ಎರಡನೇ ಹಂತದ ಚುನಾವಣೆಗೆ ಅಧಿಸೂಚನೆ ಪ್ರಕಟ

ಗ್ರಾಮ ಪಂಚಾಯತ ಚುನಾವಣೆ-2020

ಕೊಪ್ಪಳ, : 2020ರ ಡಿಸೆಂಬರ್ ಮಾಹೆಯವರೆಗೆ ಮುಕ್ತಾಯಗೊಳ್ಳುವ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲ್ಲೂಕುಗಳಲ್ಲಿನ ಗ್ರಾಮ ಪಂಚಾಯತಿ ಚುನಾವಣೆಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು, 1993 ರ 12ನೇ ನಿಯಮದ ಪ್ರಕಾರ ಚುನಾವಣೆ ವೇಳಾಪಟ್ಟಿಯನ್ನು ನಿಗದಿಪಡಿಸಿ, ಎರಡನೇ ಹಂತದ ಚುನಾವಣೆಗೆ ಡಿ.11 ರಂದು(ಶುಕ್ರವಾರ) ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಅಧಿಸೂಚನೆಯ ವೇಳಾಪಟ್ಟಿಯನ್ವಯ ಡಿ.16 ರಂದು(ಬುಧವಾರ) ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಡಿ.17 ರಂದು(ಗುರುವಾರ) ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಡಿ.19(ಶನಿವಾರ) ಕೊನೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ ಡಿ.27 ರಂದು ಬೆಳಿಗ್ಗೆ 07 ಗಂಟೆಯಿAದ ಸಂಜೆ 05 ಗಂಟೆಯವರೆಗೆ ಮತದಾನ ನಡೆಯಲಿದೆ. ಡಿ.31(ಗುರುವಾರ) ರಂದು ಚುನಾವಣೆ ಪ್ರಕ್ರಿಯೆ ಕೊನೆಗೊಳ್ಳುತ್ತದೆ.
ಕುಷ್ಟಗಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ನಿಲೋಗಲ್-22, ತುಗ್ಗಲದೋಣಿ-17, ಹನುಮನಾಳ-12, ಮಾಲಗಿತ್ತಿ-15, ಜಾಗೀರಗುಡದೂರ-15, ಯರಗೇರಾ-20, ಹನುಮಸಾಗರ-38, ಕಬ್ಬರಗಿ-19, ಕಾಟಾಪುರ-11, ಹೂಲಗೇರಾ-15, ಅಡವಿಭಾವಿ-23, ಚಳಗೇರಾ-24, ಬೆನಕನಾಳ-24, ಹಿರೇಗೊಣ್ಣಾಗರ-16, ಹಿರೇಬನ್ನಿಗೋಳ-12, ಕೊರಡಕೇರಾ-14, ತಳುವಗೇರಾ-19, ಬಿಜಕಲ್-23, ದೋಟಿಹಾಳ-14, ಕ್ಯಾದಿಗುಪ್ಪ-16, ಮುದೇನೂರು-13, ಕಂದಕೂರು-16, ಹಿರೇಮನ್ನಾಪೂರ-25, ಜುಮಲಾಪೂರ-25, ಕಿಲ್ಲಾರಹಟ್ಟಿ-26, ಮೆಣೇದಾಳ-19, ಸಂಗನಾಳ-16, ಹಿರೇನಂದಿಹಾಳ-13, ಅಂಟರಠಾಣ-11, ಕೇಸೂರ-16, ಲಿಂಗದಹಳ್ಳಿ-14, ಗುಮಗೇರಾ-13, ಬಿಳೇಕಲ್-12, ತುಮರೀಕೊಪ್ಪ-14, ಹಾಬಲಕಟ್ಟಿ-10, ಶಿರಗುಂಪಿ-13 ಸೇರಿದಂತೆ 625 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಗಂಗಾವತಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಆನೆಗೊಂದಿ-14, ಸಂಗಾಪುರ-14, ಸಣಾಪೂರ-8, ಮಲ್ಲಾಪುರ-15, ಚಿಕ್ಕಜಂತಕಲ್-26, ಡಣಾಪೂರ-15, ಜಂಗಮರ ಕಲ್ಗುಡಿ-13, ಶ್ರೀರಾಮನಗರ-24, ಮರಳಿ-20, ವಡ್ಡರಹಟ್ಟಿ-33, ಬಸಾಪಟ್ಟಣ-23, ವೆಂಕಟಗಿರಿ-24, ಆಗೋಲಿ-14, ಚಿಕ್ಕಬೆಣಕಲ್-24, ಕೇಸರಹಟ್ಟಿ-23, ಹೇರೂರು-22, ಹೊಸಕೇರಾ-16, ಹಣವಾಳ-19 ಸೇರಿದಂತೆ ಒಟ್ಟು 347 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಕಾರಟಗಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಉಳೇನೂರು-20, ಬೆನ್ನೂರು-17, ಬೂದಗುಂಪಾ-21, ಯರಡೋಣಾ-18, ಗುಂಡೂರು-24, ಮರ್ಲಾನಹಳ್ಳಿ-19, ಹುಳ್ಕಿಹಾಳ-19, ಚಳ್ಳೂರು-13, ಮೈಲಾಪುರ-18, ಬೇವಿನಾಳ-22, ಬರಗೂರು-16 ಸೇರಿದಂತೆ ಒಟ್ಟು 207 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಕನಕಗಿರಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಚಿಕ್ಕಮಾದಿನಾಳ-19, ಸುಳೇಕಲ್-17, ಹಿರೇಖೇಡ-18, ಚಿಕ್ಕಡಂಕನಕಲ್-14, ಗೌರಿಪುರ-15, ಹುಲಿಹೈದರ್-23, ಕರಡೋಣ-19, ನವಲಿ-25, ಮುಸಲಾಪುರ-20, ಜೀರ್ಹಾಳ-13, ಬಸರಿಹಾಳ-13 ಸೇರಿದಂತೆ ಒಟ್ಟು 196 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು  ತಿಳಿಸಿದ್ದಾರೆ.

Please follow and like us:
error