ಎಸ್.ಎಫ್.ಎಸ್. ಐಸಿಎಸ್‌ಇ ಶಾಲೆ ಶೇ.೧೦೦ರಷ್ಟು ಫಲಿತಾಂಶ

ಕೊಪ್ಪಳ:೦೮, ನಗರದ ಎಸ್.ಎಫ್.ಎಸ್. ಐಸಿಎಸ್‌ಇ ಶಾಲೆ ಸತತವಾಗಿ ೬ನೇ ಬಾರಿಗೆ ಶೇ.೧೦೦ಕ್ಕೆ ೧೦೦ ರಷ್ಟು ಫಲಿತಾಂಶ ಸಾಧಿಸಿದೆ. ಕು. ಅವಿನಾಶ್ ಶರದ್ ದೀಕ್ಷಿತ್ ಶೇ.೯೫.೮೩ ರಷ್ಟು ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ದ್ವಿತೀಯ ಸ್ಥಾನ ಕು. ಶ್ರದ್ಧಾ ಹುಲ್ಲೂರ ಶೇ.೯೫.೬೭ ಅಂಕ ಪಡೆದಿದ್ದಾಳೆ. ಕು. ಖುಷಿ ಛೋಪ್ರಾ ಶೇ.೯೫.೧೭ ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾಳೆ.
ಒಟ್ಟು ೩೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೨೬ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೧೩ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Please follow and like us:
error