ಬೆಂಗಳೂರು – ಕನ್ನಡ ಚಿತ್ರರಂಗದ ನಿರ್ದೇಶಕರೂ ಹಾಗೂ ದೇವಾಂಗ(ನೇಕಾರ) ಸಮಾಜದ ಮುಖಂಡರಾದ *ಶ್ರೀ ಬೂದಾಳು ಕೃಷ್ಣಮೂರ್ತಿ ಇಂದು ಬೆಂಗಳೂರಿನಲ್ಲಿ* ನಿಧನರಾದರು.
ಮೃತರು *ಪತ್ನಿ ಧನಲಕ್ಷ್ಮಿ, ಪುತ್ರ ಆರ್.ಕೆ. ವಿಶ್ವಾಸ್, ಪುತ್ರಿ ಆರ್.ಕೆ. ಭಾವನ, ಅಳಿಯ, ಸೊಸೆ,* ಸ್ನೇಹಿತರು ಹಾಗೂ ಅಪಾರ ಸಂಖ್ಯೆಯ ಬಂಧುಗಳನ್ನು ಅಗಲಿದ್ದಾರೆ.
ಹೊಸದುರ್ಗ ತಾಲ್ಲೂಕು ಶ್ರೀರಾಂಪುರದವರಾದ ಇವರು ಹೆಸರಾಂತ ಕನ್ನಡ ಚಿತ್ರ ನಿರ್ದೇಶಕರಾದ ಶ್ರೀ *ಸಿದ್ದಲಿಂಗಯ್ಯರ ಗರಡಿಯಲ್ಲಿ ಶಿಷ್ಯರಾಗಿ ಬೆಳೆದವರು. ‘* *ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆ* ಗಿ ದುಡಿದರು. ಅನೇಕ ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿಯೂ ದುಡಿದರು. ಕೆಲ ವರ್ಷಗಳ ನಂತರ ಸ್ವಂತ ನಿರ್ದೇಶನಕ್ಕೆ ತೊಡಗಿಸಿಕೊಂಡರು. *ರೆಬಲ್ ಸ್ಟಾರ್ ಅಂಬರೀಷ್- ಸುಮಲತಾ ಅಭಿನಯನದ ‘* *ಒಲವಿನ ಕಾಣಿಕೆ’ ಚಿತ್ರವ* ನ್ನು ನಿರ್ದೇಶಿಸಿ ಇಂಡಿಪೆಂಡೆಂಡ್ ನಿರ್ದೇಶಕರಾದರು. ನಂತರ ಟಿ.ವಿ.ಧಾರಾವಾಹಿಗಳಲ್ಲಿ ಅಭಿನಯಿಸಿ, ನಿರ್ದೇಶಿಸಿದರು. ಅನೇಕ ಕನ್ನಡ ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದರು. *ಸೆನ್ಸಾರ್ ಮಂಡಳಿ ಸದಸ್ಯರಾಗಿ, ಸಬ್ಸಿಡಿ ಸಮಿತಿ, ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಹೀಗೆ ಅನೇಕ* ಆಯಾಮಗಳಲ್ಲಿ ಬೂದಾಳು ಕೃಷ್ಣಮೂರ್ತಿ ಸೇವೆ ಸಲ್ಲಿಸಿದ್ದರು.
ದೇವಾಂಗ ಸಮುದಾಯದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಇವರು *ಕರ್ನಾಟಕ ರಾಜ್ಯ ದೆರವಾಂಗ ಸಂಘದ ಸಹ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು* . *2013ರಲ್ಲಿ ಹೊಸದುರ್ಗದಲ್ಲಿ ನಡೆದ ದೇವಾಂಗ ಸಮಾವೇಶ, 2019 ರಲ್ಲಿ ತರೀಕೆರೆಯಲ್ಲಿ ನಡೆದ ದೇವಾಂಗ ಸಮಾವೇಶದಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಹೊಣೆ ಹೊತ್ತಿದ್ದರು.
ಮೃತರ ನಿಧನಕ್ಕೆ ದೇವಾಂಗದ ಜಗದ್ಗುರು ಶ್ರೀ *ದಯಾನಂದ ಪುರಿ ಸ್ವಾಮೀಜಿ, ಗುಳೇದಗುಡ್ಡದ ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಕರ್ನಾಟಕ ರಾಜ್ಯ ದೇವಾಂಗ ಸಂಘದ ರಾಜ್ಯಾಧ್ಯಕ್ಷ ಡಾ. ಜಿ. ರಮೇಶ್, ಪ್ರಧಾನ ಕಾರ್ಯದರ್ಶಿ ರವೀಂದ್ರ ಕಲ್ಬುರ್ಗಿ, ಶ್ರೀಯುತ MP ಕೆ ನಾರಾಯಣ್, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಬಿ. ನಾಗರಾಜು, ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಅಧ್ಯಕ್ಷ ಎಂ.ಡಿ. ಲಕ್ಷ್ಮೀ ನಾರಾಯಣ, ಕ.ರಾ.ದೇವಾಂಗ ಸಂಘದ ಶ್ರೀಧರ್ ತರೀಕೆರೆ , ಯುವ ದೇವಾಂಗ ಸಂಘದ ಸಚ್ಚಿನ್ ಶಿವಮೊಗ್ಗ, ಹರೀಶ್ ಕಡೂರು, ದಿನೇಶ್ ಸಿಂದಿಗೆರೆ, ಸಂದೇಶ್ (ಸುಬ್ಬಣ್ಣ) ಕಡೂರು ಬಿಳೆಕಲ್ ಪ್ಲಕಾಶ್ ಚಿಕ್ಕಮಗಳೂರು, ರವಿ (ಕಾಯಿ) ಚಿಕ್ಕಮಗಳೂರು ಸಿ.ಎಲ್. ಧನಪಾಲ್, ಉಮಾಪತಿ. ಜಯಪ್ರಕಾಶ್, ಸಿ.ಎಸ್. ರಾಜಣ್ಣ,ಬಿಬಿಎಂಪಿ ಮಾಜಿ ಉಪಮಹಾಪೌರ ಎಸ್. ಹರೀಶ್ ,ನೇಕಾರ ವಾಣಿ ಪತ್ರಿಕೆ ಸಂಪಾದಕ ಲಿಂಗರಾಜು ಡಿ ನೊಣವಿನಕೆರೆ, ದೇವಾಂಗ ಜ್ಯೋತಿ ಸಂಪಾದಕ ಕುದೂರು ರಾಜಶೇಖರ್, ಹೇಮತುಂಗ ಸಂಪಾದಕ ಕೆ.ಸಿ. ತಿಮ್ಮಶೆಟ್ಟಿ, ಮಾಗಡಿ ರಸ್ತೆಯ ಎಸ್. ರಂಗನಾಥ್, ಶ್ರೀರಾಂಪುರದ ಶ್ರೀ ಪರಪ್ಪಸ್ವಾಮಿ ದೇವಸ್ಥಾನದ ಅರ್ಚಕರಾದ . ಜಿ. ರಾಜಶೇಖರ್ ಮತ್ತು ಯು. ರಾಮಣ್ಣ, ದೇವಾಂಗ ಸೇವಾ ಸಮಾಜದ ಅಧ್ಯಕ್ಷ ಎಂ.ಪಿ. ಉಮಾಶಂಕರ್, ಬೆಂಗಳೂರು ದೇವಾಂಗ ಸಂಘದ ಅಧ್ಯಕ್ಷ ಡಿ. ಸೂರ್ಯನಾರಾಯಣ, ಉತ್ತರಹಳ್ಳಿಯ ಎ. ವಿಜಯಕುಮಾರ್, ಚಿತ್ರ ಸಾಹಿತಿ ಡಾ. ವಿ. ನಾಗೇಂದ್ರಪ್ರಸಾದ್, ಹೆಸರಾಂತ ಚಿತ್ರ ಸಂಗೀತ ನಿರ್ದೇಶಕ ಹಂಸಲೇಖ, ಚಿತ್ರ ನಿರ್ದೇಶಕ ಸಿ.ವಿ. ನಾಗೇಶ್ ಸೇರಿದಂತೆ ಹಲವರು ಕಂಬನಿ ಮಿಡಿದು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.
*
ವಿ *. ಸೂ: ಮೃತರ ಅಂತ್ಯಕ್ರಿಯೆಯು ಇಂದು ಸಂಜೆ 4.00 ಗಂಟೆಗೆ ಕೆಂಗೇರಿ* *ಕೊಮ್ಮಘಟ್ಟದ ರುದ್ರಭೂಮಿಯಲ್ಲಿ ನೆರವೇರಲಿದೆ. ಹೆಚ್ಚಿನ ಮಾಹಿತಿಗಳಿಗಾಗಿ* *ಆರ್.ಕೆ ವಿಶ್ವಾಸ್( ಬೂದಾಳು ಕೃಷ್ಣಮೂರ್ತಿ ಪುತ್ರ)ರ 97390 94374 ಸಂಪರ್ಕಿಸಬಹುದು.*
Please follow and like us: