ಕನ್ನಡದಲ್ಲಿ ವಚನವನ್ನು ಟ್ವೀಟ್ ಮಾಡಿ ಬಸವ ಜಯಂತಿಗೆ ಶುಭಕೋರಿದ ಕೇರಳ ಸಿಎಂ ಪಿಣರಾಯಿ ವಿಜಯನ್

ತಿರುವನಂತಪುರಂ, ಎ.26: ಬಸವ ಜಯಂತಿ ಹಿನ್ನೆಲೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಕನ್ನಡದಲ್ಲಿ ಬಸವಣ್ಣನವರ ವಚನವನ್ನು ಟ್ವೀಟ್‌ ಮಾಡುವ ಮೂಲಕ ಜನತೆಗೆ ಶುಭಾಶಯ ಕೋರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮೀರಲು ವಿಶ್ವಗುರು ಬಸವಣ್ಣ ನಮಗೆ ಮಾರ್ಗದರ್ಶಿಯಾಗಲಿ. ನಾವು ವಿಭಜನೆಯಾಗುವ ಮೂಲಕ ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಯುದ್ಧವನ್ನು ಗೆಲ್ಲುಲಾಗುವುದಿಲ್ಲ. ಇದನ್ನು ಗೆಲ್ಲಲು ನಮ್ಮೆಲ್ಲರ ಅವಶ್ಯಕತೆ ಇದೆ’ ಎಂದು ತಿಳಿಸಿದ್ದಾರೆ.

ಅಲ್ಲದೇ, ‘ಇವನಾರವ ಇವನಾರವ ಇವನಾರವನೆಂದು ಎನಿಸದಿರಯ್ಯ. ಇವ ನಮ್ಮವ ಇವ ನಮ್ಮವ, ಇವ ನಮ್ಮವನೆಂದು ಎನಿಸಯ್ಯ’ ಎಂಬ ಬಸವಣ್ಣನವರ ವಚನವನ್ನು ಟ್ವೀಟ್‌ ಮಾಡಿದ್ದಾರೆ.

Please follow and like us:
error