ಐತಿಹಾಸಿಕ ಕುಮಾರರಾಮನ ಕೋಟೆ ಪ್ರದೇಶ ರಕ್ಷಿಸಿ ಹಾಗೂ ಗಣಿಗಾರಿಕೆ ನಿಷೇಧಿಸಿ


ಕೊಪ್ಪಳ, ಅ. ೨೯: ಜಿಲ್ಲೆಯ ಅನೇಕ ಐತಿಹಾಸಿಕ ಸ್ಮಾರಕಗಳ ತಾಣವಾಗಿದ್ದು, ಅದರಲ್ಲಿ ಕನಕಗಿರಿ, ಇಟಗಿ, ಪುರ ಮತ್ತು ಆನೆಗೊಂದಿ ಸೇರಿದಂತೆ ಅನೇಕ ಊರುಗಳು ಇವೆ. ಅದರಂತೆ ಕೊಪ್ಪಳದಲ್ಲಿ ರಾಜನಾಗಿ ಜನಮಾನಸದಲ್ಲಿ ಉಳಿದು ದೇವಮಾನವನಾದ ಗಂಡುಗಲಿ ಕುಮಾರರಾಮನ ಐತಿಹಾಸಿಕ ತಾಣ ಕೊಪ್ಪಳ ತಾಲೂಕ ಜಬ್ಬಲಗುಡ್ಡದ ಮೇಲ್ಭಾಗದಲ್ಲಿದ್ದು ಅದನ್ನು ಸಂಪೂರ್ಣ ರಕ್ಷಣಾ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ಅದಕ್ಕೆ ಹೊಂದಿಕೊಂಡು ಹಳೆಕುಮಟಾ, ಕುಮಾರ ರಾಮ ಕುಮಟಾ ಎಂಬ ಮೂರು ಗ್ರಾಮಗಳಿದ್ದು ಅಲ್ಲಿ ಹದಿಮೂರನೇ ಶತಮಾನದ ಕಂಪಿಲರಾಯ ಮತ್ತು ಕುಮಾರ ರಾಮ ಎಂಬ ವೀರ ಕನ್ನಡಿಗ ಶೌರ್ಯರು ಆಳಿದ ನಾಡು. ಇಲ್ಲಿಯೇ ದೆಹಲಿ ಸುಲ್ತಾನರನ್ನು ಸೋಲಿಸಲಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಟನೆಯ ಚಿತ್ರ ಸೇರಿದಂತೆ ಹಲವು ಭಾಷೆಗಳಲ್ಲಿ ಉತ್ತಮವಾದ ಕೃತಿಗಳನ್ನು ಅಂದಿನಿಂದಲೂ ರಚಿಸಲಾಗಿದೆ.
ನಂಜುಂಡ ಕವಿಯ ಕುಮಾರರಾಮ ಚರಿತ್ರೆ ಅನೇಕ ದಾಖಲೆಗಳನ್ನು ಒದಗಿಸುತ್ತದೆ. ಪ್ರಸ್ತುತ ಸುಮಾರು ೩ ಸಾವಿರ ಎಕರೆ ಪ್ರದೇಶ ಅರಣ್ಯ ಮತ್ತು ಕಂದಾಯ ಇಲಾಖೆಯ ಭೂಮಿಯಿದ್ದು. ಅದರಲ್ಲಿ ಕುಮಾರರಾಮನ ಕೋಟೆಗೆ ಹೊಂದಿಕೊಂಡು ಜಬ್ಬಲಗುಡ್ಡಾ ಸೀಮಾದ ಸ.ನಂ. ೫೧ರಲ್ಲಿ ೧೦ ಎಕರೆ ಭೂಮಿಯನ್ನು ವಿಜಯಭಾಸ್ಕರ ರಡ್ಡಿ ಎನ್ನುವವರಿಗೆ ಲೀಜ್ ನೀಡಲಾಗಿದೆ. ನಿಜವಾಗಲೂ ಇದು ದುರಂತದ ಸಂಗತಿ. ೨೦೧೦ ರಲ್ಲಿ ಕೊಪ್ಪಳದಲ್ಲಿ ದಲಿತ ಸೇನೆ, ಕುಮ್ಮಟ ದುರ್ಗ ಅಭಿವೃದ್ಧಿ ಸಮಿತಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಹೋರಾಟ ಮಾಡಿ ಅಲ್ಲಿನ ಗಣಿಗಾರಿಕೆ ನಿಲ್ಲಿಸಲಾಗಿತ್ತು. ಈಗ ಅಲ್ಲಿರುವ ಸ್ಮಾರಕಗಳನ್ನು ಒಂದೆಡೆ ಇಟ್ಟು ರಕ್ಷಿಸುವ ಜೊತೆಗೆ ಅಲ್ಲಿನ ಪೂರ್ಣ ಭೂ ಪ್ರದೇಶವನ್ನು ಸಂರಕ್ಷಿತ ಪ್ರದೇಶವನ್ನಾಗಿ ಸರಕಾರ ಘೋಷಿಸಬೇಕು. ಜಬ್ಬಲಗುಡ್ಡದ ರೈಲು ನಿಲ್ದಾಣಕ್ಕೆ ಕುಮಾರರಾಮನ ಹೆಸರನ್ನು ಇಡಬೇಕು. ಯಾವುದೇ ಕಾರಣಕ್ಕೂ ಈ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆಗೆ ಲೀಜ್ ಅಥವಾ ನವೀಕರಣ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ಆದರೆ ಈಗ ಮತ್ತೆ ಅಲ್ಲಿಗೆ ಗಣಿ ಕಳ್ಳರು ಬರುತ್ತಿದ್ದು. ಐತಿಹಾಸಿಕ ಸ್ಮಾರಕ ರಕ್ಷಣೆ ಮಾಡಬೇಕಿರುವದು ಸರಕಾರದ ಕರ್ತವ್ಯ. ಅದನ್ನು ಮಾಡಲು ಆಗದಿದ್ದರೆ ಸರಕಾರ ತಮ್ಮಿಂದ ಆಗುವದಿಲ್ಲವೆಂದು ಬಹಿರಂಗವಾಗಿ ಹೇಳಲಿ. ಆಗ ಜನರೇ ನಿಂತು ರಕ್ಷಣೆ ಮಾಡುತ್ತಾರೆ ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ಸೇನೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮತ್ತು ಕುಮ್ಮಟ ದುರ್ಗ ಅಭಿವೃದ್ಧಿ ಸಮಿತಿಯ ವೆಂಕಟೇಶ ಈಳಗೇರ ಇತರರು ಒತ್ತಾಯಿಸಿದ್ದು, ಒಂದು ವೇಳೆ ಲೀಜ್ ಅಥವಾ ನವೀಕರಣ ಮಾಡಿದರೆ ವಾಲ್ಮೀಕಿ ಸಂಸ್ಥಾನದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದ್ದಾರೆ.

Please follow and like us:
error