ಬೆಂಗಳೂರು : ಎಪಿಎಂಸಿ ಕಾಯ್ದೆ, ಭೂಸುಧಾರಣೆ ಕಾಯ್ದೆ ತಿದ್ದುಪಡಿಗಳಿಂದ ರೈತರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ನಾನು ರೈತರ ಮಗನಾಗಿ, ರೈತರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಅನ್ನ ಕೊಡುವ ಅನ್ನದಾತನಿಗೆ ಕಿಂಚಿತ್ತೂ ತೊಂದರೆಯಾಗದಂತೆ, ನಾಡಿನ ಅನ್ನದಾತರ ಉತ್ತಮ ಭವಿಷ್ಯಕ್ಕಾಗಿ ಸಾಕಷ್ಟು ಚರ್ಚೆಮಾಡಿ ತಿದ್ದುಪಡಿ ತರಲಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು
ಭೂಸುಧಾರಣೆ ಕಾಯ್ದೆಯಡಿ ನೀರಾವರಿ ಭೂಮಿ ಖರೀದಿಗೆ ಅವಕಾಶ ನೀಡಿಲ್ಲ. ಒಂದು ಕುಟುಂಬ 54 ಎಕರೆ ಭೂಮಿ ಮಾತ್ರ ಖರೀದಿಸಬಹುದು. 22 ಲಕ್ಷ ಭೂಮಿ ಸಾಗುವಳಿಯಾಗದೆ ಬಂಜರಾಗಿದೆ. ಈ ತಿದ್ದುಪಡಿಯಿಂದ ಯಾರು ಬೇಕಾದರೂ ಕೃಷಿ ಮಾಡಬಹುದು. ಹಾಗೆಯೇ, ಕೈಗಾರಿಕೆಯೂ ಅಗತ್ಯವಿದೆ. ಕೃಷಿ ಇಲ್ಲದ ಭೂಮಿಯಲ್ಲಿ ಕೈಗಾರಿಕೆ ಮಾಡಿದರೆ ಉದ್ಯೋಗ ಸೃಷ್ಟಿಯಾಗುತ್ತದೆ.
ನೀರಾವರಿ ಜಮೀನು ನೀರಾವರಿಗೇ ಮೀಸಲು. ಪರಿಶಿಷ್ಟ ಜಾತಿ, ವರ್ಗಗಳ ಭೂಮಿ ಖರೀದಿ ಅವಕಾಶ ಇಲ್ಲ. ಸಣ್ಣ, ಅತಿಸಣ್ಣ ರೈತರಿಗೆ ಬಾಧಕವಾಗದಂತೆ ಎಚ್ಚರವಹಿಸಿದ್ದೇವೆ. ಬರಡು ಭೂಮಿಯಲ್ಲಿ ಕೈಗಾರಿಕೆೆ ಮಾಡಲು ಅಡ್ಡಿಯಿಲ್ಲ. ರೈತ ಸಂಘಟನೆಗಳಿಗೆ ನನ್ನ ಕಳಕಳಿಯ ಮನವಿ – ಅನವಶ್ಯಕವಾಗಿ ರೈತರನ್ನು ಗೊಂದಲಕ್ಕೆ ದೂಡಬೇಡಿ. ನನ್ನ ಬಳಿ ಬಂದು ಚರ್ಚೆ ಮಾಡಿ ಎಂದು ಹೇಳಿದ್ದಾರೆ.