ಕಝಖ್‌ಸ್ತಾನ: 100 ಜನರಿದ್ದ ವಿಮಾನ ಪತನ, ಸಾವಿನ ಸಂಖ್ಯೆ 14ಕ್ಕೇರಿಕೆ

ಅಲ್ಮಾಟಿ, ಡಿ.28: ಸುಮಾರು 95 ಪ್ರಯಾಣಿಕರು ಹಾಗೂ ಐವರು ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡ ಪರಿಣಾಮ ಮೃತಪಟ್ಟಿರುವವರ ಸಂಖ್ಯೆ 14ಕ್ಕೇರಿಕೆಯಾಗಿದೆ. ಕಝಕ್‌ಸ್ತಾನದ ಅತ್ಯಂತ ದೊಡ್ಡ ನಗರ ಅಲ್ಮಾಟಿಯ ಏರ್‌ಪೋರ್ಟ್ ಬಳಿ ಈ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ತುರ್ತು ಸೇವೆಗಳು ಭರದಿಂದ ಸಾಗುತ್ತಿವೆ ಎಂದು ಅಲ್ಮಾಟಿ ಏರ್‌ಪೋರ್ಟ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ವಿಮಾನವು ಟೇ-ಆಫ್ ವೇಳೆ ನಿಯಂತ್ರಣ ಕಳೆದುಕೊಂಡು ಕಾಂಕ್ರೀಟ್ ಬೇಲಿಯನ್ನು ತುಂಡರಿಸಿ ಸಣ್ಣ ಕಟ್ಟಡವೊಂದಕ್ಕೆ ಢಿಕ್ಕಿ ಹೊಡೆದಿದೆ ಎಂದು ಕಝಖ್‌ಸ್ತಾನದ ನಾಗರಿಕ ವಿಮಾನಯಾನ ಸಮಿತಿಯು ತಿಳಿಸಿದೆ.

ವಿಮಾನದ ಅವಶೇಷಗಳ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತುರ್ತು ಪರಿಸ್ಥಿತಿ ತಂಡ ಘಟನಾ ಸ್ಥಳದಲ್ಲಿದೆ ಎಂದು ಸಮಿತಿಯು ತಿಳಿಸಿದೆ.

Please follow and like us:
error