ಎನ್‌ಡಿಎ ಸರಕಾರದ 2019-20ರ ಬಜೆಟ್ ಮುಖ್ಯಾಂಶಗಳು….

courtesy : net

ಹೊಸದಿಲ್ಲಿ, ಫೆ.1: ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ ಎನ್‌ಡಿಎ ಸರಕಾರದ 2019-20ರ ಬಜೆಟ್ ಮುಖ್ಯಾಂಶಗಳು.

*ಆದಾಯ ತೆರಿಗೆ ಪಾವತಿದಾರರಿಗೆ ರಿಲೀಫ್, ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 5 ಲಕ್ಷ ರೂ.ಗೆ ಏರಿಕೆ. 5 ಲಕ್ಷ ರೂ.ಆದಾಯವಿರುವವರು ತೆರಿಗೆಯಿಂದ ಮುಕ್ತ.

*ಉದ್ಯೋಗ ಖಾತ್ರಿ ಯೋಜನೆಗೆ 60,000 ಕೋ.ರೂ. ಮೀಸಲು, ಅಗತ್ಯವೆನಿಸಿದರೆ ಮತ್ತಷ್ಟು ಹೆಚ್ಚಳ.

*ನೋಟು ರದ್ದತಿ ಬಳಿಕ ಕಪ್ಪು ಹಣ ಸಂಗ್ರಹ ಅನಾವರಣ, 1.30 ಲಕ್ಷ ಕೋಟಿ ರೂ. ಅಘೋಷಿತ ಆದಾಯ ಪತ್ತೆ. 3.38 ಲಕ್ಷ ಶೆಲ್ ಕಂಪೆನಿಗಳು ರದ್ದು.

*ಸಂಚಾರಿ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗೆ ಕ್ರಮ, ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕೆ ಕ್ರಮ

*ಸಾಗರಮಾಲಾ ಯೋಜನೆ ಮೂಲಕ ಹೊಸ ಅವಕಾಶ

*ಗಗನ ಯಾನ ಯೋಜನೆ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಸಾಧನೆ

*ರಾಷ್ಟ್ರೀಯ ಶಿಕ್ಷಣ ಯೋಜನೆಗೆ 38,572 ಕೋ.ರೂ. ಮೀಸಲು

*ಎಸ್‌ಟಿ ವರ್ಗಕ್ಕೆ 50,000 ಕೋ.ರೂ., ಎಸ್‌ಸಿ ವರ್ಗಕ್ಕೆ 76,000 ಕೋ.ರೂ. ಅನುದಾನ

* ಉಳಿತಾಯ ಯೋಜನೆಗಳ ಹೂಡಿಕೆಗೆ ತೆರಿಗೆ ವಿನಾಯಿತಿ.

*ಗೃಹ ಸಾಲ 2 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ

* ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರ ಖಾತೆಗೆ ನೇರವಾಗಿ ವಾರ್ಷಿಕ 6,000 ರೂ.ವರ್ಗಾವಣೆ. ಮೂರು ಹಂತಗಳಲ್ಲಿ ರೈತರಿಗೆ ಹಣ ತಲುಪಲಿದೆ.

*2 ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಸೌಲಭ್ಯ

*ಕಿಸಾನ್ ಸಮ್ಮಾನ್ ಯೋಜನೆ 12 ಕೋಟಿ ರೈತರಿಗೆ ಲಾಭ, ಯೋಜನೆಗೆ 75,000 ಕೋ.ರೂ. ಮೀಸಲು

* ಪಶುಪಾಲನೆ, ಮೀನುಗಾರಿಕೆ ಯೋಜನೆಗೆ 700 ಕೋ.ರೂ.

*ಜಾನುವಾರು ಸಾಕಣೆಗೆ ಸಂಪೂರ್ಣ ನೆರವು

* ರೈತರ ಬೆಂಬಲ ಬೆಲೆ ಕನಿಷ್ಠ 1.5ರಷ್ಟು ಹೆಚ್ಚಳ

*ಬೀದಿಬದಿ ವ್ಯಾಪಾರಿ, ರಿಕ್ಷಾವಾಲಾಗೆ ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಪ್ರಧಾನಮಂತ್ರಿ ಶ್ರಮಯೋಗಿ ಮಂದಾನ್ ಪಿಂಚಣಿ ಯೋಜನೆ

*ಪ್ರತಿ ತಿಂಗಳು 100 ರೂ.ಕಟ್ಟುವ ಮೂಲಕ ಯೋಜನೆಗೆ ನೊಂದಾಯಿಸಿಕೊಳ್ಳಬಹುದು. 60 ವರ್ಷದ ಬಳಿಕ ಪ್ರತಿ ತಿಂಗಳು 3,000 ರೂ.ಪಿಂಚಣಿ ಸೌಲಭ್ಯ

*ರಕ್ಷಣಾ ವಲಯಕ್ಕೆ 3 ಲಕ್ಷ ಕೋಟಿ. ರೂ.ಗೂ ಅಧಿಕ ಮೊತ್ತ ಮೀಸಲು

*ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಮೊಬೈಲ್ ತಯಾರಿಕೆ

* ಮೊಬೈಲ್ ಡಾಟಾ ಬಳಕೆ ಶೇ.50ರಷ್ಟು ಹೆಚ್ಚಳ

* ತೆರಿಗೆ ಪಾವತಿಗೆ 24 ಗಂಟೆ ಆನ್‌ಲೈನ್ ಸೇವೆ

*260 ಮೊಬೈಲ್ ಉತ್ಪಾದನಾ ಕಂಪೆನಿಗಳು ಆರಂಭವಾಗಲಿವೆ

*ಶೇ.99.94ರಷ್ಟು ತೆರಿಗೆ ಪಾವತಿ

*ಗೋವುಗಳ ರಕ್ಷಣೆಗಾಗಿ ‘ರಾಷ್ಟ್ರೀಯ ಕಾಮಧೇನು ಆಯೋಗ’

2020ರ ವೇಳೆ ನವಭಾರತ ನಿರ್ಮಾಣ

* ವಿದೇಶಿ ನೇರ ಹೂಡಿಕೆ(ಎಫ್‌ಡಿಎ) ಪ್ರಮಾಣ ಹೆಚ್ಚಳ

* ರೇರಾ ಕಾಯ್ದೆ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ

*ಕಲ್ಲಿದ್ದಲು, ತರಂಗಾಂತರ ಸರಿಯಾದ ಬಳಕೆ

*ಎಸ್‌ಸಿ-ಎಸ್ಟಿ ಮೀಸಲಾತಿ ಅಭಿವೃದ್ಧಿ

*ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣ

* ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಅಡಿ ರಸ್ತೆ ನಿರ್ಮಾಣ

*ವಿದ್ಯುತ್ ಉಳಿತಾಯಕ್ಕಾಗಿ ಎಲ್‌ಇಡಿ ಬಲ್ಬ್

*ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ

*22ನೇ ಏಮ್ಸ್ ಹರ್ಯಾಣದಲ್ಲಿ ನಿರ್ಮಾಣವಾಗಲಿದೆ

*50 ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಮೂಲಕ ಚಿಕಿತ್ಸೆ

ಅಸಂಘಟಿತ ವರ್ಗದ  ಕಾರ್ಮಿಕರಿಗೆ ಖಾತರಿ ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ ತಮ್ಮ ಮೊದಲ ಬಜೆಟ್ ಭಾಷಣದಲ್ಲಿ ವಿತ್ತ ಸಚಿವ ಪಿಯೂಶ್ ಗೋಯೆಲ್ ಹೇಳಿದ್ದಾರೆ.

ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಂಧನ್ ಎಂಬ ಹೆಸರಿನ ಈ ಪಿಂಚಣಿ ಯೋಜನೆಯನ್ವಯ ಮಾಸಿಕ 100 ರೂ. ಪಾವತಿಸಿದ  ಅಸಂಘಟಿತ ವರ್ಗದ ಕಾರ್ಮಿಕರಿಗೆ ಅವರು 60 ವರ್ಷ ದಾಟಿದ ನಂತರ ಮಾಸಿಕ 3,000 ರೂ. ಪಿಂಚಣಿ ದೊರೆಯಲಿದೆ ಎಂದು ಗೋಯೆಲ್ ತಿಳಿಸಿದರು.

ಈ ಯೋಜನೆ 10 ಕೋಟಿ ಕಾರ್ಮಿಕರಿಗೆ ಪ್ರಯೋಜನಕಾರಿಯಾಗಲಿದೆ ಹಾಗೂ ಮುಂದಿನ ಐದು ವರ್ಷಗಳಲ್ಲಿ ಜಗತ್ತಿನ ಅತ್ಯಂತ ದೊಡ್ಡ ಪಿಂಚಣಿ ಯೋಜನೆಯಾಗುವ ಸಾಧ್ಯತೆಯಿದೆ ಎಂದು  ಸಚಿವರು ಹೇಳಿದರು.

ಗ್ರಾಮಗಳ ಮೂಲಸತ್ವವನ್ನು ಸಂರಕ್ಷಿಸುವುದರ ಜತೆಗೆ ಗ್ರಾಮೀಣ ಭಾಗಗಳಲ್ಲಿ ನಗರ ಪ್ರದೇಶಗಳ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವರು, ಗ್ರಾಮೀಣ-ನಗರ ಪ್ರದೇಶಗಳ ನಡುವೆ ಇರುವ  ಅಂತರವನ್ನು ಕಡಿಮೆಗೊಳಿಸಿ `ಬಡವರಿಗೆ ದೇಶದ ಸಂಪತ್ತಿನ ಮೇಲೆ ಮೊದಲ ಹಕ್ಕು’ ಇರುವಂತೆ ಸರಕಾರ ಶ್ರಮಿಸುವುದು”, ಎಂದೂ ಅವರು ತಿಳಿಸಿದರು.

ಸ್ವಚ್ಛ ಭಾರತ ಮಿಷನ್ ಯಶಸ್ಸಿನ ಬಗ್ಗೆ ಮಾತನಾಡಿದ ಸಚಿವರು  ಭಾರತದ ಶೇ 98ರಷ್ಟು ಗ್ರಾಮಗಳಲ್ಲಿ ನೈರ್ಮಲ್ಯ  ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಹಾಗೂ 5.4 ಲಕ್ಷ ಗ್ರಾಮಗಳು ಬಯಲು ಶೌಚ ಮುಕ್ತಗೊಂಡಿವೆ ಎಂದರು.

Please follow and like us:
error