ಕಣ್ಣುಗಳ ಕನಸನ್ನು ಕೋಮು ದಳ್ಳುರಿಯೂ ಸುಡಲಾಗದು! Postive News @ Corona Time

ದೆಹಲಿಯ ಖಾಜೂರಿ ಖಾಸ್ ನ ಕೂಲಿ ಕಾರ್ಮಿಕನ ಮಗಳು ನರ್ಗಿಸ್ ನಸೀಮ್ ಗೋಕುಲ್ ಪುರಿ ಸರ್ಕಾರಿ ಶಾಲೆಯ ಹನ್ನೆರಡನೇ ತರಗತಿಯ ವಿದ್ಯಾರ್ಥಿನಿ. ಫೆಭ್ರವರಿ 24 ರಂದು ಪೀಟಿ ಪರೀಕ್ಷೆಗೆ ಹೋಗುತ್ತಿದ್ದಾಗ ಇವಳ ವಠಾರದಲ್ಲಿ ಕೋಮು ಗಲಭೆ ಶುರುವಾಯಿತು. ಆದರೂ ನರ್ಗೀಸ್ ಧೃತಿಗೆಡದೆ ಪರೀಕ್ಷೆಗೆ ಹೋದಳು. ಪರೀಕ್ಷೆ ಮುಗಿಸಿ ವಾಪಾಸ್ಸು ಬರುವಾಗ ಸಾರಿಗೆ ಸಂಪೂರ್ಣ ಬಂದಾಗಿತ್ತು. ಗಂಟೆಗಟ್ಟಳೆ ನಡೆದು ಸಂಜೆ ಹೊತ್ತು ವಾಪಾಸಾಗಿ ನೋಡಿದರೆ ಮನೆ ಸುಟ್ಟು ಕರಕಲಾಗಿತ್ತು. ಅದರೊಂದಿಗೆ ಅವಳ ಪಾಠ ಪುಸ್ತಕಗಳೂ ಬೂದಿಯಾಗಿದ್ದವು. ಅವಳ ಕುಟುಂಬ ಹತ್ತಿರದ ಚಂದುನಗರ ಎಂಬಲ್ಲಿ ಬಾಡಿಗೆ ಮನೆ ಪಡೆದು ವಾಸ ಮಾಡ ತೊಡಗಿತು. ನರ್ಗೀಸ್ ಅಭ್ಯಾಸ ಮಾಡಲಾಗದಷ್ಟು ಬೆದರಿ ಹೋಗಿದ್ದಳು. ಒಂದು ಸಾಮಾಜಿಕ ಸಂಸ್ಥೆ ಇವಳಿಗೆ ಪುಸ್ತಕಗಳನ್ನು ಒದಗಿಸಿ ಕೊಟ್ಟ ಕಾರಣ ಹೇಗೋ ಅಭ್ಯಾಸ ಮಾಡಿ ಮುಂದಿನ ಪೊಲಿಟಿಕಲ್ ಸಯನ್ಸ್ ಪರೀಕ್ಷೆ ಬರೆದು ಬಂದಳು. ಅಷ್ಟರಲ್ಲಿ ಲಾಕ್ ಡೌನ್ ಹೇರಿಕೆಯಾಗಿ ಉಳಿದ ಪರೀಕ್ಷೆಗಳು ರದ್ದಾದವು.

ಮೊನ್ನೆ ಸೋಮವಾರ ಆ ಎರಡೇ ಪೇಪರುಗಳನ್ನು ಆಧರಿಸಿ ಪರೀಕ್ಷೆ ಫಲಿತಾಂಶ ಬಂದಾಗ ನರ್ಗೀಸ್ 62% ಮಾರ್ಕು ಪಡೆದು ಫಸ್ಟ್ ಕ್ಲಾಸಲ್ಲಿ ಪಾಸಾಗಿದ್ದಳು! ಅವಳಿಗೆ ತಾನು ಪಾಸಾಗುತ್ತೇನೆಂಬ ಭರವಸೆಯೇ ಇರಲಿಲ್ಲ. ಮುಂದೆ ತಾನೊಬ್ಬಳು ಫ್ಯಾಷನ್ ಡಿಸೈನರ್ ಆಗುವ ಕನಸು ಕಾಣುತ್ತಿರುವ ನರ್ಗೀಸ್ ಈಗ ಕಾಲೇಜು ಸೇರಲು ಅಣಿಯಾಗುತ್ತಿದ್ದಾಳೆ. ಅವಳ ಕನಸು ನನಸಾಗಲಿ.

Panju Gangolli

Please follow and like us:
error