ಓಸಿಸಿಐ ಸದಸ್ಯರಾಗಿ ಬಸವರಾಜ್ ಭೋವಿ ನೇಮಕ


ಕೊಪ್ಪಳ : ಭಾರತೀಯ ಭೋವಿ ಸಮುದಾಯ ಪರಿ?ತ್‌ನ (ಓಸಿಸಿಐ) ಸದಸ್ಯರಾಗಿ ಭೋವಿ ಸಮುದಾಯದ ಮುಖಂಡ ಹಾಗೂ ಕೊಪ್ಪಳ ನಗರ ಪ್ರಾಧಿಕಾರ ಸದಸ್ಯ ಬಸವರಾಜ್ ಭೋವಿ ಅವರನ್ನು ಭಾರತೀಯ ಭೋವಿ ಸಮುದಾಯ ಪರಿ?ತ್‌ನ ರಾಷ್ಟ್ರೀಯ ಕಾರ್ಯಧ್ಯಕ್ಷ ಡಾ || ಹೆಚ್.ರವಿ ಮಾಕಳಿ ಅವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ರಾಷ್ಟ್ರೀಯ ಭಾರತೀಯ ಭೋವಿ ಸಮುದಾಯ ಪರಿ?ತ್(ಓಸಿಸಿಐ) ಸದಸ್ಯರಾದ ನೀವು ನಾವುಗಳು ಒಟ್ಟಿಗೆ ಸೇರಿ ನಮ್ಮ ಸಮಾಜದ ಏಳಿಗೆ ಮತ್ತು ಸಂಘಟನೆಯನ್ನು ಬಲ ಪಡಿಸಬೇಕಾಗಿರುವುದರಿಂದ ತಮ್ಮ ಸಹಕಾರವು ಬೇಕಾಗಿರುವುದರಿಂದ ನಿಮ್ಮ ಸಂಬಂಧಿಗಳನ್ನು ಸ್ನೇಹಿತರನ್ನು ಸಮಾಜದ ಎಲ್ಲಾ ಭಾಂದವರನ್ನು ಭಾರತೀಯ ಭೋವಿ ಸಮುದಾಯ ಪರಿ?ತ್‌ನ ಸದಸ್ಯರುಗಳಾಗಿ ನೊಂದಾವಣೆ ಮಾಡಿಸಬೇಕು ತಮ್ಮ ಎಲ್ಲರ ಪ್ರಯತ್ನದಿಂದ ಕರ್ನಾಟಕದ ಎಲ್ಲಾ ಭೋವಿ ಸಮುದಾಯದವರನ್ನು ಓಸಿಸಿಐ ಆಜೀವ ಸದಸ್ಯರನ್ನಾಗಿ ಮಾಡುವ ಗುರಿ ಹೊಂದಿದೆ . ಹಾಗೂ ಐಕ್ಯತೆಯನ್ನು ಕಾಪಾಡಬೇಕೆಂಬ ಉದ್ದೇಶ ಓಸಿಸಿಐ ಹೊಂದಿರುತ್ತದೆ.

Please follow and like us:
error