ಏಕಗವಾಕ್ಷಿ ವ್ಯವಸ್ಥೆಯಲ್ಲಿ ಸಂಬಂಧಿಸಿದ ಇಲಾಖೆಗಳ ಅನುಮತಿ ಒಂದೇ ಅರ್ಜಿಯಲ್ಲಿ ಸಿಗಲಿ: ವಿಕಾಸ್ ಕಿಶೋರ್ ಸುರಳ್ಕರ್


ಕೊಪ್ಪಳ, ಅ : ಏಕಗವಾಕ್ಷಿ ವ್ಯವಸ್ಥೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಸಂಬAಧಿಸಿದAತೆ ಅನುಮತಿ ನೀಡುವ ಎಲ್ಲಾ ಇಲಾಖೆಗಳನ್ನು ಒಂದೇ ಅರ್ಜಿ ನಮೂನೆಯಲ್ಲಿ ಸೇರಿಸಿ, ನಿರ್ದಿಷ್ಟ ಸಮಯ ನಿಗದಿಪಡಿಸಿ ಅರ್ಜಿದಾರರಿಗೆ ಕೈಗಾರಿಕೆ ಸ್ಥಾಪನೆಗೆ ಶೀಘ್ರ ಅನುಮತಿ ದೊರೆಯುವಂತೆ ವ್ಯವಸ್ಥೆ ಕಲ್ಪಿಸಿ ಎಂದು ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಆಯೋಜಿಸಿದ್ದ 2020-21ನೇ ಸಾಲಿನ ಒಂದನೇ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏಕಗವಾಕ್ಷಿ ವ್ಯವಸ್ಥೆ ಆರಂಭಿಸಿದ ಮೇಲೆ ಸಂಬAಧಿಸಿದ ಇಲಾಖೆಗಳೆಲ್ಲವೂ ಅದೇ ವ್ಯವಸ್ಥೆಯಲ್ಲಿ ಅರ್ಜಿ ಪರಿಶೀಲಿಸಿ ಅನುಮತಿ ನೀಡಬೇಕು. ಕೈಗಾರಿಕೆ ಸ್ಥಾಪನೆಗೆ ಅಗತ್ಯವಾದ ಅನುಮತಿಗೆ ಅರ್ಜಿದಾರರು ಪ್ರತಿಯೊಂದು ಇಲಾಖೆಗೆ ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಇದರಿಂದ ಅರ್ಜಿದಾರರ ಸಮಯ ಹಾಳಾಗುವುದಲ್ಲದೆ, ಅನಗತ್ಯ ವಿಳಂಬದಿAದ ಕೈಗಾರಿಕಾ ಸ್ಥಾಪನೆಗೂ ತೊಂದರೆಯಾಗುತ್ತದೆ. ಇನ್ನುಮುಂದೆ ಇದಕ್ಕೆ ಅವಕಾಶ ನೀಡದೆ ಕೈಗಾರಿಕಾ ಸ್ಥಾಪನೆಗೆ ಅವಶ್ಯವಾದ ಎಲ್ಲಾ ಇಲಾಖೆಗಳನ್ನು ಒಂದೇ ಅರ್ಜಿಯಲ್ಲಿ ಸೇರಿಸಿ ಹೊಸ ಅರ್ಜಿ ನಮೂನೆಯನ್ನು ರಚಿಸಿ. ಪ್ರತಿಯೊಂದು ಇಲಾಖೆಗೆ ನಿರ್ದಿಷ್ಟ ದಿನಗಳನ್ನು ಗೊತ್ತು ಮಾಡಿ ಆ ಅವಧಿಯೊಳಗೆ ಅರ್ಜಿಗೆ ಸಂಬAಧಿಸಿದ ಪ್ರಕ್ರಿಯೆ ಮುಗಿಯಬೇಕು. ಸ್ವಂತ ಜಾಗ, ಬಂಡವಾಳ ಹೊಂದಿರುವ ಅರ್ಜಿದಾರರಿಗೆ ಅನುಮತಿ ನೀಡಲು ವಿಳಂಬ ಮಾಡಬೇಡಿ ಎಂದು ಅವರು ಹೇಳಿದರು.
ಜಿಲ್ಲಾಡಳಿತದಿಂದ ಪ್ರಜ್ವಲನ್ ಎಂಬ ವಾಟ್ಸಪ್ ಗುಂಪು ರಚಿಸಲಾಗಿದ್ದು ಇದರಲ್ಲಿ ಸ್ವಯಂ ಉದ್ಯೋಗ ಸ್ಥಾಪಿಸಲು ಇಚ್ಛಿಸುವವರಿಗೆ ಎಲ್ಲಾ ತರಹದ ಆಡಳಿತಾತ್ಮಕ, ಸಾಲ ಸೌಲಭ್ಯ, ಮಾರುಕಟ್ಟೆ ಮತ್ತು ತಾಂತ್ರಿಕ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ. ಈ ಗ್ರೂಪ್ ತಾಂತ್ರಿಕ, ಮಾರಾಟ, ಸೂಕ್ತ ಮಾನವ ಸಂಪನ್ಮೂಲದ ಮಾಹಿತಿ, ಯೋಜನಾ ವರದಿ ತಯಾರಿಕೆ, ಸಂಶೋಧನಾ ಸಂಸ್ಥೆಗಳನ್ನು ಒಳಗೊಂಡಿರುತ್ತದೆ. ಅವಶ್ಯಕತೆ ಇರುವ ಸ್ವಂತ ಉದ್ಯೋಗಾಕಾಂಕ್ಷಿಗಳು ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು(9480544086) ಮುಖಾಂತರ ಸಂಪರ್ಕಿಸಬಹುದು. ಜಿಲ್ಲಾಧಿಕಾರಿಗಳು ವಾಟ್ಸಾಪ್ ಗ್ರೂಪ್‌ನ ಮೇಲ್ವಿಚಾರಣೆ ನಡೆಸಲಿದ್ದು, ಸ್ವಂತ ಉದ್ಯೋಗ ಸ್ಥಾಪನೆಗೆ ಆಸಕ್ತಿ ಇರುವವರು ಪ್ರಜ್ವಲನ್ ವಾಟ್ಸಪ್ ಗ್ರೂಪ್‌ನ್ನು ಸದ್ಭಳಕೆ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.
ಸ್ವಂತ ಕೈಗಾರಿಕೆ ಸ್ಥಾಪನೆಗೆ ಇಚ್ಛಿಸುವವರಿಗೆ ಅವರು ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರೊಂದಿಗೆ ನೇರವಾಗಿ ಸಂಪರ್ಕಿಸಿ ಶೀಘ್ರ ಬ್ಯಾಂಕ್ ಸಾಲ ದೊರೆಯಲು ಸಹಾಚಿiÀÄ ಮಾಡಬೇಕು. ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗಳಿಂದ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತದೆ. ಜಿಲ್ಲೆಯಲ್ಲಿ ಪ್ರಸ್ತುತ ಇರುವ ಕೈಗಾರಿಕೆಗಳಲ್ಲಿ ಡಾ|| ಸರೋಜಿನಿ ಮಹಿಷಿ ವರದಿಯನ್ವಯ ಉದ್ಯೋಗದಲ್ಲಿ ಕನ್ನಡಿಗರಿಗೆ ಇರುವ ಮೀಸಲಾತಿ ಕುರಿತು ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕರು ಪರಿಶೀಲಿಸಬೇಕು. ಇದರ ಉದ್ದೇಶ ಸ್ಥಳೀಯರಿಗೆ ಉದ್ಯೋಗ ದೊರೆಯಬೇಕು. ಕೈಗಾರಿಕೆಗಳು ಇಂತಿಷ್ಟು ಪ್ರಮಾಣದ ಉದ್ಯೋಗಗಳನ್ನು ಸ್ಥಳೀಯರಿಗೆ ಒದಗಿಸಿರುವ ಕುರಿತು ನೀಡುವ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ನಿಜಕ್ಕೂ ಸ್ಥಳೀಯರಿಗೆ ಉದ್ಯೋಗ ದೊರಕಿರುವುದನ್ನು ಖಾತ್ರಿಪಡಿಸಿಕೊಳ್ಳಿ. ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯಡಿ ಯಾವ ಕೈಗಾರಿಕೆಗಳು ಅರ್ಹತಾದಾಯಕ ಮಾನದಂಡಗಳನ್ನು ಹೊಂದಿವೆ ಮತ್ತು ಪ್ರತಿ ವರ್ಷ ಎಷ್ಟು ಪ್ರಮಾಣದ ಲಾಭಾಂಶವನ್ನು ಸಾಮಾಜಿಕ ಕಾರ್ಯಕ್ಕೆ ಬಳಸುತ್ತಿವೆ ಎಂಬ ಕುರಿತು ಮಾಹಿತಿ ನೀಡಿ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಹೊಸದಾಗಿ ಕೈಗಾರಿಕೆಗಳ ಸ್ಥಾಪನೆಗೆ ಬಂದಿರುವ ಅರ್ಜಿಗಳ ಪರಿಶೀಲನೆ, ಕೈಗಾರಿಕಾ ವಸಾಹತುಗಳ ಅಭಿವೃದ್ಧಿ ಸೇರಿದಂತೆ ಮುಂತಾದ ವಿಷಯಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ, ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು, ಜಂಟಿ ಕೃಷಿ ನಿರ್ದೇಶಕರು, ಕೆ.ಎಸ್.ಎಸ್.ಐ.ಡಿ.ಸಿಯ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಕೆ.ಐ.ಎ.ಡಿ.ಬಿ.ಯ ಸಹಾಯಕ ಅಭಿಯಂತರರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error