ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಸತ್ತವರ ದೇಹ ಭಾಗಗಳು-ರವಿ ಕೃಷ್ಣಾರೆಡ್ಡಿ ಆಕ್ರೋಶ

 

ಚಿಕ್ಕಬಳ್ಳಾಪುರ : ಫೆಬ್ರವರಿ 22, 2021ರ ರಾತ್ರಿ ಚಿಕ್ಕಬಳ್ಳಾಪುರದ ಬಳಿ ಆದ ಜಿಲೆಟಿನ್ ಸ್ಫೋಟದ ಸ್ಥಳಕ್ಕೆ ಇಂದು (25-02-2021ರಂದು) KRS ಪಕ್ಷದ ನಿಯೋಗ ಭೇಟಿ ನೀಡಿದಾಗ ಅಲ್ಲಿ ಕಂಡುಬಂದ ದೃಶ್ಯಗಳು ಇವು. ಸ್ಫೋಟದ ಸ್ಥಳದಿಂದ ಸುಮಾರು ನೂರಿನ್ನೂರು ಅಡಿ ದೂರದಲ್ಲಿ ಈಗಲೂ ಮನುಷ್ಯರ ಅರೆಸುಟ್ಟ ಕರುಳು, ಛಿದ್ರ ದವಡೆಗಳು, ಅಂಗೈ, ಬೆರಳುಗಳು, ಮೂಳೆಗಳು, ಚರ್ಮ ಇತ್ಯಾದಿ ದೇಹಭಾಗಳು ಎಲ್ಲೆಂದರಲ್ಲಿ ಬಿದ್ದಿವೆ. ಇವೆಲ್ಲವನ್ನೂ ಕ್ರಮಬದ್ಧವಾಗಿ ಶೇಖರಿಸುವ ಮತ್ತು ವಿಂಗಡಿಸುವ ಕೆಲಸವನ್ನು ಪೊಲೀಸರು ಮಾಡಿಲ್ಲ. ಸತ್ತ ಮನುಷ್ಯರ ಜೀವಕ್ಕೂ ಅವರು ಬೆಲೆ ನೀಡಿಲ್ಲ, ಸಾಕ್ಷ್ಯ ಸಂಗ್ರಹದ ತಮ್ಮ ಪ್ರಾಥಮಿಕ ಕೆಲಸವನ್ನೂ ಸರಿಯಾಗಿ ಮಾಡಿಲ್ಲ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ. ರಾಜ್ಯಾಧ್ಯಕ್ಷ, ರವಿ ಕೃಷ್ಣಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ದಯವಿಟ್ಟು ಕರ್ನಾಟಕದ ಮಾಧ್ಯಮ ಸಂಸ್ಥೆಗಳು ಈ ವಿಚಾರವಾಗಿ ತನಿಖಾ ಪತ್ರಿಕೋದ್ಯಮ (Investigative Journalism) ಮಾಡಿಸಿ, ಪೊಲೀಸರ ಮತ್ತು ಸರ್ಕಾರದ ಅಮಾನವೀಯತೆ, ನಿರ್ಲಕ್ಷ, ಕರ್ತವ್ಯಲೋಪ, ತನಿಖೆಯೆಂಬ ನಾಟಕ, ಅಕ್ರಮಕ್ಕೆ ಕುಮ್ಮಕ್ಕು ಮೊದಲಾದ ವಿಚಾರಗಳನ್ನು ಬಯಲಿಗೆಳೆಯುವ ಕೆಲಸ ಮಾಡಬೇಕೆಂದು ವಿನಂತಿಸುತ್ತೇನೆ. ಇಲ್ಲವಾದಲ್ಲಿ ಸರ್ಕಾರದ ಬೇಜವಾಬ್ದಾರಿ ಮುಂದುವರೆಯುತ್ತದೆ ಮತ್ತು ತನಿಖೆಯ ನಾಟಕಗಳು ಹಾಗೂ ದುರ್ಘಟನೆಗಳು ಅಬಾಧಿತವಾಗಿ ನಡೆಯುತ್ತವೆ.ಎಂದು ಹೇಳಿದ್ಧಾರೆ.

Please follow and like us:
error