ಒಳ್ಳೆಯ ಸುದ್ದಿ :  ಕೊಪ್ಪಳದಲ್ಲಿ ಕೊರೊನಾ ಸೋಂಕಿತ ಮೂವರು ಗುಣಮುಖ-ಬಿಡುಗಡೆ

-ಮೂರು ವರ್ಷದ ಮಗು ಮರಳಿ ಮನೆಗೆ

ಕೊಪ್ಪಳ: ಕೊಪ್ಪಳದಲ್ಲಿ ಸೋಮವಾರ ಕೊರೊನಾ ಸೋಂಕಿತ ಮೂವರು ಗುಣಮುಖರಾಗಿದ್ದು, ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಒಟ್ಟಾರೆ ಕೊಪ್ಪಳ ಜಿಲ್ಲೆಯಲ್ಲಿ ಸೋಮವಾರದವರೆಗೆ ಪತ್ತೆಯಾದ 29 ಪ್ರಕರಣಗಳ ಪೈಕಿ 15 ಜನ ಗುಣಮುಖರಾಗಿದ್ದಾರೆ. ಓರ್ವ ಮಹಿಳೆ ಸಾವನ್ನಪ್ಪಿದ್ದು, ಇನ್ನೂ 13 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮೂರು ವರ್ಷದ ಮಗು, 28 ವರ್ಷದ ಮಹಿಳೆ ಹಾಗೂ 31 ವರ್ಷದ ವ್ಯಕ್ತಿ‌ ಕೊರೊನಾದಿಂದ ಗುಣಮುಖರಾಗಿದ್ದು ಮನೆಗೆ ಮರಳಿದ್ದಾರೆ.

Please follow and like us:
error