ಎಲ್ಲರೂ ಭ್ರಷ್ಟಾಚಾರ ನಿರ್ಮೂಲನೆಯ ಮನೋಬಾವ ಬೆಳೆಸಿಕೊಳ್ಳಿ : ಆರ್.ಎಸ್. ಉಜ್ಜನಕೊಪ್ಪ

ಕೊಪ್ಪಳ ನ.  : ಭ್ರಷ್ಟಾಚಾರ ದೇಶದ ಅಭಿವೃದ್ದಿಗೆ ಯಾವ ರೀತಿಯಲ್ಲಿ ಮಾರಕವಾಗಿದ್ದು, ನಾವೆಲ್ಲರೂ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಮನೋಬಾವ ಬೆಳೆಸಿಕೊಳ್ಳಬೇಕು ಎಂದು ಎಸಿಬಿ ಡಿ.ಎಸ್.ಪಿ. ಆರ್.ಎಸ್. ಉಜ್ಜನಕೊಪ್ಪ ಅವರು ಹೇಳಿದರು.
ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ವತಿಯಿಂದ ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಗ್ರಾಮದ ಇಂಟಿಯನ್ ರಿಸರ್ವ್ ಬೆಟಾಲಿಯನ್ ಹಾಗೂ ಕೆ.ಎಸ್.ಆರ್.ಪಿ ತರಬೇತಿ ಶಾಲೆಯಲ್ಲಿ ಶನಿವಾರದಣದು ಹಮ್ಮಿಕೊಳ್ಳಲಾದ ಭ್ರಷ್ಟಾಚಾರ ನಿರ್ಮೂಲನೆ ಕುರಿತಾದ ಜಾಗೃತಿ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಲವಾರು ವರ್ಷಗಳಿಂದ ಭ್ರಷ್ಟಾಚಾರ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿಬಿಟ್ಟಿದೆ.  ಭ್ರಷ್ಟಾಚಾರವು ಎಲ್ಲೆಲ್ಲಿಯೂ ಇದೆ ಎಂದು ಆರೋಪಿಸುವ ಬದಲಿಗೆ ಮೊದಲು ನಮ್ಮ ಮನಸ್ಸಿನಲ್ಲಿರುವ ಭ್ರಷ್ಟತೆ ಕಿತ್ತೊಗೆಯಬೇಕು.  ಎಲ್ಲರೂ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಮನೋಬಾವ ಬೆಳೆಸಿಕೊಳ್ಳಬೇಕು.  ಭ್ರಷ್ಟಾಚಾರಕ್ಕೆ ಪ್ರೋತ್ಸಾಹಿಸುವುದರಿಂದ ಅದು ತಿರುಗುಬಾಣವಾಗುವ ಸಾಧ್ಯತೆಗಳಿದ್ದು, ಭ್ರಷ್ಟ ವ್ಯವಸ್ಥೆ ನಿಯಂತ್ರಿಸಲು ಎಸಿಬಿಯೊಂದಿಗೆ ಕೈಜೋಡಿಸಿ ಎಮದು ಕರೆ ನೀಡಿದರು.
ಭ್ರಷ್ಟಾಚಾರ ವ್ಯವಸ್ಥೆಯನ್ನು ಏಕಾಏಕೀ ನಿರ್ಮೂಲನೆ ಅಸಾಧ್ಯವಾದರೂ ಕೆಲ ರಾಷ್ಟçಗಳು ಇದಕ್ಕೆ ಕಡಿವಾಣ ಹಾಕುವ ಮೂಲಕ ಅಭಿವೃದ್ಧಿ ಪಥದತ್ತ ಸಾಗುತ್ತಿವೆ.  ಭ್ರಷ್ಟಾಚಾರ ಪಿಡುಗಿನಿಂದ ಯಾವುದೇ ಕ್ಷೇತ್ರ ಹೊರತಾಗಿಲ್ಲ.  ಹಾಗಾಗಿ ಕೇವಲ ರಾಜಕಾರಣಿಗಳು ಅಥವಾ ಅಧಿಕಾರಿಗಳಷ್ಟೆ ಭ್ರಷ್ಟರು ಎನ್ನುವಂತಿಲ್ಲ. ಪ್ರೋತ್ಸಾಹ ನೀಡುತ್ತಿರುವ ಜನರಿಂದಲೇ ಅದು ನಿರ್ಮೂಲನೆಗೊಳ್ಳಬೇಕು.  ಈ ವಿಷಯದಲ್ಲಿ ಜಾಗೃತ ಸಮಾಜ ದೈರ್ಯದಿಂದ ಧ್ವನಿ ಎತ್ತಬೇಕು.  ಇತ್ತೀಚಿನ ದಿನಗಳಲ್ಲಿ ಹಣ ಕೊಡದೇ ಸಾರ್ವಜನಿಕರ ಕೆಲಸಗಳು ಆಗುವಂತ ಸರ್ಕಾರಿ ಕಛೇರಿಗಳಿರುವುದೇ ಅಪರೂಪ ಎನ್ನುವಂತಾಗಿದೆ.  ಅಕ್ಷರಸ್ಥರು, ಬುದ್ದಿವಂತರು ಭ್ರಷ್ಟರಾಗುತ್ತಿದ್ದಾರೆ. ಮುಗ್ದರು ಮೋಸಕ್ಕೀಡಾಗುತ್ತಿದ್ದಾರೆ.  ಈ ನಿಟ್ಟಿನಲ್ಲಿ ನಾವು ಜಾಗೃತರಾಗವುದು ಅತ್ಯವಶ್ಯಕವಾಗಿದೆ ಎಂದರು.
ಮುನಿರಾಬಾದ ಐ.ಆರ್.ಬಿ. ಕಮಾಂಡೆAಟ್ ಮಹಾದೇವ ಪ್ರಸಾದ ಅವರು ಜಾಗೃತ ಅರಿವು ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.  ಐ.ಆರ್.ಬಿ. ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error