ಎಕೋ ಬೈಕ್ ಅವಿಷ್ಕರಿಸಿದ ವಿದ್ಯಾರ್ಥಿ ಬಾಳೇಶ್ ಹಿರೇಮಠ

Koppal ಕರೋನಾದ ಖಾಲಿ ಸಮಯವನ್ನು ಸದುಪಯೋಗ ಪಡಿಸಿಕೊಂಡ ಬಾಲಕನೋರ್ವ ಎಲ್ಲರೂ ಮೆಚ್ಚುವಂತಹ ಅವಿಷ್ಕಾರ ಮಾಡಿದ್ದಾನೆ. ಕೊಪ್ಪಳ ನಗರದ ಶ್ರೀ ಶಿವಶಾಂತವೀರ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಬಾಳೇಶ್ ಹಿರೇಮಠ್ ವೇಸ್ಟ್ ಮಟಿರಿಯಲ್ ಬಳಸಿಕೊಂಡು ಎಕೊ ಬೈಕ್ ತಯಾರಿಸಿದ್ದಾನೆ. ಚಿಕ್ಕಂದಿನಿಂದ ಸಂಶೋಧನೆ ಬಗ್ಗೆ ಆಸಕ್ತಿ ಹೊಂದಿರುವ ಬಾಲಕ ಬಾಳೇಶ್ ಹಿರೇಮಠ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳದೇ ಸಮಯ ಸದ್ಬಳಕೆ ಮಾಡಿಕೊಂಡಿದ್ದಾನೆ. ಕೆಟ್ಟಿರುವ ಲ್ಯಾಪ್‌ಟಾಪ್ನ ಬ್ಯಾಟರಿ, ಸೆಲ್, ವೈಯರ್ ಬಳಸಿ ಬೈಕ್ ಸೃಷ್ಟಿಸಿದ್ದಾನೆ.

ಗುಜರಿ ಅಂಗಡಿಯವರ ಸ್ನೇಹ ಸಂಪಾದಿಸಿ ಅಲ್ಲಿನ ತ್ಯಾ

ಜ್ಯಗಳಿಂದ ನಾನಾ ಪರಿಕರ ತಯಾರಿಸಿದ್ದಾನೆ ಈ ಬಾಲ ವಿಜ್ಞಾನಿ. ತಂದೆ ವಿಶ್ವನಾಥ ಹಿರೇಮಠ್ ಪುತ್ರನ ಆಸಕ್ತಿಗೆ ನೀರೆರೆದು ಪ್ರೋತ್ಸಾಹಿಸಿದ್ದರಿಂದ ಫೆ.28 ರಂದು ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಎಕೊ ಬೈಕ್ ಪ್ರದರ್ಶನ ಮಾಡಿದ್ದಾನೆ.ಗಂಟೆಗೆ 35 ಕಿಮೀ ವೇಗವಾಗಿ ಚಲಿಸುವ ಎಕೊ ಬೈಕ್ ಕಂಡು ಶಾಲಾ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.ಕಡಿಮೆ ಸಮಯದಲ್ಲಿ, ಕಡಿಮೆ ಖರ್ಚಿನಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಹೋಗಬಹುದು. ಇದರಿಂದ ಪರಿಸರಕ್ಕೂ ಇಲ್ಲ ಹಾನಿಯಿಲ್ಲ ವಿದ್ಯಾರ್ಥಿಯ ಸಾಧನೆಗೆ ಪ್ರಾಂಶುಪಾಲರಾದದ ಪ್ರವೀಣ್ ಯರಗಟ್ಟಿ, ಶಿಕ್ಷಕರು, ಪಾಲಕರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Please follow and like us:
error