಎಕರೆಗೆ ಕೇವಲ 1.20 ಲಕ್ಷಕ್ಕೆ ಮಾರಿರುವುದು ನೋಡಿದರೆ ಮುಖ್ಯಮಂತ್ರಿಯ ಪುತ್ರ ವಿಜಯೇಂದ್ರ ಕಿಕ್ ಬ್ಯಾಕ್ ಪಡೆದು ತರಾತುರಿಯಲ್ಲಿ ಕಫ್ರ್ಯೂ ಸಮಯದಲ್ಲಿ ಭೂಮಿ ನೀಡಿದ್ದಾರೆ ಎಂಬ ಅನುಮಾನವಿದ್ದು ಜಿಂದಾಲ್ ಕಂಪನಿ ಈ ಹಿಂದೆ ಚೆಕ್ ಮೂಲಕ ಯಡಿಯೂರಪ್ಪ ಕುಟುಂಬಕ್ಕೆ ದೇಣಿಗೆ ನೀಡಿದ ದಾಖಲೆಗಳು ಈ ಅನುಮಾನಕ್ಕೆ ಪುಷ್ಟಿ ನೀಡುತ್ತದೆ
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಗಮನಕ್ಕೂ ತಾರದೇ ಅವರ ಬಹಿರಂಗ ವಿರೋಧದ ನಡುವೆಯೂ ಭೂಮಿ ನೀಡಿರುವುದನ್ನು ನೋಡಿದರೆ ಇದರಲ್ಲಿ ಸರ್ಕಾರದ ಕಾಣದ ಕೈಗಳ ವ್ಯವಹಾರದ ವಾಸನೆ ಇರುವುದನ್ನು ಖಚಿತಪಡಿಸುತ್ತದೆ
ಈ ಹಿಂದೆ ಸಚಿವ ಆನಂದ ಸಿಂಗ್ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಜಿಂದಾಲ್ ಕಾರ್ಖಾನೆಗೆ ಭೂಮಿ ನೀಡಿಕೆ ವಿರೋಧಿಸಿ ಹೋರಾಟ ರೂಪಿಸಿದ್ದು ಈ ಕಾರಣಕ್ಕೆ ಸಚಿವ ಆನಂದ್ ಸಿಂಗ್ ರಾಜೀನಾಮೆ ನೀಡಿಯಾದರೂ ಸಂಪುಟದ ಈ ನಿರ್ಧಾರ ಹಿಂಪಡೆಯಲು ಒತ್ತಡ ಹಾಕಬೇಕೆಂದು ಪತ್ರೇಶ್  ಒತ್ತಾಯಿಸಿದ್ದಾರೆ

Please follow and like us:
error